ಬೇರೆಯವರ ಅಭಿಪ್ರಾಯವನ್ನು ಆಧರಿಸಿ ನಾವು ಯಾವುದೇ ವಸ್ತುವನ್ನು ಕೊಳ್ಳುವ ಮೊದಲು, ಆ ಹೊಗಳಿಕೆಯು ಖೋಟಾವೋ ಅಥವಾ ಸಾಚಾವೋ ಎಂದು ಪತ್ತೆ ಮಾಡಲಾದೀತೆ?

‘ದುಡ್ಡಿನಿಂದ ಸಂತೋಷವನ್ನು ಖರೀದಿ ಮಾಡಲು ಸಾಧ್ಯವಿದೆಯೇ–ಎಂದು ಕೇಳಿದವರಿಗೆ ಎಲ್ಲಿ ಶಾಪಿಂಗ್ ಮಾಡಬೇಕೆಂದು ಗೊತ್ತಿರಲಿಲ್ಲ’ ಎಂಬ ಹಾಸ್ಯೋಕ್ತಿಯೊಂದಿದೆ. ಸುಖವೋ ದುಃಖವೋ, ಜನ ಶಾಪಿಂಗ್ ಅಂತೂ ಮಾಡುತ್ತಿದ್ದಾರೆ; ಅಂಗಡಿಗೆ ಹೋಗುವುದಕ್ಕಿಂತ ಹೆಚ್ಚಾಗಿ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ ಎಂಬುದು ವಾಸ್ತವ. ಕೋಟಿಗಟ್ಟಲೆ ಶಾಪಿಂಗುಗಳು ‘ಅಮೆಜಾನ್’ ಎಂಬ ಬೃಹದ್ಗಾತ್ರದ ಆನ್ಲೈನ್ ಅಂಗಡಿಯಲ್ಲಿ ಆಗುತ್ತಿರುವುದು ಸತ್ಯವೇ. ಅದರಲ್ಲಿ ಇರುವ ಒಂದು ಅನುಕೂಲ ಎಂದರೆ ಒಂದು ಸಿದ್ಧವಸ್ತುವನ್ನು ಖರೀದಿ ಮಾಡುವ ಮೊದಲು ಅದರ ಬಗ್ಗೆ ಅದನ್ನು ಖರೀದಿ ಮಾಡಿದವರು ಹಾಕಿದ ವಿಮರ್ಶೆಯನ್ನು ನೋಡಲು ಸಾಧ್ಯವಿದೆ. ಎಲ್ಲರೂ ಸೇರಿ ಅದಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ; ಮೂರು ಸ್ಟಾರೋ ನಾಲ್ಕೋ ನಾಲ್ಕೂವರೆಯೋ ಎಂದು ನೋಡಿ ಉತ್ಪನ್ನದ ಗುಣಮಟ್ಟದ ಬಗ್ಗೆ ಒಂದು ಅಂದಾಜಿಗೆ ಬರಲು ಸಾಧ್ಯವಿದೆ.

ಕಳೆದ ವರ್ಷವೊಂದರಲ್ಲಿಯೇ ಸುಮಾರು 12.5 ಕೋಟಿ ಜನರು ಸುಮಾರು 150 ಕೋಟಿ ವಿಮರ್ಶೆಗಳನ್ನು ಅಮೆಜಾನಿನ ವೆಬ್ಸೈಟಿನಲ್ಲಿ ಹಾಕಿದ್ದಾರೆ ಎಂದು ಅಮೆಜಾನ್ ಹೇಳಿದೆ. 1995ರಲ್ಲಿ ಅಮೆಜಾನ್ ಹೀಗೆ ವಿಮರ್ಶೆ ಮಾಡುವ ಅವಕಾಶವನ್ನು ಗ್ರಾಹಕರಿಗೆ ಕೊಟ್ಟಲ್ಲಿಂದ ವರ್ಷಕ್ಕೆ 150 ಕೋಟಿ ವಿಮರ್ಶೆಗಳವರೆಗೆ ಇದು ಬಂದು ನಿಂತಿದೆ ಎಂದರೆ ಇದರ ಗಾತ್ರ, ಮಹತ್ತ್ವಗಳ ಕಲ್ಪನೆ ಮಾಡಬಹುದು. ಹೀಗಿರುವಾಗ, ಅಲ್ಲಿ ಬರುವ ವಿಮರ್ಶೆಗಳು, ರೇಟಿಂಗುಗಳು ಪ್ರಾಮಾಣಿಕವಾಗಿರುತ್ತವೆ, ವಿಶ್ವಾಸಕ್ಕೆ ಅರ್ಹವಾಗಿರುತ್ತವೆ; ಜನರು ತಾವು ಖರೀದಿಸಿ ನೋಡಿದ್ದನ್ನು, ಅನುಭವಿಸಿದ್ದನ್ನು ಹೊಗಳಿಕೆಯ ರೂಪದಲ್ಲಿಯೋ, ತೆಗಳಿಕೆಯ ರೂಪದಲ್ಲಿಯೋ ಪ್ರಾಮಾಣಿಕವಾಗಿ ದಾಖಲಿಸಿರುತ್ತಾರೆ ಎಂಬ ನಿರೀಕ್ಷೆ ಇರುವುದು ಸಹಜ. ಆದರೆ ವಸ್ತುಸ್ಥಿತಿ ಹಾಗಿಲ್ಲ.

