ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿನದ ಮಟ್ಟಿಗೆ ಡೆಲಿವರಿ ಬಾಯ್ ಆದ Zomato ಸಿಇಒ; ಪತ್ನಿಯೊಂದಿಗೆ ಹೊರಟ ದೀಪಿಂದರ್‌

Published : 5 ಅಕ್ಟೋಬರ್ 2024, 14:38 IST
Last Updated : 5 ಅಕ್ಟೋಬರ್ 2024, 14:38 IST
ಫಾಲೋ ಮಾಡಿ
Comments

ನವದೆಹಲಿ: ಗ್ರಾಹಕರಿಗೆ ಅಗತ್ಯದ ಆಹಾರ ಪದಾರ್ಥಗಳನ್ನು ಮನೆಬಾಗಿಲಿಗೆ ತಲುಪಿಸುವ ಝೊಮ್ಯಾಟೊ (Zomato) ಸಿಇಒ ದೀಪಿಂದರ್ ಗೋಯಲ್ ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆಗಿ ದೆಹಲಿಯ ಸೈಬರ್‌ ಸಿಟಿ ಪ್ರದೇಶಗಳಲ್ಲಿ ಓಡಾಡಿದ್ದಾರೆ.

ಹವಾನಿಯಂತ್ರಿತ ಕೊಠಡಿಯನ್ನು ತೊರೆದು ತಮ್ಮ ಪತ್ನಿ ಗಿಯಾ ಗೋಯಲ್ (ಗ್ರೇಸಿಯಾ ಮುನೋಜ್‌) ಅವರೊಂದಿಗೆ ಬೈಕ್ ಏರಿದ ಗೋಯಲ್, ಮೊಬೈಲ್ ಮೂಲಕ ಗ್ರಾಹಕರ ಮನೆಬಾಗಿಲು ಹುಡುಕಿಕೊಂಡು ಹೋಗುವ ದೃಶ್ಯಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ನಮ್ಮ ಗ್ರಾಹಕರಿಗೆ ಆಹಾರ ವಿತರಿಸುವುದನ್ನು ಸಂಭ್ರಮಿಸುತ್ತಿದ್ದೇನೆ. ಜತೆಗೆ ಬೈಕ್ ಚಾಲನೆಯೂ ಮಜವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ 33 ಸಾವಿರ ಲೈಕ್‌ಗಳು ಸಿಕ್ಕಿವೆ. 

ಗೋಯಲ್ ಅವರ ಈ ಪ್ರಯತ್ನಕ್ಕೆ ಕೆಲವರು ಮೆಚ್ಚುಗೆಯನ್ನು, ಇನ್ನೂ ಕೆಲವರು ಟೀಕೆಗಳನ್ನೂ ವ್ಯಕ್ತಪಡಿಸಿದ್ದಾರೆ. ಗೋಯಲ್ ಅವರನ್ನು ‘ಅತ್ಯಂತ ಸರಳ’ ಎಂದು ಕೆಲ ಫಾಲೋವರ್‌ಗಳು ಹೇಳಿದ್ದಾರೆ.

‘ಶ್ರೀಮಂತರು, ಹೈ ಪ್ರೊಫೈಲ್ ಮಂದಿ ಇರುವ ಸೈಬರ್‌ ಸಿಟಿಯನ್ನು ಆಯ್ಕೆ ಮಾಡಿಕೊಳ್ಳುವ ಬದಲು, ಜನಸಾಮಾನ್ಯರು ಇರುವ ಗುರುಗ್ರಾಮ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು’ ಎಂದಿದ್ದಾರೆ.

‘ನಿಮ್ಮ ಈ ಪ್ರಯತ್ನದ ಬಗ್ಗೆ ಗೊತ್ತಿಲ್ಲ. ಆದರೆ ಆಹಾರ ಡೆಲಿವರಿ ಮಾಡಲು ಜೊಮಾಟೊ, ಗ್ರಾಹಕರಿಂದ ಪಡೆಯುವ ಶುಲ್ಕವನ್ನು ನೀವು ಹೆಚ್ಚು ಇಷ್ಟಪಡುತ್ತೀರಿ ಎಂದಷ್ಟೇ ಬಲ್ಲೆ. ಒಳ್ಳೆಯ ಪ್ರಚಾರದ ಸ್ಟಂಟ್‌ ಇದು’ ಎಂದು ಟೀಕಿಸಿದ್ದಾರೆ.

2008ರಲ್ಲಿ ಕಾರ್ಯಾರಂಭ ಮಾಡಿದ ಜೊಮಾಟೊದ ಸಹ ಸಂಸ್ಥಾಪಕರಲ್ಲಿ ದೀಪಿಂದರ್ ಗೋಯಲ್‌ ಅವರೂ ಒಬ್ಬರು. 2021ರಲ್ಲಿ ಜೊಮಾಟೊ ಐಪಿಒ ಆರಂಭಿಸುವ ಮೂಲಕ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು. ಸದ್ಯ ಕಂಪನಿಯು ₹1 ಲಕ್ಷ ಕೋಟಿ ಮೌಲ್ಯ ಹೊಂದಿದೆ. ಗೋಯಲ್ ಅವರ ಒಟ್ಟು ಆಸ್ತಿ ₹1,400 ಕೋಟಿಯಷ್ಟಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT