ಪರಿಸರಸ್ನೇಹಿ ಎಂದು ಸೌರಶಕ್ತಿಯ ಬಳಕೆಯನ್ನು ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಉತ್ತೇಜಿಸುತ್ತಿವೆ. ಆದರೆ ಮನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸೋಲಾರ್ ಪ್ಯಾನೆಲ್ಗಳು, ನಂತರ ನಿರುಪಯುಕ್ತವಾಗುವಾಗ, ಈ ತ್ಯಾಜ್ಯವನ್ನು ಹೇಗೆ ನಿರ್ವಹಿಸುವುದು ಎನ್ನುವುದು ಸಮಸ್ಯೆಯಾಗಿದೆ.

ಉತ್ತಮ ಗುಣಮಟ್ಟದ ಸೋಲಾರ್ ಪ್ಯಾನೆಲ್ ಸುಮಾರು ಮೂವತ್ತು ವರ್ಷಗಳವರೆಗೆ ಬಳಸಬಹುದು ಎಂದು ಹೇಳಲಾಗುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ, ಪ್ಯಾನೆಲ್ಗೆ ಸೌರಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ ಮೂವತ್ತು ವರ್ಷಗಳ ಮೊದಲು ಸೋಲಾರ್ ಪ್ಯಾನೆಲ್ಗಳನ್ನು ಬದಲಾಯಿಸುವವರ ಸಂಖ್ಯೆ ಸಾಕಷ್ಟಿದೆ ಎಂದು ಪರಿಸರತಜ್ಞರು ಅಭಿಪ್ರಾಯ ಪಡುತ್ತಾರೆ.

ಅಂತರರಾಷ್ಟ್ರೀಯ ಪುರ್ನಬಳಕೆಯ ಇಂಧನ ಏಜೆನ್ಸಿ (ಐಆರ್ಇಎನ್ಎ), ಸೋಲಾರ್ ಪ್ಯಾನೆಲ್ಗೆ 30 ವರ್ಷಗಳ ಕೆಲಸ ಮಾಡುವ ಅವಧಿಯ ಆಧಾರದ ಮೇಲೆ ಪ್ರಕಟಿಸಿರುವ ಅಂಕಿಅಂಶಗಳನ್ನು ಪರಿಗಣಿಸಿದರೆ, ವರ್ಷ 2050ರ ಹೊತ್ತಿಗೆ 78 ದಶಲಕ್ಷ ಟನ್ಗಳಷ್ಟು ಸೋಲಾರ್ ಪ್ಯಾನೆಲ್ಗಳ ತ್ಯಾಜ್ಯ ಸೃಷ್ಟಿಯಾಗಲಿದೆ. ಆದರೆ ಮೂವತ್ತು ವರ್ಷಗಳ ಮೊದಲು ಸೋಲಾರ್ ಪ್ಯಾನೆಲ್ ಬದಲಾಯಿಸುವವರ ಸಂಖ್ಯೆಯನ್ನು ಪರಿಗಣಿಸಿದರೆ, ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ 3,15,000 ಟನ್ ಸೋಲಾರ್ ಪ್ಯಾನೆಲ್ಗಳ ತ್ಯಾಜ್ಯ ಸೃಷ್ಟಿಯಾಗಲಿದೆ.

