ಸ್ಥಳನಾಮ ತಿದ್ದುಪಡಿ, ಸೇರ್ಪಡೆ ಹೇಗೆ?

ಗೂಗಲ್ ಮ್ಯಾಪ್ ಓಪನ್ ಮಾಡಿದರೆ ಕೆಲವೊಂದು ಸ್ಥಳಗಳ ಹೆಸರುಗಳು ತಪ್ಪಾಗಿರುತ್ತವೆ. ಇಂಗ್ಲಿಷ್ನಲ್ಲಿ ಸ್ಥಳದ ಹೆಸರು ಸರಿಯಾಗಿದ್ದರೂ ಕನ್ನಡದಲ್ಲಿ ಅಕ್ಷರ ತಪ್ಪುಗಳು ಕಾಣಿಸಿಕೊಂಡು ಅಭಾಸ, ಗೊಂದಲಗಳಿಂದ ಕೂಡಿದೆ. ಹೀಗೆ ಯಾವುದಾದರೂ ಸ್ಥಳನಾಮ ಕಂಡುಬಂದರೆ ಅದನ್ನು ತಿದ್ದಿ ಸರಿ ಪಡಿಸಬಹುದು.

ಸ್ಥಳನಾಮದ ಎಡಿಟ್ ಹೇಗೆ?

ನಿಮ್ಮ ಕಂಪ್ಯೂಟರ್ನಲ್ಲಿ ಗೂಗಲ್ ಖಾತೆಗೆ ಲಾಗಿನ್ ಆಗಿ ಗೂಗಲ್ ಮ್ಯಾಪ್ ಓಪನ್ ಮಾಡಿ ತಪ್ಪಾದ ಸ್ಥಳನಾಮ/ ಅಕ್ಷರ ದೋಷದಿಂದ ಕೂಡಿದ ಸ್ಥಳನಾಮವನ್ನು ಹುಡುಕಿ ಮ್ಯಾಪ್ ಆ ಸ್ಥಳವನ್ನು ತೋರಿಸಿದ ಕೂಡಲೇ ಎಡಭಾಗದಲ್ಲಿ ಸ್ಕ್ರಾಲ್ ಮಾಡಿದರೆ ಅಲ್ಲಿಯೇ ಕೆಳಗೆ Suggest an edit ಎಂಬ ಆಪ್ಶನ್ ಇದೆ. ಅದನ್ನು ಕ್ಲಿಕ್ ಮಾಡಿ ಕನ್ನಡದಲ್ಲಿ ಅಕ್ಷರ ತಪ್ಪಾಗಿದ್ದರೆ ಅದನ್ನು ಸರಿ ಮಾಡಿ, ಕೆಳಗೆ Send ಬಟನ್ ಒತ್ತಿ.

ಗೂಗಲ್ ನೀವು ಎಡಿಟ್ ಮಾಡಿದ ವಿಷಯವನ್ನು ಪರಿಶೀಲಿಸಿದ ನಂತರ ಅದನ್ನು ಅಪ್ಡೇಟ್ ಮಾಡುತ್ತದೆ. ಈ ಬಗ್ಗೆ ನಿಮಗೆ ಗೂಗಲ್ ಇಮೇಲ್ ಕಳುಹಿಸುತ್ತದೆ. ನೀವು ಮಾಡಿದ ತಿದ್ದುಪಡಿ ಬಗ್ಗೆ ಪರಿಶೀಲಿಸಿದವರು ಪ್ರಶ್ನೆ ಕೇಳಿದ್ದರೆ ಅದನ್ನೂ ಗೂಗಲ್ ನಿಮಗೆ ಇಮೇಲ್ ಮೂಲಕ ಕಳುಹಿಸುತ್ತದೆ.

ಹೊಸ ಸ್ಥಳನಾಮ ಸೇರಿಸುವುದು

ಯಾವುದಾದರೊಂದು ಸ್ಥಳದ ಹೆಸರು ಗೂಗಲ್ ಮ್ಯಾಪ್ನಲ್ಲಿ ಬಿಟ್ಟು ಹೋಗಿದ್ದರೆ ಅದನ್ನು ಸೇರಿಸಬಹುದು. ಅದಕ್ಕೆ ಹೀಗೆ ಮಾಡಿ

ಗೂಗಲ್ ಮ್ಯಾಪ್ ಓಪನ್ ಮಾಡಿಎಡಭಾಗದಲ್ಲಿ ಮೆನುವಿನಲ್ಲಿ ಕೆಳಗೆ Add a missing place ಆಪ್ಶನ್ ಕ್ಲಿಕ್ ಮಾಡಿ.

ಅಲ್ಲಿ ಸ್ಥಳದ ಹೆಸರು, ಕೆಟಗರಿ ಮತ್ತು ಸ್ಥಳದ ವಿಳಾಸ ತುಂಬಿಸಿ Send ಬಟನ್ ಒತ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.