ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರಾಅವರಿಗೆ ನೆಟ್ಟಿಗರೊಬ್ಬರು ನೀವು ಅನಿವಾಸಿ ಭಾರತೀಯರೇ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಆನಂದ್ ಮಹೀಂದ್ರಾ ಅವರು ಖಡಕ್ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗೆ ಆನಂದ್ ಮಹೀಂದ್ರಾಅಮೆರಿಕದ ‘ಮ್ಯಾನ್ಹಟನ್ ಸಿಟಿ ಹಬ್ಬದ‘ ಆಚರಣೆಯ ಫೋಟೊಗಳು ಮತ್ತು ವಿಡಿಯೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬನೀವು ಎನ್ಆರ್ಐ (NRI)? ಎಂದು ಪ್ರಶ್ನೆ ಮಾಡಿದ್ದರು.

ಈ ಪ್ರಶ್ನೆಗೆ ಹಲವಾರು ಜನರು, ಫಾಲೋವರ್ಗಳು ನೀವು ಇದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲಎಂಬ ಮಾತುಗಳನ್ನು ಹೇಳಿದ್ದರು. ಆದರೆ ಆನಂದ್ ಮಹೀಂದ್ರಾಆ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಅಮೆರಿಕದಲ್ಲಿ ಇರುವ ಕುಟುಂಬವನ್ನು ನಾನು ಭೇಟಿ ಮಾಡುತ್ತೇನೆ. ಆದರೆ ನನ್ನ ಹೃದಯ ಮಾತ್ರ ಎಚ್ಆರ್ಐ (HRI: ಹೃದಯ ಯಾವಾಗಲೂ ಭಾರತದಲ್ಲಿ ನೆಲೆಸಿದೆ) ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್ ಮಹೀಂದ್ರಾಅವರ ಪ್ರತಿಕ್ರಿಯೆಗೆ ಸಾವಿರಾರುನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ಅನಿವಾಸಿ ಭಾರತೀಯರು ‘ನಾವು ಕೂಡು ಎಚ್ಆರ್ಐ‘ ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾಅವರು ಯುವಕರಿಗೆ ಸ್ಫೂರ್ತಿ ತುಂಬುವಂತಹ ಚಿತ್ರಗಳು, ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.