ನವದೆಹಲಿ: ಶನಿವಾರ ಸಂಜೆ ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಗೂಗಲ್ ಜಿಮೇಲ್ (Google Gmail) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲ್ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.

ವೆಬ್ಸೈಟ್ಗಳ ಸೇವೆಯಲ್ಲಿನ ವ್ಯತ್ಯಯಗಳ ಬಗ್ಗೆ ಗಮನಹರಿಸುವ ಪೋರ್ಟಲ್ ‘Downdetector.com’ ಪ್ರಕಾರ, ಇಮೇಲ್ಗಳನ್ನು ಸ್ವೀಕರಿಸುವಲ್ಲಿ ಹೆಚ್ಚಿನ ತೊಡಕು ಉಂಟಾಗಿತ್ತು ಎನ್ನಲಾಗಿದೆ.

ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್ಟಾಪ್ ಆವೃತ್ತಿಗಳೆರಡರಲ್ಲೂ ವಿಶ್ವದಾದ್ಯಂತ ತೊಂದರೆ ಉಂಟಾಗಿತ್ತು.

Gmailನ ಸಮಸ್ಯೆಯ ಬಗ್ಗೆ ಟ್ವಿಟರ್ನಲ್ಲಿಯೂ ಭಾರಿ ಚರ್ಚೆ ನಡೆಯಿತು. ಜನರು ತಮಗಾದ ತೊಂದರೆ, ಗೊಂದಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದರು.

‘Gmail ಸಮಸ್ಯೆ ಎಲ್ಲರಿಗೂ ಎದುರಾಗಿದೆಯೇ ಅಥವಾ ನನ್ನ ಖಾತೆಯಲ್ಲಿ ಏನಾದರೂ ತಪ್ಪಾಗಿದೆಯೇ? ಯಾವುದೇ ಮೇಲ್ ನನಗೆ ಬರುತ್ತಿಲ್ಲ’ ಎಂದು ಬಳಕೆದಾರರು ಪ್ರಶ್ನೆ ಮಾಡಿದರು.

ಈ ಜಾಗತಿಕ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಕುರಿತು ಗೂಗಲ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.