ಈ ಮಟ್ಟದ ವ್ಯಾಪಾರ ಇರುವಲ್ಲಿ ದ್ರೋಹಚಿಂತನೆಯೂ ಇದ್ದೇ ಇರುತ್ತದೆ ಎಂದು ಲೋಕಾನುಭವದಿಂದ ಹೇಳಬಹುದು. ‘ಫೇಕ್ ರಿವ್ಯೂ ಇಂಡಸ್ಟ್ರಿ’ ಎಂಬ ಹೊಸ ಉದ್ಯಮದ ಹುಟ್ಟು ಆದದ್ದು ಹೀಗೆ. ಯಾರೋ ಕೆಲವರು ನಕಲಿ ವಿಮರ್ಶೆಗಳನ್ನು ಬರೆದಿದ್ದರೆ ಚಿಂತೆಯಿರಲಿಲ್ಲ. ಆದರೆ ಇದೊಂದು ಉದ್ಯಮವೇ ಆಗಿ ಬೆಳೆದಿದೆ. ಕಳೆದ ವರ್ಷವೊಂದರಲ್ಲಿಯೇ ಸುಮಾರು ಇಪ್ಪತ್ತು ಕೋಟಿ ನಕಲಿ ವಿಮರ್ಶೆಗಳು ಬಂದಿರಬಹುದು ಎಂದು ಅಮೆಜಾನ್ ಒಂದು ಲೆಕ್ಕವನ್ನು ಕೊಟ್ಟಿದೆ. ಇದನ್ನು ತಡೆಗಟ್ಟುವುದಕ್ಕೆ ಸಾವಿರಾರು ಅಂಶಗಳನ್ನು ಪರಿಗಣಿಸಿ ಖೋಟಾ ರೇಟಿಂಗುಗಳನ್ನು ಕಂಡು ಹಿಡಿಯುವ ಕೃತಕ ಬುದ್ಧಿಮತ್ತೆಯ ಮಶೀನ್ ಲರ್ನಿಂಗಿನ ತಂತ್ರಗಳನ್ನು ಬಳಸಲಿದ್ದೇವೆ ಎಂದು ಹೇಳಿದೆ. ಇದು ಕುತೂಹಲವನ್ನು ಕೆರಳಿಸಿರುವ ವಿಚಾರ. ಇಂಥ ಪತ್ತೆದಾರಿ ಕೆಲಸವನ್ನು ಮಾಡುವ ತಂತ್ರಾಂಶಗಳನ್ನು 11ಈಗಾಗಲೇ ಬೇರೆ ಕೆಲವು ಕಂಪೆನಿಗಳು ತಯಾರಿಸಿರುವುದರಿಂದ ಇದರ ಕಾರ್ಯವೈಖರಿಯ ಬಗ್ಗೆ ಒಂದಷ್ಟು ಊಹೆಗಳನ್ನು ಮಂಡಿಸಲು ಸಾಧ್ಯವಿದೆ. ಅವು ಯಾವ ಸುಳಿವುಗಳ ಬೆನ್ನು ಹತ್ತಿ ನಕಲಿ ಶ್ಯಾಮರನ್ನು ಹಿಡಿಯಬಹುದು ಎಂದು ನೋಡೋಣ.

ಮೊದಲು ನೋಡಬಹುದಾದದ್ದು ‘Verified Purchase’ ಎಂಬ ಅಂಶವನ್ನು. ವಿಮರ್ಶೆಯನ್ನು ಬರೆಯುವವರು ಆ ವಸ್ತುವನ್ನು ಅವರದೇ ವೆಬ್ ಸೈಟಿನಲ್ಲಿ ಖರೀದಿಸಿದ್ದಾರೆ ಅದಕ್ಕೆ ‘Verified Purchase’ ಎಂಬ ಗುರುತುಪಟ್ಟಿಯನ್ನು ಕೊಡಲಾಗುತ್ತದೆ. ಇದೇ ಇಲ್ಲದಿದ್ದರೆ, ಸುಳ್ಳರು ವಸ್ತುವನ್ನು ಕೊಡುಕೊಳ್ಳುವುದಕ್ಕೇ ಹೋಗದೆ ಸುಮ್ಮ ಸುಮ್ಮನೆ ವಿಮರ್ಶೆಯನ್ನು ಬರೆದಿದ್ದಾರೆ, ರೇಟಿಂಗ್ ಅನ್ನು ಕೊಟ್ಟಿದ್ದಾರೆ ಎಂದಾಯಿತು. ಗಣಕಯಂತ್ರಗಳಿಗೆ ಇಂಥದ್ದನ್ನು ಹಿಡಿಯುವುದು ಸಲೀಸಾದ ಕೆಲಸ. ಇದಕ್ಕೆ ಕೃತಕ ಬುದ್ದಿಮತ್ತೆಯೂ ಬೇಕಾಗಿಲ್ಲ, ಮಾಮೂಲಿ ತಂತ್ರಾಂಶಗಳೇ ಇದನ್ನು ನಿಭಾಯಿಸಬಲ್ಲವು.

‘ರೇಟಿಂಗ್ ಟ್ರೆಂಡ್’ ಎಂಬುದು ಪರಿಗಣಿಸಬೇಕಾದ ಇನ್ನೊಂದು ಅಂಶ. ಉದಾಹರಣೆಗೆ, ಒಂದು ಸರಕಿಗೆ 529 ವಿಮರ್ಶೆಗಳು ಬಂದಿವೆ ಎಂದುಕೊಳ್ಳೋಣ, ಅವುಗಳಲ್ಲಿ 273 ಕಳೆದ ಹನ್ನೆರಡು ದಿನಗಳಲ್ಲಿಯೇ ಬಂದಿದೆ ಎಂದರೆ ಇದರಲ್ಲಿ ಏನೋ ಸ್ವಲ್ಪ ಶಂಕಾಸ್ಪದವಾದ ನಡೆ ಕಾಣುತ್ತಿದೆ ಎಂದುಕೊಂಡು ಅದನ್ನು ಮತ್ತಷ್ಟು ವಿಶ್ಲೇಷಣೆ ಮಾಡಿನೋಡಬಹುದು. ಈ 273 ವಿಮರ್ಶೆಗಳ ಒಟ್ಟು ರೇಟಿಂಗಿನ ಸರಾಸರಿಯು 5 ಅಥವಾ 4.9 ಆದರೆ ಅಲ್ಲಿ ಏನೋ ಮೋಸ ಇದೆ ಎಂದೇ ಅರ್ಥ. ಸಹಜವಾಗಿ ಹೀಗೆ 273 ಜನ ಸಂತೃಪ್ತ ಗ್ರಾಹಕರು ಇಷ್ಟು ಕಡಿಮೆ ಅವಧಿಯಲ್ಲಿ ಸಿಕ್ಕಿ, ಅವರೆಲ್ಲರೂ ಒಟ್ಟೊಟ್ಟಿಗೇ ವಿಮರ್ಶೆಯನ್ನು ಬರೆಯಲು ತೊಡಗುವುದರ ಸಂಭವನೀಯತೆ ಕಡಿಮೆ ಎನ್ನಬೇಕು. ಇಂಥ ವಿಶ್ಲೇಷಣೆಗಳನ್ನು ಗಣಕಯಂತ್ರಗಳು ಸುಲಭದಲ್ಲಿ ಮಾಡುತ್ತವೆ.

ವಿಮರ್ಶೆ ಬರೆದವರ ಆನ್ಲೈನ್ ನಡವಳಿಕೆ, ಚಟುವಟಿಕೆಗಳು ಯಾವ ರೀತಿ ಇವೆ ಎಂದು ನೋಡುವುದು ಇನ್ನೊಂದು ವಿಧಾನ. ಒಂದು ಉತ್ಪನ್ನಕ್ಕೆ 529 ವಿಮರ್ಶೆಗಳು ಬಂದಿದ್ದರೆ ಅದರಲ್ಲಿ 273 ಜನರು ಇದೊಂದು ವಿಮರ್ಶೆಯನ್ನು ಬಿಟ್ಟು ಬೇರೇನನ್ನೂ ಬರೆದಿಲ್ಲ ಎಂದಾದರೆ ಇದೂ ಸಂದೇಹಾಸ್ಪದ ನಡೆಯೇ. ಇಷ್ಟೊಂದು ಜನರು ಈ ಒಂದು ಪ್ರಾಡಕ್ಟ್ ಬಿಟ್ಟು ಬೇರೇನನ್ನೂ ಖರೀದಿ ಮಾಡಿಲ್ಲವೇ? ಇದರ ವಿಮರ್ಶೆ ಬರೆಯಲು ಬಂದ ಉತ್ಸಾಹ ಅವರಿಗೆ ಬೇರೆ ಯಾವುದರ ಬಗ್ಗೆ ಬರೆಯಲಿಕ್ಕೂ ಬರಲಿಲ್ಲವೇ ಎಂಬುದು ಪರಿಶೀಲನಾರ್ಹವಾದ ವಿಚಾರ. ಇನ್ನು ಕೆಲವರು ಇಪ್ಪತ್ತೆರಡು ಉತ್ಪನ್ನಗಳನ್ನು ಖರೀದಿ ಮಾಡಿದ್ದಾರೆ, ಇಪ್ಪತ್ತೆರಡಕ್ಕೂ ಐದಕ್ಕೆ ಐದು ಅಂಕಗಳನ್ನು ಕೊಟ್ಟಿದ್ದಾರೆ ಎಂದರೆ ಅದೂ ಹುಬ್ಬೇರಿಸಬೇಕಾದ ನಡೆಯೇ. ಸತ್ಯ ಹೇಳಿ, ನಮ್ಮ ಜನರಿಗೆ ಈ ಮಟ್ಟದ ಉದಾರಬುದ್ಧಿ ನಿಜವಾಗಿಯೂ ಇರುತ್ತದೆಂದು ನಿಮಗೆ ಅನಿಸುತ್ತದೆಯೇ?!

ಇನ್ನು ಇಂಥವರು ಒಂದೇ ತರದ ನುಡಿಗಟ್ಟುಗಳನ್ನು, ವಾಕ್ಯಗುಚ್ಛಗಳನ್ನು ಎಲ್ಲೆಡೆ ಬಿಸಾಕುತ್ತಿದ್ದಾರಾದರೆ, ಇವರ ವಿಮರ್ಶೆಗಳ ಅಥವಾ ಹಲವರ ವಿಮರ್ಶೆಗಳಲ್ಲಿ ಬಳಕೆಯಾಗಿರುವ ಪದಗಳ ಸಂಖ್ಯೆ ಒಂದೇ ಎಂದಾದರೆ ಅದು ‘ಕಾಪಿ ಪೇಸ್ಟ್’ ಸಾಹಸವಾಗಿರುವ ಸಾಧ್ಯತೆಯೇ ಹೆಚ್ಚು. ಐವತ್ತು ಉತ್ಪನ್ನಗಳ ವಿಮರ್ಶೆಗಳನ್ನು ನೋಡಿದಾಗ, ಅದೇ ಇಪ್ಪತ್ತೈದು ಜನರು ಈ ಎಲ್ಲ ಉತ್ಪನ್ನಗಳಿಗೂ ವಿಮರ್ಶೆ ಬರೆದಿದ್ದಾರೆ ಎಂದಾದರೆ ಇದೊಂದು ಗುಂಪಿನ ವ್ಯವಸ್ಥಿತವಾದ ಕೆಲಸ ಎಂಬ ನಿರ್ಧಾರಕ್ಕೆ ಬರಬಹುದು. ನೀವು ಖರೀದಿ ಮಾಡಿದ ಐವತ್ತು ಪ್ರಾಡಕ್ಟುಗಳನ್ನೇ ಪಕ್ಕದ ಮನೆಯವರೂ ಖರೀದಿಸಿದ್ದಾರೆ; ಅದೇ ಐವತ್ತನ್ನೇ ಈ ಕಡೆ ಮನೆಯವರೂ ಖರೀದಿಸಿದ್ದಾರೆ. ಹೀಗಾಗುವ ಸಾಧ್ಯತೆ ಬಹಳವೇ ಕಡಿಮೆಯಲ್ಲವೇ?

ಹೀಗೆ ಹಲವು ತಂತ್ರಗಳನ್ನು ಹೂಡಿ, ಖೋಟಾ ವಿಮರ್ಶೆಗಳ ವಿರುದ್ಧ ಸಮರ ಸಾರುವುದಕ್ಕೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.