ಬೆಂಗಳೂರು: ಗೂಗಲ್ ಆ್ಯಡ್ಸ್ ಮೂಲಕ ಪ್ರಸಾರವಾಗುವ ಜಾಹೀರಾತುಗಳನ್ನು ಬಳಸಿಕೊಂಡು ಹ್ಯಾಕರ್ಸ್ ನಕಲಿ ವೆಬ್‌ಸೈಟ್ ರಚಿಸಿ, ಅದರ ಮೂಲಕ ವೈರಸ್ ಹರಡುವ ಮಾಲ್ವೇರ್ ಅನ್ನು ಕಳುಹಿಸುತ್ತಿರುವುದು ಪತ್ತೆಯಾಗಿದೆ.

ಗೂಗಲ್ ಆ್ಯಡ್ಸ್ ವೇದಿಕೆಯ ಮೂಲಕ ಜಾಹೀರಾತು ನೀಡಿ, ಅವುಗಳನ್ನು ಬಳಕೆದಾರರು ಭೇಟಿ ನೀಡುವ ವಿವಿಧ ತಾಣಗಳಲ್ಲಿ ಪ್ರದರ್ಶಿಸುವಂತೆ ಮಾಡುವ ಹ್ಯಾಕರ್ಸ್, ಅದರ ಮೂಲಕ ತಾವು ರಚಿಸಿದ ನಕಲಿ ವೆಬ್‌ಸೈಟ್ ಪ್ರವೇಶಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ನಂತರ, ಬಳಕೆದಾರರ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್‌ಫೋನ್‌ಗೆ ರಹಸ್ಯವಾಗಿ ಪ್ರವೇಶಿಸುವ ವೈರಸ್, ಅಲ್ಲಿರುವ ಪ್ರಮುಖ ಮಾಹಿತಿಯನ್ನು ಕದಿಯಬಲ್ಲದು. ಜತೆಗೆ ರಾನ್ಸಮ್‌ವೇರ್ ಅನ್ನು ಕೂಡ ಇನ್‌ಸ್ಟಾಲ್ ಮಾಡುವ ಸಾಧ್ಯತೆಯಿದೆ. ಉಳಿದಂತೆ ನೋಡಲು ಅಧಿಕೃತ ಅಪ್ಲಿಕೇಶನ್ ರೀತಿ ಇರುವ ಅವುಗಳು, ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗುವ ಸಾಧ್ಯತೆಯಿರುತ್ತದೆ.

ಈ ಕುರಿತು ಮೈಕ್ರೋಸಾಫ್ಟ್ ಭದ್ರತೆ ಮತ್ತು ಗೌಪ್ಯತೆ ತಂಡ ಎಚ್ಚರಿಕೆ ನೀಡಿದೆ.

Google Chrome: ಭದ್ರತಾ ದೋಷ ಸರಿಪಡಿಸಿದ ಗೂಗಲ್

ಹೀಗಾಗಿ ಜಾಹೀರಾತುಗಳಲ್ಲಿ ಬರುವ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ದೂರ ಉಳಿಯುವುದು ಉತ್ತಮ ಎನ್ನುವುದು ಸೈಬರ್ ತಜ್ಞರ ಅಭಿಪ್ರಾಯವಾಗಿದೆ.

Satellite Phones: ಸ್ಯಾಟಲೈಟ್ ಫೋನ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.