ಜಾಗತಿಕವಾಗಿಪ್ರತಿವರ್ಷ ಜೂನ್ 30ರಂದುವಿಶ್ವ ಸಾಮಾಜಿಕ ಜಾಲತಾಣ (social media) ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ.

ಸಾಮಾಜಿಕ ಸಂವಹನ ಉದ್ದೇಶಕ್ಕಾಗಿ ಹುಟ್ಟಿಕೊಂಡಿದ್ದ ಸ್ಥಳೀಯ ವೇದಿಕೆಗಳು ರೂಪಾಂತರಗೊಂಡು ಸಾಮಾಜಿಕ ಜಾಲತಾಣಗಳೆಂಬ ದೊಡ್ಡ ವಾಣಿಜ್ಯ ಉದ್ಯಮಗಳಾಗಿವೆ. ವಿಶ್ವದಲ್ಲಿ ಸಾವಿರಾರು ಸಾಮಾಜಿಕ ಜಾಲತಾಣಗಳಿದ್ದರೂ ಕೆಲವೇ ಕೆಲವು ಮಾತ್ರ ಜನಪ್ರಿಯವಾಗಿವೆ.

1997ರಲ್ಲಿ ವೈನ್ರಿಚ್ ಎಂಬುವರು ಸಿಕ್ಸ್ ಡಿಗ್ರೀಸ್ ಎಂಬ ಸಾಮಾಜಿಕ ಜಾಲತಾಣವನ್ನು ಪ್ರಾರಂಭ ಮಾಡಿದರು. ಇದನ್ನು ಮೊದಲಿಗೆ ಸ್ನೇಹಿತರು, ಕುಟುಂಬದ ಸದಸ್ಯರು ಬಳಕೆ ಮಾಡುತ್ತಿದ್ದರು. ನಂತರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ ಈ ಸಾಮಾಜಿಕ ಜಾಲತಾಣ 10 ಲಕ್ಷದವರೆಗೂ ಬಳಕೆದಾರರನ್ನು ಹೊಂದಿತ್ತು. ಕಾರಣಾಂತರಗಳಿಂದ ಈ ವೆಬ್ 2001ರಲ್ಲಿ ಮುಚ್ಚಲ್ಪಟ್ಟಿತು.

ನಂತರದ ದಿನಗಳಲ್ಲಿ 2010, ಜೂನ್ 30ರಂದು ಮಾರ್ಷಬಲ್ ಎಂಬುವರುವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಅಂದಿನಿಂದ ಈ ದಿನವನ್ನು ಜಾಗತಿಕವಾಗಿ ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಉದಯಪುರ ಟೈಲರ್ ಹಂತಕನಿಗೆ ಪಾಕಿಸ್ತಾನದ ನಂಟು: ರಾಜಸ್ಥಾನ ಪೊಲೀಸ್ ಮುಖ್ಯಸ್ಥ

ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಲಿಂಕ್ಡ್ಇನ್, ಸ್ನ್ಯಾಪ್ಚಾಟ್, ಪಿನ್ಟ್ರೆಸ್ಟ್, ಸ್ಕೈಪ್ ನಂತಹ ಅನೇಕ ಪ್ಲಾಟ್ಫಾರ್ಮ್ಗಳು ಮಾಹಿತಿಯ ಮೂಲಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ, ಅವುಗಳ ಮಹತ್ವ, ಸಾಧಕ–ಬಾಧಕಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನದ ಮಹತ್ವವಾಗಿದೆ.

ಜಾಗತಿಕವಾಗಿ ಕೆಲವು ಸಂಘ ಸಂಸ್ಥೆಗಳು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸಲು ಶಾಲಾ, ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆಗಳು ಹಾಗೂ ಉದ್ಯೋಗದ ಸ್ಥಳಗಳಲ್ಲಿ ವಿಚಾರಣ ಸಂಕಿರಣಗಳು, ಚರ್ಚೆಗಳನ್ನು ಆಯೋಜನೆ ಮಾಡಲಾಗುತ್ತದೆ.

ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯ ವಿವರ –2022 ( ಬ್ಲಾಗ್ಲೀಸ್ಟ್ ಮಾಹಿತಿ ಪ್ರಕಾರ)

*ವಾಟ್ಸಾಪ್ -56 ಕೋಟಿ
*ಯೂಟ್ಯೂಬ್ -52 ಕೋಟಿ
*ಫೇಸ್ಬುಕ್ -49 ಕೋಟಿ
*ಇನ್ಸ್ಟಾಗ್ರಾಮ್- 50.3 ಕೋಟಿ
*ಟ್ವಿಟರ್ -29.5 ಕೋಟಿ
*ಲಿಂಕ್ಡ್ಇನ್ –24.4
*ಪಿನ್ಟ್ರೆಸ್ಟ್ –22.9

ಇದನ್ನೂ ಓದಿ:ಫ್ರಾನ್ಸ್ ಪ್ರವಾಸದಲ್ಲಿ ಕಳೆದುಹೋದ ಜಾಹ್ನವಿ ಕಪೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.