ಫೇಸ್ಬುಕ್ ಇಂಕ್ ಕಂಪನಿ ತನ್ನ ಜನಪ್ರಿಯ ಅಪ್ಲಿಕೇಷನ್ಗಳಾದ (ಆ್ಯಪ್)ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂಗೆ ಮರುನಾಮಕರಣ ಮಾಡುವ ಪ್ರಕ್ರಿಯೆ ಆರಂಭಿಸಿರುವುದು ಎಲ್ಲರಿಗೂ ತಿಳಿಸಿದೆ.ಎರಡೂ ಆ್ಯಪ್ಗಳು ತನ್ನ ಮಾಲೀಕತ್ವದ್ದಾಗಿವೆ ಎನ್ನುವುದನ್ನು ಸಾರುವುದೇ ಇದರ ಮೂಲ ಉದ್ದೇಶವಾಗಿದೆ.

ಈ ಪ್ರಕ್ರಿಯೆಯಲ್ಲಿ ವಾಟ್ಸ್ಆ್ಯಪ್ನಲ್ಲಿ ಕೆಲವು ಹೊಸ ವೈಶಿಷ್ಟ್ಯ ಸೇರಿಸುತ್ತಿದೆ. ಅದರಲ್ಲಿ ಮುಖ್ಯವಾಗಿರುವುದು ‘ಫೇಸ್ಬುಕ್ ಪೇ’ ಮತ್ತು ಹೈಡ್ ಮ್ಯೂಟೆಡ್ ಸ್ಟೇಟಸ್.

ಅರೆ, ವಾಟ್ಸ್ಆ್ಯಪ್ ಪೇ ಬರುತ್ತಿದೆ ಎನ್ನುವ ಸುದ್ದಿ ಇತ್ತಲ್ಲಾ ಎಂದು ಯೋಚಿಸಬೇಡಿ. ಅದಕ್ಕೆ ಬದಲಾಗಿ ಫೇಸ್ಬುಕ್ ತನ್ನ ಫೇಸ್ಬುಕ್ ಪೇ ಸೌಲಭ್ಯವನ್ನೇ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ನ ಬೇಟಾ ವರ್ಷನ್ 2.19.260ನಲ್ಲಿ ಈ ಸೌಲಭ್ಯ ಇರುವ ಸುಳಿವನ್ನೂ ನೀಡಿದೆ. ಇದು ವಾಟ್ಸ್ಆ್ಯಪ್ನ ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಅಥವಾ ಮರುನವೀಕರಣಗೊಳಿಸಲಿದೆ ಎಂದು ಹೇಳಿದೆ.

ಸದ್ಯಕ್ಕೆ ಭಾರತದಲ್ಲಿ ವಾಟ್ಸ್ಆ್ಯಪ್ ಪೇ ಪ್ರಾಯೋಗಿಕವಾಗಿ ಮಾತ್ರವೇ ಬಳಕೆಯಲ್ಲಿದೆ. ಪೂರ್ಣಪ್ರಮಾಣದ ಬಳಕೆ ಇನ್ನಷ್ಟೇ ಆರಂಭವಾಗಬೇಕಿದೆ. ಫೇಸ್ಬುಕ್ ಅಂದು ಕೊಂಡಂತೆ ನಡೆದರೆ, ಪೂರ್ಣಪ್ರಮಾಣದಲ್ಲಿ ಫೇಸ್ಬುಕ್ ಪೇ ಸೌಲಭ್ಯವೇ ಬಳಕೆಗೆ ಲಭ್ಯವಾದರೆ ಅಚ್ಚರಿ ಏನಿಲ್ಲ.

ಹೈಡ್ ಮ್ಯೂಟೆಡ್ ಸ್ಟೇಟಸ್: ವಾಟ್ಸ್ಆ್ಯಪ್ನ ಹೊಸ ಬೇಟಾ ವರ್ಷನ್ನಲ್ಲಿ ಮ್ಯೂಟ್ ಮಾಡಿರುವ ಸ್ಟೇಟಸ್ ಅನ್ನು ಹೈಡ್ ಮಾಡುವ ಆಯ್ಕೆ ಲಭ್ಯವಿದೆ.ಸದ್ಯಕ್ಕೆ,ಯಾರದ್ದಾದರೂ ಸ್ಟೇಟಸ್ ಅಪ್ಡೇಟ್ ನೋಡುವ ಇಷ್ಟ ಇಲ್ಲ ಎಂದಾದರೆ ಆ ಸ್ಟೇಟಸ್ ಮೇಲೆ ಲಾಂಗ್ ಪ್ರೆಸ್ ಮಾಡಿದರೆ ಮ್ಯೂಟ್ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಆ ನಿರ್ದಿಷ್ಟ muted states ಎಂದು ಪ್ರತ್ಯೇಕ ವಿಭಾಗದಲ್ಲಿ ಬ್ಲರ್ ಆಗಿ ಕಾಣಿಸಿಕೊಳ್ಳುತ್ತದೆ. ಆದರೆ, ಹೊಸ ವೈಶಿಷ್ಟದಲ್ಲಿ ಅಲ್ಲಿಂದಲೂ ಹೈಡ್ ಮಾಡುವ ಆಯ್ಕೆ ಲಭ್ಯವಾಗಲಿದೆ.

ಒಟ್ಟಿನಲ್ಲಿ ‘Whatsapp from Facebook‘ ಎನ್ನುವುದು ಜನಸಾಮಾನ್ಯರ ಮನದಲ್ಲಿ ಬಲವಾಗಿ ಅಚ್ಚೊತ್ತಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಫೇಸ್ಬುಕ್ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.