ದೇಶದಲ್ಲಿ ಕೋವಿಡ್ 19 ಸೋಂಕು ತಡೆಗೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ತಡೆಗೆ ಲಸಿಕೆ ಲಭ್ಯವಿದೆ.

45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಮತ್ತು ಆರೋಗ್ಯ ಸೇವೆ ಹಾಗೂವಿವಿಧ ಇಲಾಖೆಗಳ ಮುಂಚೂಣಿ ಕಾರ್ಯಕರ್ತರು, ಸಿಬ್ಬಂದಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಪಡೆದುಕೊಳ್ಳುವವರಿಗೆ ಅನುಕೂಲವಾಗುವಂತೆ, ಗೂಗಲ್ ಈಗ ದೇಶದಲ್ಲಿ ಗೂಗಲ್ ಮ್ಯಾಪ್ಸ್ ಮತ್ತು ಆ್ಯಪ್ ಮೂಲಕ ಸಮೀಪದ ಕೋವಿಡ್ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡುತ್ತಿದೆ.

ಗೂಗಲ್ ಸರ್ಚ್ ಅಥವಾ ಮ್ಯಾಪ್ಸ್ ಮೂಲಕ, ‘ವ್ಯಾಕ್ಸಿನ್ ಸೆಂಟರ್ ನಿಯರ್ ಮಿ’ ಎಂದು ಟೈಪ್ ಮಾಡಿದರೆ, ನಿಮ್ಮ ಸಮೀಪದಲ್ಲಿರುವ ಲಸಿಕಾ ಕೇಂದ್ರದ ಕುರಿತ ಮಾಹಿತಿಯನ್ನು ಗೂಗಲ್ ಬಳಕೆದಾರರಿಗೆ ನೀಡುತ್ತದೆ.

ಅಷ್ಟೇ ಅಲ್ಲದೆ, ಲಸಿಕೆ ಕುರಿತ ಮಾಹಿತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಸರ್ಕಾರಿ ಮಾಹಿತಿ ಹಾಗೂ ಕೋವಿಡ್ ಲಸಿಕಾ ಕೇಂದ್ರದ ಮ್ಯಾಪ್, ದೂರವಾಣಿ ಸಂಖ್ಯೆ, ಸಮಯ ವಿವರ ಕೂಡ ಗೂಗಲ್‌ನಲ್ಲಿ ಲಭ್ಯವಿದೆ.

Google Doodle: ಕೊರೊನಾ ತಡೆಗೆ ಮಾಸ್ಕ್ ಜಾಗೃತಿ ಅಭಿಯಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.