ಅಮೆರಿಕದಲ್ಲಿರುವ ಸೋಲಾರ್ ಪ್ಯಾನೆಲ್ ತ್ಯಾಜ್ಯವನ್ನು ಸಂಸ್ಕರಿಸುವ ಘಟಕವೊಂದು, ವರ್ಷಕ್ಕೆ 20 ಲಕ್ಷ ಸೋಲಾರ್ ಪ್ಯಾನೆಲ್ಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪ್ರತಿ ಸೋಲಾರ್ ಪ್ಯಾನೆಲನ್ನು ಸಂಸ್ಕರಿಸಲು 20ರಿಂದ 30 ಡಾಲರ್ ವೆಚ್ಚವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಸೋಲಾರ್ ಪ್ಯಾನೆಲ್ ತ್ಯಾಜ್ಯವನ್ನು ಸಂಸ್ಕರಿಸುವ ವಿಧಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾಗಬೇಕು ಮತ್ತು ಇಂತಹ ಸಂಸ್ಕರಣೆ ಘಟಕಗಳು ಹೆಚ್ಚಾಗಲು ಸರ್ಕಾರಗಳು ವಿಶೇಷ ಅನುದಾನ ನೀಡಬೇಕು. ಇಲ್ಲದಿದ್ದರೆ ಸೋಲಾರ್ ಪ್ಯಾನೆಲ್ಗಳನ್ನು ನಗರ ಅಥವಾ ಗ್ರಾಮೀಣ ಪ್ರದೇಶದ ತ್ಯಾಜ್ಯಕ್ಕೆ ಸೇರಿಸುವ ಅಥವಾ ನದಿ, ಸಮುದ್ರಗಳಿಗೆ ಎಸೆಯುವ ಪ್ರಕರಣಗಳು ಹೆಚ್ಚಾಗಲಿದೆ. ಹೀಗೆ ಮಾಡುವುದರಿಂದ ಮನುಷ್ಯನ ಆರೋಗ್ಯ ಹಾಗೂ ಪರಿಸರಕ್ಕೆ ಅಪಾರ ಹಾನಿಯುಂಟಾಗುತ್ತದೆ – ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ವಿಶ್ವದಾದ್ಯಂತ ಕ್ರಿಸ್ಟಲೈನ್-ಸಿಲಿಕಾನ್ ಸೋಲಾರ್ ಪ್ಯಾನೆಲ್ಗಳು ಅಧಿಕ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಈ ಪ್ಯಾನೆಲ್ಗಳನ್ನು ತಯಾರಿಸಲು ಅಲೂಮಿನಿಯಂ ಫ್ರೇಮ್, ಗಾಜು, ತಾಮ್ರದ ತಂತಿ, ಪಾಲಿಮರ್ಗಳು, ಕ್ರಿಸ್ಟಲ್ ಸಿಲಿಕಾನ್ನಿಂದ ಮಾಡಿರುವ ಸೋಲಾರ್ ಸೆಲ್ಗಳು ಮತ್ತು ಪ್ಲಾಸ್ಟಿಕ್ ಜಂಕ್ಷನ್ ಬಾಕ್ಸ್ಗಳನ್ನು ಬಳಸುತ್ತಾರೆ. ಇವುಗಳಲ್ಲಿ ಗಾಜು, ಅಲ್ಯೂಮಿನಿಯಂ ಫ್ರೇಮ್, ತಾಮ್ರದ ತಂತಿ ಮತ್ತು ಪ್ಲಾಸ್ಟಿಕ್ ಜಂಕ್ಷನ್ ಬಾಕ್ಸ್ನ್ನು ಸಂಸ್ಕರಿಸುವುದು ಸುಲಭವಾದರೆ, ಸೋಲಾರ್ ಸೆಲ್ಗಳು ಮತ್ತು ಅವುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬಳಕೆಯಾಗುವ ತಾಮ್ರ ಮತ್ತು ಬೆಳ್ಳಿಯನ್ನು ಸಂಸ್ಕರಿಸುವುದು ಸುಲಭವಾಗಿಲ್ಲ. ಕೆಲವು ಸೋಲಾರ್ ಪ್ಯಾನೆಲ್ಗಳಲ್ಲಿ ಕ್ಯಾಡಮಿಯಂ ಮತ್ತು ಸೀಸ್ವನ್ನು ಬಳಸಲಾಗುತ್ತಿರುವುದರಿಂದ ನಮ್ಮ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಇಂತಹ ಪ್ಯಾನೆಲ್ಗಳನ್ನು ಬಹಳ ಎಚ್ಚರಿಕೆಯಿಂದ ಸಂಸ್ಕರಿಸಬೇಕಾಗುತ್ತದೆ.

