(ಹೈದರಾಬಾದ್‌ನ ಎಂಇಐಎಲ್ ಕಂಪನಿ ತೈಲ ಬಾವಿ ಕೊರೆಯುವ ಅತ್ಯಾಧುನಿಕ ಯಂತ್ರ (ರಿಗ್) ಅಭಿವೃದ್ಧಿಪಡಿಸಿದೆ. ಇಟಲಿಯ ‘ಡ್ರಿಲ್ ಮೆಕ್’ ತಂತ್ರಜ್ಞಾನದ ಸಹಯೋಗ ದೊಂದಿಗೆ ಅಭಿವೃದ್ಧಿಪಡಿಸಿರುವ ಈ ಯಂತ್ರವನ್ನು ಒಎನ್‌ಜಿಸಿ ಸಂಸ್ಥೆಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ.)

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗಳು, ಅದರ ಪರಿಣಾಮಗಳು ಗೊತ್ತೇ ಇವೆಯಲ್ಲ? ಈ ಸಂದರ್ಭದಲ್ಲಿ ದೇಶದ ತೈಲ ಬಾವಿಗಳ ತೋಡುವಿಕೆ ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಸಾಧಿಸುವ ಮಹತ್ತರ ಪ್ರಯತ್ನವೊಂದು ನಡೆದು ಯಶಸ್ವಿಯಾಗಿದೆ. ಇದರಿಂದ ತೈಲ ನಿಕ್ಷೇಪಗಳಲ್ಲಿ ಬಾವಿ ತೋಡುವಿಕೆಯ ವೇಗವರ್ಧನೆ, ಉತ್ಪಾದನಾ ಕ್ಷಮತೆಯಲ್ಲಿ ಸುಧಾರಣೆಯಾಗಲಿದೆ.

ಈ ಪ್ರಯತ್ನ ಮಾಡಿದ್ದು, ಹೈದರಾಬಾದ್‌ನಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ (ಎಂಇಐಎಲ್). ಸರಳವಾಗಿ ಹೇಳಬೇಕೆಂದರೆ ಇವರು ತಯಾರಿಸಿದ್ದು ತೈಲಬಾವಿ ತೋಡುವ ಯಂತ್ರ. ತಾಂತ್ರಿಕವಾಗಿ ಇದನ್ನು ‘ರಿಗ್’ ಎಂದು ಕರೆಯುತ್ತಾರೆ.

ಹೈಟೆಕ್ ತಂತ್ರಜ್ಞಾನ

ಈ ರಿಗ್‌ಗೆ 6 ಸಾವಿರ ಮೀಟರ್(6 ಕಿ.ಮೀ.) ಭೂಮಿಯ ಆಳದವರೆಗೂ ಕೊರೆಯುವ ಸಾಮರ್ಥ್ಯವಿದೆ.2000 ಎಚ್.ಪಿ. ಸಾಮರ್ಥ್ಯದ ಅತ್ಯಾಧುನಿಕ ತಂತ್ರಜ್ಞಾನದ ಈ ರಿಗ್, ಪ್ರಸ್ತುತ ಇಂಧನ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ವಿನ್ಯಾಸದ 3000 ಎಚ್.ಪಿ. ರಿಗ್‌ಗೆ ಸಮನಾಗಿದೆ.

ಹೈಡ್ರಾಲಿಕ್, ರೊಬೊಟಿಕ್‌ನಂತಹ ಹೈಟೆಕ್ ತಂತ್ರಜ್ಞಾನಗಳೊಂದಿಗೆ ಯಂತ್ರ ನಿರ್ಮಿಸಲಾಗಿದ್ದು, ಸ್ವಯಂ ಚಾಲಿತವಾಗಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ಎಲ್ಲ ಚಟುವಟಿಕೆಗಳನ್ನೂ ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಯಂತ್ರದ ನಿರ್ವಹಣೆಗೆ ಒಬ್ಬ ವ್ಯಕ್ತಿ ಸಾಕು.ಅಮೆರಿಕನ್ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್‌ನ ಮಾನದಂಡಗಳಿಗೆ ಅನುಸಾರವಾಗಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರವೂ ಸುಲಭ. ಇದು ಭೂಮಿಯ ಆಳದಲ್ಲಿ ಸೃಷ್ಟಿಯಾಗುವ ಒತ್ತಡ ಮತ್ತು ಉಷ್ಣತೆಯ ವಾತಾವರಣದಲ್ಲಿ ಸುರಕ್ಷತೆಯ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ.

