ನವದೆಹಲಿ: ಮಾರ್ಚ್ನಲ್ಲಿ ಭಾರತದಲ್ಲಿ 18 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸ್ಆ್ಯಪ್ ತಿಳಿಸಿದೆ.

ಫೆಬ್ರುವರಿಯಲ್ಲಿ 14 ಲಕ್ಷ ಖಾತೆಗಳನ್ನು ವಾಟ್ಸ್ಆ್ಯಪ್ ನಿಷೇಧಿಸಿತ್ತು.

‘2021ರ ಐಟಿ ನಿಯಮಗಳ ಪ್ರಕಾರ, 2022ರ ಮಾರ್ಚ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದೇವೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳು, ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಈ ವರದಿಯಲ್ಲಿ ಮಾಹಿತಿ ನೀಡಿದ್ದೇವೆ. ನಿಂದನೆಯನ್ನು ತಡೆಯಲು ವಾಟ್ಸ್ಆ್ಯಪ್ ಅಳವಡಿಸಿರುವ ಕ್ರಮಗಳ ಬಗ್ಗೆಯೂ ಉಲ್ಲೇಖಿಸಿದ್ದೇವೆ. 18 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ’ ಎಂದು ವಾಟ್ಸ್ಆ್ಯಪ್ ವಕ್ತಾರರು ತಿಳಿಸಿದ್ದಾರೆ.

ಗ್ರೂಪ್ಗಳಿಗೂ ಒಂದು ಗುಂಪು; ವಾಟ್ಸ್ಆ್ಯಪ್ನ ಹೊಸ 'ಕಮ್ಯುನಿಟಿ'

‘ನಿಂದನೆ ಪತ್ತೆ ವಿಧಾನ’ ಹಾಗೂ ‘ರಿಪೋರ್ಟ್’ ಆಯ್ಕೆಯ ಮೂಲಕ ಬಳಕೆದಾರರು ನೀಡಿರುವ ನಕಾರಾತ್ಮಕ ಅಭಿಪ್ರಾಯಗಳನ್ನು ಪರಿಗಣಿಸಿ ಮಾರ್ಚ್ 1ರಿಂದ 31ರ ನಡುವಣ ಅವಧಿಯಲ್ಲಿ ಖಾತೆಗಳನ್ನು ನಿಷೇಧಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಳಕೆದಾರರ ಸುರಕ್ಷತೆಗಾಗಿ ಕೃತಕ ಬುದ್ಧಿಮತ್ತೆ ಹಾಗೂ ಇತರ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದೂ ವಾಟ್ಸ್ಆ್ಯಪ್ ತಿಳಿಸಿದೆ.

2021ರ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರತಿ ತಿಂಗಳು ನಿಯಮ ಅನುಸರಣೆಗೆ ಸಂಬಂಧಿಸಿದ ವರದಿ ಬಿಡುಗಡೆ ಮಾಡಬೇಕಿದೆ.

ವಾಟ್ಸ್ಆ್ಯಪ್ ಪಾವತಿ ಸೇವೆ ವಿಸ್ತರಣೆಗೆ ಎನ್ಪಿಸಿಐ ಒಪ್ಪಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.