ಥಿನ್ ಫಿಲಂ ಸೋಲಾರ್ ಪ್ಯಾನೆಲ್ಗಳಲ್ಲಿ ಕ್ಯಾಡ್ಮಿಯಂ-ಟೆಲ್ಯೂರೈಡ್ ಬಳಸಲಾಗುತ್ತಿದ್ದು, ಇಂತಹ ಸೋಲಾರ್ ಪ್ಯಾನೆಲ್ ತ್ಯಾಜ್ಯವನ್ನು ಸಂಸ್ಕರಿಸಲು ವಿಶೇಷ ಘಟಕಗಳು ಬೇಕಾಗುತ್ತವೆ. ಸೋಲಾರ್ ಪ್ಯಾನೆಲ್ಗಳ ಜೊತೆ ಬಳಸುವ ಇನ್ವರ್ಟರ್, ಬ್ಯಾಟರಿ, ಇತ್ಯಾದಿಗಳನ್ನು ಸೂಕ್ತವಾದ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಬೇಕಾಗುತ್ತದೆ.

ನಾವು ಬಳಸುವ ಸೋಲಾರ್ ಪ್ಯಾನೆಲ್ಗಳ ಉತ್ಪಾದನೆಯಲ್ಲಿ ಯಾವ ಅಪಾಯಕಾರಿ ವಸ್ತುಗಳನ್ನು ಬಳಸಲಾಗಿದೆ ಮತ್ತು ಸೋಲಾರ್ ತ್ಯಾಜ್ಯ ನಿರ್ವಹಿಸುವಾಗ, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವನ್ನು ಸೋಲಾರ್ ಕಂಪನಿಗಳು ಮಾಡಬೇಕು. ಎಷ್ಟು ವರ್ಷಗಳವರೆಗೆ ಸೋಲಾರ್ ಪ್ಯಾನೆಲ್ಗಳನ್ನು ಬಳಸಬಹುದು ಮತ್ತು ವರ್ಷದಿಂದ ವರ್ಷಕ್ಕೆ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಕಾರ್ಯಕ್ಷಮತೆ ಎಷ್ಟು ಕಡಿಮೆಯಾಗುತ್ತದೆ ಎಂದು ಜನಸಾಮಾನ್ಯರು ತಿಳಿದುಕೊಳ್ಳುವುದು ಅಗತ್ಯವಿದೆ. ಅದೇ ರೀತಿ ಸೋಲಾರ್ ಪ್ಯಾನೆಲ್ ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷತೆ ಕುರಿತು ಮನವರಿಕೆ ಮಾಡಿಕೊಡುವ ಕಾರ್ಯಕ್ರಮಗಳು ಹಾಗೂ ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ಶಿಬಿರಗಳ ಅಗತ್ಯವಿದೆ. ನಮ್ಮ ದೇಶದಲ್ಲಿ ಕೂಡ ದೇಶದಾದ್ಯಂತ ಸೋಲಾರ್ ಪ್ಯಾನೆಲ್ ತ್ಯಾಜ್ಯ ಸಂಗ್ರಹಣೆ, ಸಂಸ್ಕರಣೆ ಮತ್ತು ತ್ಯಾಜ್ಯದಿಂದ ದೊರೆಯುವ ಪುರ್ನಬಳಕೆಗೆ ಸೂಕ್ತವಾದ ವಸ್ತುಗಳ ವಿಲೇವಾರಿ ಹಾಗೂ ಸಂಸ್ಕರಿಸಲಾಗದೆ ಉಳಿಯುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಅಗತ್ಯವಿದೆ. ಇದರಿಂದ ಸ್ಥಳೀಯವಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರೆಯಲು ಸಾಧ್ಯವಿದೆ.

ಕೆಲವು ದೇಶಗಳಲ್ಲಿ ಸೋಲಾರ್ ಪ್ಯಾನೆಲ್ಗಳನ್ನು ದುರಸ್ತಿ ಮಾಡಿ, ಕಡಿಮೆ ಬೆಲೆಗೆ ಬೇರೆ ದೇಶಗಳಲ್ಲಿ ಮಾರಾಟ ಮಾಡುವ ಸಂಸ್ಥೆಗಳಿವೆ. ಇಂತಹ ಕಳಪೆ ಗುಣಮಟ್ಟದ ಮತ್ತು ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವ ಸೋಲಾರ್ ಪ್ಯಾನೆಲ್ಗಳು ನಮ್ಮ ದೇಶದಲ್ಲಿ ಮಾರಾಟವಾಗದಂತೆ ಸರ್ಕಾರ ಮತ್ತು ಜನಸಾಮಾನ್ಯರು ಜಾಗೃತರಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.