ವಾಷಿಂಗ್ಟನ್: ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಇನ್ನೇನು ಹೊರಬೀಳಲಿದೆ. ಈಗಿನ ಟ್ರೆಂಡ್ ಪ್ರಕಾರ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಡೊನಾಲ್ಡ್ ಟ್ರಂಪ್ ಗೆಲುವು ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿವಿಧ ರೀತಿಯ ಮೀಮ್ಸ್ಗಳು ಹರಿದಾಡಿವೆ. ಫಲಿತಾಂಶದ ಬಗ್ಗೆ ಹಾಸ್ಯಮಯವಾದ, ವಿಡಂಬನಾತ್ಮಕ ಪೋಸ್ಟ್ಗಳನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಮತ್ತು ಅಮೆರಿಕ ಚುನಾವಣೆಯನ್ನು ಹೋಲಿಸಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ‘ಮೋಟಾ ಭಾಯಿ(ಅಮಿತ್ ಶಾ) ಮಹಾರಾಷ್ಟ್ರಕ್ಕೆ ಹಿಂದಿರುಗುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಅಮೆರಿಕ ಚುನಾವಣೆ ಮುಗಿಸಿ ಅಮಿತ್ ಶಾ ಅವರು ಸ್ಕೂಟರ್ನಲ್ಲಿ ಮಹಾರಾಷ್ಟ್ರಕ್ಕೆ ಹಿಂದಿರುಗುತ್ತಿರುವಂತೆ ತೋರಿಸುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಟ್ರಂಪ್ ‘ಮೆಕ್ಡೊನಾಲ್ಡ್’ ಭೇಟಿಯ ಫೋಟೊವನ್ನು ಹಂಚಿಕೊಂಡಿರುವ ಇನ್ನೊಬ್ಬ ಬಳಕೆದಾರ, ‘ಮೆಕ್ಡೊನಾಲ್ಡ್ನ ಮಾಜಿ ಸಿಬ್ಬಂದಿ ಇದೀಗ ಅಮೆರಿಕದ ಅಧ್ಯಕ್ಷರಾಗಿದ್ದಾರೆ’ ಎಂದು ಕಾಲೆಳೆದಿದ್ದಾರೆ.

ಅಲ್ಲದೇ ಬಾಲಿವುಡ್ನ ಜನಪ್ರಿಯ ಸಿನಿಮಾ ಪದ್ಮಾವತ್ನ ‘ಕಾಲಿಬಲಿ’ ಹಾಡನ್ನು ಎಡಿಟ್ ಮಾಡಿ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, ವೆಲ್ಕಮ್ ಬ್ಯಾಕ್ ಟ್ರಂಪ್ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್ ಮತ್ತು ಎಲಾನ್ ಮಸ್ಕ್ ನೃತ್ಯ ಮಾಡುತ್ತಿರುವ ವಿಡಿಯೊಗಳು, ವಿವಿಧ ಕಾರ್ಟೂನ್ ಪಾತ್ರಗಳನ್ನು ಬಳಸಿ ಮಾಡಿದ ಹಾಸ್ಯಮಯವಾದ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.