ಬೆಂಗಳೂರು: ಗೂಗಲ್ ಕ್ರೋಮ್ ವೆಬ್ ಬ್ರೌಸರ್‌ನಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಕಂಪನಿ ಸೂಚಿಸಿದೆ.

ಗೂಗಲ್ ಕ್ರೋಮ್ ಬಳಕೆದಾರರಿಗಾಗಿ ನೂತನ ಅಪ್‌ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ಎಲ್ಲರೂ ಅದನ್ನು ಡೌನ್‌ಲೋಡ್ ಮಾಡಿಕೊಂಡು, ಅಪ್‌ಡೇಟ್ ಮಾಡಿಕೊಳ್ಳಿ ಎಂದು ಸಂಸ್ಥೆಯ ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಲಿನಕ್ಸ್ ಮತ್ತು ವಿಂಡೋಸ್ ಬಳಕೆದಾರರಿಗೆ 107.0.5304.121/.122 ಹೊಸ ಅಪ್‌ಡೇಟ್ ಲಭ್ಯವಿದ್ದು, ಬಳಕೆದಾರರು ಮೆನುವಿಗೆ ಹೋಗಿ, ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮೂಲಕ ಎಬೌಟ್ ಕ್ರೋಮ್ ಎಂದಿರುವುದನ್ನು ಕ್ಲಿಕ್ ಮಾಡಬೇಕು.

ನಂತರ, ಗೂಗಲ್ ಕ್ರೋಮ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಹೊಸ ಅಪ್‌ಡೇಟ್ ಬಳಕೆ ಮಾಡುವುದರಿಂದ ಹ್ಯಾಕಿಂಗ್ ಸಾಧ್ಯತೆಯನ್ನು ತಪ್ಪಿಸಬಹುದು. ಜತೆಗೆ, ಕ್ರೋಮ್ ಮೂಲಕ ವೈರಸ್, ಮಾಲ್ವೇರ್ ನಿಮ್ಮ ಕಂಪ್ಯೂಟರ್ ಪ್ರವೇಶಿಸುವುದನ್ನು ತಡೆಯಬಹುದು.

ಗೂಗಲ್ ಜಾಹೀರಾತು ದುರ್ಬಳಕೆ: ಮಾಲ್ವೇರ್ ಹರಡುತ್ತಿರುವ ಹ್ಯಾಕರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.