ಚಾಲನಾ ಶಕ್ತಿ

ರಿಗ್ ಚಾಲನೆಗೆ ನಾಲ್ಕು ಜನರೇಟರ್‌ಗಳಿವೆ. ತುರ್ತು ಸಂದರ್ಭದಲ್ಲೂ ಘಟಕವನ್ನು ಚಾಲನೆಯಲ್ಲಿಡಲು ಹೆಚ್ಚುವರಿಯಾಗಿ ಒಂದು ಜನರೇಟರ್ ಇದೆ. ಈ ಎಲ್ಲ ಜನರೇಟರ್‌ಗಳನ್ನು ಎಲ್‌ಪಿಜಿ ಮತ್ತು ಡೀಸೆಲ್ ಎರಡರಿಂದಲೂ ನಡೆಸಲಾಗುತ್ತದೆ. ಈ ಮೂಲಕ ಶೇ. 30ರಷ್ಟು ಇಂಧನ ಉಳಿತಾಯವಾಗಲಿದೆ.

ರಿಗ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇಟಲಿಯ ಡ್ರಿಲ್ ಮೆಕ್ ಕಂಪನಿಯನ್ನು ತೆಕ್ಕೆಗೆ ತೆಗೆದುಕೊಂಡಿರುವ ಎಂಇಐಎಲ್, ಆ ಕಂಪನಿಯ ತಂತ್ರಜ್ಞಾನ ಬಳಸಿಕೊಂಡು ಹೈದರಾಬಾದ್‌ನ ತಮ್ಮ ಘಟಕದಲ್ಲೇ ಈ ಅತ್ಯಾಧುನಿಕ ರಿಗ್ ಅಭಿವೃದ್ಧಿಪಡಿಸಿದೆ. ಡ್ರಿಲ್ ಮೆಕ್ ತಂತ್ರಜ್ಞಾನ ಮತ್ತು ಎಂಇಐಎಲ್‌ನ ಸಹಯೋಗದೊಂದಿಗೆ ದೇಶೀಯವಾಗಿ ಈ ಅತ್ಯಾಧುನಿಕ ರಿಗ್ ಸಿದ್ಧಗೊಂಡಿದೆ.

‘ಮೇಕ್ ಇನ್ ಇಂಡಿಯಾ’ ಭಾಗವಾಗಿ ಅಭಿವೃದ್ಧಿಪಡಿಸಿರುವ ಈ ರಿಗ್ ಅನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ (ಒಎನ್‌ಜಿಸಿ) ಹಸ್ತಾಂತರಿಸಲು ಎಂಇಐಎಲ್ ಸಿದ್ಧತೆ ನಡೆಸಿದೆ. ತೆಲಂಗಾಣದ ರಾಜಮಂಡ್ರಿ ವ್ಯಾಪ್ತಿಯ ಭೀಮಾವರಂನಲ್ಲಿರುವ ಒಎನ್‌ಜಿಸಿ ಪ್ರದೇಶದಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ.

ಎಂಇಐಎಲ್ ಕಂಪನಿ ಒಎನ್‌ಜಿಸಿಗಾಗಿ ಈಗಾಗಲೇ ಇಂಥ 10 ರಿಗ್‌ಗಳನ್ನು ತಯಾರಿಸಿದೆ. ಮೂರು ರಿಗ್‌ಗಳು ಕಾರ್ಯನಿರ್ವಹಿಸುತ್ತಿವೆ. ನಾಲ್ಕೈದು ವಾರಗಳಲ್ಲಿ ಒಎನ್‌ಜಿಸಿಯ ಇತರ ಪ್ರದೇಶಗಳಲ್ಲೂ ಉಳಿದ ರಿಗ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಎಂಇಐಲ್ ಮುಖ್ಯ ಎಂಜಿನಿಯರ್ ಸತ್ಯನಾರಾಯಣ ಕೋಟಪಲ್ಲಿ ತಿಳಿಸಿದರು.

