ರೈಲು ಪ್ರಯಾಣಕ್ಕೆ ಸರಿಸಾಟಿ ಯಾವುದು ಇಲ್ಲ. ಬೆಟ್ಟಗುಡ್ಡಗಳ ನಡುವೆ ಸುರಂಗ ಮಾರ್ಗದಲ್ಲಿ ರೈಲು ಹಾದು ಹೋಗುತ್ತಿದ್ದರೆ ಅದರ ಆನಂದ ಅನುಭವಿಸಿದವನಿಗೆ ಮಾತ್ರ ಗೊತ್ತು ಪಯಣದ ಖುಷಿ. ಈಗಲೂ ಅನೇಕರು ರೈಲಿನಲ್ಲಿ ಪ್ರಯಾಣ ಬೆಳೆಸಿ ತಮ್ಮ ಹಳೆಯ ನೆನೆಪುಗಳನ್ನು ಮೆಲುಕು ಹಾಕಲು ಇಚ್ಚಿಸುತ್ತಾರೆ. ಆದರೆ ಒತ್ತಡದ ಜೀವನಶೈಲಿ ಹಾಗೂ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಇರುವ ಕಾರಣ ರೈಲು ಪ್ರಯಾಣದಿಂದ ದೂರವಿರುತ್ತಾರೆ. ಆದರೆ ಈಗ ಕೆಲವು ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಸುವ ಮೂಲಕ ನಿಮ್ಮ ಬೆರಳ ತುದಿಯಲ್ಲಿ ಸುಲಭವಾಗಿ ರೈಲು ಟಿಕೆಟ್ ಬುಕಿಂಗ್ ಮಾಡಬಹುದು.

ಕನ್ಫರ್ಮ್ ಟಿಕೆಟ್: ರೈಲು ಟಿಕೆಟ್ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಕನ್ಫರ್ಮ್ ಟಿಕೆಟ್ ಪ್ರಮುಖವಾದದ್ದು. ಈ ವೇದಿಕೆ ಮೂಲಕ ಪ್ರಯಾಣಿಕರು ಖಚಿತ ರೈಲ್ ಟಿಕೆಟ್ ಪಡೆದುಕೊಳ್ಳುಬಹುದು. ಪಿಎನ್ಆರ್ ಸ್ಟೇಟಸ್ ಪ್ರಿಡಿಕ್ಷನ್ ಕೂಡ ಇದರ ಮೂಲಕ ತಿಳಿದುಕೊಳ್ಳಬಹುದು. ಹಿಂದಿನ ಅಥವಾ ಮುಂದಿನ ರೈಲು ನಿಲ್ದಾಣದಿಂದ ಖಚಿತ ಟಿಕೆಟ್ ಪಡೆದುಕೊಳ್ಳವ ಅವಕಾಶವನ್ನು ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು. ಪರ್ಯಾಯ ಮಾರ್ಗದ ಮಾಹಿತಿಯು ಕೂಡ ಇದರಲ್ಲಿ ಲಭ್ಯ. ಲೈವ್ ಟ್ರೈನ್ ಅಪ್‌ಡೇಟ್, ಸೀಟಿನ ಲಭ್ಯತೆ, ವೇಳಾಪಟ್ಟಿ ಕೂಡ ಈ ಆ್ಯಪ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದು. ಈ ಆ್ಯಪ್ 7 ಭಾಷೆಗಳಲ್ಲಿ ಲಭ್ಯವಿದ್ದು ಟೈರ್ 2 ಮತ್ತು ಟೈರ್ 3 ನಗರ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.

ರೈಲ್ ಸಾರ್ಥಿ: ಇದೊಂದು ಟ್ರೈನ್ ಬುಕಿಂಗ್ ಮೊಬೈಲ್ ಅಪ್ಲಿಕೇಷನ್. ಪ್ರಯಾಣಿಕರ ಎಲ್ಲಾ ಅಗತ್ಯತೆಗಳನ್ನು ಇದು ಪೂರೈಸುತ್ತದೆ. ಇದರ ಮೂಲಕ ಫುಡ್ ಆರ್ಡರ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಕಂಪಾರ್ಟ್‌ಮೆಂಟ್ ಕ್ಲೀನ್ ಮಾಡಿಸಲು ಇದರ ಮೂಲಕ ಕೇಳಿಕೊಳ್ಳಬಹುದು. ಪ್ರಯಾಣ ಮುಗಿದ ನಂತರ ಪ್ರಯಾಣಿಕರ ಅನುಭವವನ್ನು ಸಹ ಈ ಆ್ಯಪ್ ಕೇಳುತ್ತದೆ.

ಪೇಟಿಎಂ ಟ್ರೈನ್ಸ್: ಈ ಪ್ಲಾಟ್‌ಫಾರಂ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಬಹುದು. ಜೊತೆಗೆ ಕ್ಯಾಶ್ ಬ್ಯಾಕ್ ಕೂಡ ಪಡೆದುಕೊಳ್ಳಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ತಲುಪುವ ರೈಲುಗಳನ್ನು ಮೊದಲು ಈ ಆ್ಯಪ್ ತೋರಿಸುತ್ತದೆ. 24/7 ಗ್ರಾಹಕ ಸೇವೆಯನ್ನು ಒದಗಿಸುವುದರ ಜೊತೆಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಬುಕಿಂಗ್ ಅವಕಾಶ ಕೂಡ ಮಾಡಿಕೊಡುತ್ತದೆ.

ಐಕ್ಸಿಗೊ: ಕನ್ವಿನಿಯನ್ಸ್ ಶುಲ್ಕವಿಲ್ಲದೆ ಈ ಆ್ಯಪ್ ಮೂಲಕ ರೈಲ್ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಇದು ಟ್ರಾವೆಲ್ ಸ್ಟೋರಿ ಬ್ಲಾಗ್ ಕೂಡ ಹೊಂದಿದ್ದು ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಇಲ್ಲಿ ಹಂಚಿಕೊಂಡಿರುತ್ತಾರೆ. ಇದನ್ನು ಗ್ರಾಹಕರು ಓದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಟ್ರೈನ್ ಮ್ಯಾನ್:ಕಳೆದ ಕೆಲವು ವರ್ಷಗಳ ಡೇಟಾದ ಆಧಾರದ ಮೇಲೆ ಟಿಕೆಟ್ ದೃಢೀಕರಣದ ಸಂಭವನೀಯತೆಯನ್ನು ಇದು ನಿಮಗೆ ತೋರಿಸುತ್ತದೆ. ಇದು ತನ್ನ ಬಳಕೆದಾರರಿಗೆ ಸಂಪೂರ್ಣ ರೈಲು ವೇಳಾಪಟ್ಟಿಯನ್ನುನೀಡುತ್ತದೆ. ಆಸನ ಸಂಖ್ಯೆ, ದಾರಿಯಲ್ಲಿರುವ ನಿಲ್ದಾಣಗಳು, ಪ್ರಯಾಣದ ಮಾರ್ಗಗಳು ಮತ್ತುಹೆಚ್ಚಿನದನ್ನು ಒಳಗೊಂಡಿರುತ್ತದೆ. ಒಬ್ಬರು ವಿವರವನ್ನು ಸಹ ಹಂಚಿಕೊಳ್ಳಬಹುದು. ಟಿಕೆಟ್‌ಗಳು ಮತ್ತು ಸಂಬಂಧಿತ ಮಾಹಿತಿಯನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.