ಕೊರೊನಾ ಆರಂಭವಾದಾಗಿನಿಂದ ಪದೇ ಪದೇ ಕೈ ತೊಳೆಯುವುದು ಬದುಕಿನ ಭಾಗವಾಗಿದೆ. ಮನೆಯ ಒಳಗೇ ಇದ್ದಾಗಲೂ ನೀರಿನ ನಲ್ಲಿ, ಕಸದ ಡಬ್ಬಿ ಹೀಗೆ ಏನೇ ಮುಟ್ಟಿದರೂ ಕೈ ತೊಳೆದು ಅಭ್ಯಾಸವಾಗಿದೆ. ಅದು ಅನಿವಾರ್ಯವೂ ಹೌದು. ಈ ‘ನ್ಯೂ ನಾರ್ಮಲ್’ ಬದುಕಿನಲ್ಲಿ ‘ನೋ ಟಚ್’ ಕೂಡ ಬದುಕಿನ ಭಾಗವಾಗಬೇಕಿದೆ. ಮನೆಯಲ್ಲೇ ಹೆಚ್ಚು ಸಮಯ ಕಳೆಯುವ ಈ ಸಮಯದಲ್ಲಿ ಕೆಲವು ಅವಶ್ಯಕ ವಸ್ತುಗಳನ್ನು ಸ್ಪರ್ಶವಿರದೇ ಬಳಸಬಹುದಾದ ವಸ್ತುಗಳನ್ನಾಗಿಸಿಕೊಳ್ಳುವುದು ಉತ್ತಮ. ಸ್ವಯಂಚಾಲಿತವಾಗಿರುವ ಅವುಗಳನ್ನು ಮುಟ್ಟದೇ ಬಳಸಬಹುದು. ಅಲ್ಲದೇ ಮನೆಗೆ ಕೂಡ ಹೊಸ ನೋಟ ಸಿಗುತ್ತದೆ.

ಹ್ಯಾಂಡ್ ಫ್ರೀ ಡಿಸ್ಪೆನ್ಸರ್

ಹಲವರು ಮನೆಯಲ್ಲಿ ಸೋಪ್ ಡಿಸ್ಪೆನ್ಸರ್ಗಳನ್ನು ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಹ್ಯಾಂಡ್ ಫ್ರೀ ಡಿಸ್ಪೆನ್ಸರ್ ಬಳಸುವುದು ಒಳಿತು. ಸ್ವಯಂಚಾಲಿತವಾಗಿರುವ ಇದನ್ನು ಬಳಸುವುದು ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ. ಮನೆಯಲ್ಲಿರುವ ಪ್ರತಿಯೊಬ್ಬರೂ ಡಿಸ್ಪೆನ್ಸರ್ ಮುಟ್ಟಿ ಬಳಕೆ ಮಾಡುವುದು ಸುರಕ್ಷಿತವಲ್ಲ. ಈಗ ಸ್ಯಾನಿಟೈಸರ್ ಎಂಬುದು ನಮ್ಮ ಜೀವನದ ಭಾಗವಾಗಿದೆ. ಸ್ಯಾನಿಟೈಸರ್ ಬಳಕೆಗೂ ಹ್ಯಾಂಡ್ ಫ್ರಿ ಡಿಸ್ಪೆನ್ಸರ್ ಬಳಸಬಹುದು.

ಸ್ವಯಂಚಾಲಿತ ಕೊಳಾಯಿ

ಅಡುಗೆಮನೆ ಹಾಗೂ ಬಾತ್ರೂಂಗಳಲ್ಲಿ ಇರುವ ಕೊಳಾಯಿಗಳು ವೈರಸ್ ಹಾಗೂ ರೋಗಾಣುಗಳನ್ನು ಬೇಗ ಹರಡುತ್ತವೆ. ಆದರೆ ಅವುಗಳನ್ನು ಪದೇ ಪದೇ ಬಳಸದೆ ವಿಧಿಯಿಲ್ಲ. ಆ ಕಾರಣಕ್ಕೆ ಸ್ವಯಂಚಾಲಿತ ಕೊಳಾಯಿಗಳನ್ನು ಬಳಸುವುದು ಉತ್ತಮ. ಇವು ನೋಡಲು ಕೂಡ ಚೆನ್ನಾಗಿರುತ್ತವೆ ಅಲ್ಲದೇ ಅಡುಗೆಮನೆ ಹಾಗೂ ಬಾತ್ರೂಮ್ಗೆ ಐಷಾರಾಮಿ ನೋಟ ಸಿಗುವಂತೆ ಮಾಡುತ್ತವೆ. ಸುರಕ್ಷತೆಯ ದೃಷ್ಟಿಯಿಂದಲೂ ಇದು ಉತ್ತಮ.

ಸೆನ್ಸರ್ ಹೊಂದಿರುವ ಕಸದ ಡಬ್ಬಿ

ಮನೆಯಲ್ಲಿ ನಾವು ಹೆಚ್ಚು ಬಳಸುವ ವಸ್ತುಗಳಲ್ಲಿ ಕಸದ ಡಬ್ಬಿ ಕೂಡ ಒಂದು. ಇದರ ಬಳಕೆ ಮನೆಯಲ್ಲಿ ಅವಶ್ಯವೂ ಹೌದು. ಆದರೆ ಪದೇ ಪದೇ ಡಬ್ಬಿಯನ್ನು ಮುಟ್ಟವುದು ಸರಿಯಲ್ಲ. ಡಬ್ಬಿಯಲ್ಲಿ ಬೇಡದ ವಸ್ತುಗಳನ್ನು ಹಾಕುವುದರಿಂದ ರೋಗಾಣುಗಳು ಉತ್ಪತ್ತಿಯಾಗಬಹುದು. ಅದರಲ್ಲೂ ಕೊರೊನಾ ಭಯ ಇರುವ ಈ ಹೊತ್ತಿನಲ್ಲಿ ಸಂವೇದಕ ಶಕ್ತಿ ಹೊಂದಿರುವ ಕಸದ ಡಬ್ಬಿ ಅವಶ್ಯವೂ ಹೌದು ಎನ್ನಿಸುತ್ತದೆ. ಇದರಿಂದ ಮಾಲಿನ್ಯದ ಅಪಾಯ ಕಡಿಮೆಯಾಗುವುದಲ್ಲದೇ ಬಳಸಲೂ ಸೂಕ್ತ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.