ಇತ್ತೀಚೆಗೆ ತೆಲಂಗಾಣದ ರಾಜಮಂಡ್ರಿ ಸಮೀಪದ ಭೀಮಾವರಂನ ಒಎನ್‌ಜಿಸಿ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಪೂರೈಸಿರುವ ರಿಗ್‌ಗಳನ್ನು ಮೆಹಸಾನಾ, ಅಹಮದಾಬಾದ್, ಅಂಕ್ಲೇಶ್ವರ್, ಅಗರ್ತಲಾ ಮತ್ತು ಶಿವ್‌ಸಾಗರ್‌ನ ಒಎನ್‌ಜಿಸಿ ಪ್ರದೇಶಗಳಲ್ಲಿ (ತೈಲನಿಕ್ಷೇಪ ಸ್ಥಳಗಳು) ಅಳವಡಿಸಲಾಗಿದೆ. ಎರಡನೇ ಹಂತದ ರಿಗ್‌ಗಳ ತಯಾರಿಕೆಯೂ ಕೊನೆ ಹಂತದಲ್ಲಿದೆ’ ಎಂದರು.

ಜಾಗತಿಕ ಮಾರುಕಟ್ಟೆಗೆ ಹೆಜ್ಜೆ

ಸದ್ಯ ಅತ್ಯಾಧುನಿಕ ರಿಗ್‌ಗಳನ್ನು ಒಎನ್‌ಜಿಸಿಗೆ ಪೂರೈಸುತ್ತಿರುವ ಎಂಇಐಎಲ್ ಕಂಪನಿ, ಮುಂದೆ ಜಾಗತಿಕ ಮಾರುಕಟ್ಟೆಗೆ ಹೆಜ್ಜೆ ಇಡಲಿದೆ. ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಕಂಪನಿಯ ಹೈಟೆಕ್ ರಿಗ್ ಉತ್ಪಾದನಾ ಬೃಹತ್ ಘಟಕ ತಲೆ ಎತ್ತಲಿದೆ. ಹೀಗೆ ಎಂಇಐಎಲ್ ಚೀನಾ–ಯೂರೋಪ್ ಜತೆ ಸ್ಪರ್ಧೆಗಿಳಿಯಲಿದೆ.ಅತಿ ವೇಗ ಹಾಗೂ ಸಮಯದ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸುವ ಈ ರಿಗ್‌ಗಳು ಭವಿಷ್ಯದಲ್ಲಿ ದೇಶದ ಇಂಧನ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಲಿವೆ.

'ಈ ಯಂತ್ರಗಳ ಕಾರ್ಯಕ್ಷಮತೆ ದೇಶದ ಇಂಧನ ಕ್ಷೇತ್ರದ ಮೇಲೆ ಪೂರಕ ಪರಿಣಾಮ ಬೀರಲಿದೆ. ಈ ಮೂಲಕ ‘ಆತ್ಮನಿರ್ಭರ’ ಭಾರತ ಮತ್ತು ‘ಮೇಕ್ ಇನ್ ಇಂಡಿಯಾ‘ ಆಶಯಗಳಿಗೆ ಅನುಗುಣವಾಗಿ ದೇಶೀಯ ಇಂಧನ ರಿಗ್‌ಗಳನ್ನು ತಯಾರಿಸುವ ಏಕೈಕ ಸಂಸ್ಥೆಯಾಗಿ ಎಂಇಐಎಲ್ ಹೊರಹೊಮ್ಮುತ್ತಿದೆ'

-ಸತ್ಯನಾರಾಯಣ ಕೋಟಪಲ್ಲಿ, ಮುಖ್ಯ ಎಂಜಿನಿಯರ್, ಎಂಇಐಎಲ್, ಹೈದರಾಬಾದ್

(ಕಂಪನಿ ಆಹ್ವಾನದ ಮೇರೆಗೆ ವರದಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.