ಬೆಂಗಳೂರು: ಭಾರತೀಯರ ಇಷ್ಟದ ತಿನಿಸು ‘ವಡಾ ಪಾವ್‘ ಈಗ ವಿದೇಶಗಳಲ್ಲೂ ಜನಪ್ರಿಯ. ಅದರಲ್ಲೂ ಯುನೈಟೆಡ್ಅರಬ್ ಎಮಿರೇಟ್ಸ್ನ ದುಬೈನಲ್ಲಂತೂ ಬೀದಿ ಬದಿಯಲ್ಲೂ ಇದನ್ನು ಮಾರುತ್ತಾರೆ.

ಭಾರತೀಯರೇ ಹೆಚ್ಚಾಗಿ ಇರುವ ದುಬೈನಲ್ಲಿ ವಡಾ ಪಾವ್ ದಿನದಿಂದ ದಿನಕ್ಕೆ ಪ್ರಖ್ಯಾತಿ ಪಡೆಯುತ್ತಿದ್ದು, ಹೋಟೆಲ್ ಒಂದರಲ್ಲಿ ಇದಕ್ಕೆ ವಿಶೇಷ ರೂಪ ಕೊಟ್ಟು ಅಲ್ಲಿ ಇನ್ನಷ್ಟು ಜನಪ್ರಿಯಗೊಳಿಸಿದ್ದಾರೆ.

ದುಬೈನಲ್ಲಿ 22 ಕ್ಯಾರೆಟ್ ಚಿನ್ನ ಲೇಪಿತ ವಡಾ ಪಾವ್ ತಯಾರಿಸಲಾಗಿದ್ದು, ಇದು ವಿಶ್ವದ ಮೊದಲ ಚಿನ್ನದ ವಡಾ ಪಾವ್ ಎನ್ನಲಾಗಿದೆ. ಇದರ ಬೆಲೆ ಸುಮಾರು ₹2000 ಇದ್ದು, ಗ್ರಾಹಕರೊಬ್ಬರು ಇದನ್ನು ಖರೀಧಿಸಿ ತಿಂದು, ವಿಡಿಯೊ ಮಾಡಿ ಟಿಕ್ಟಾಕ್ಗೆ ಹಾಕಿದ್ದಾರೆ.

ಚಿನ್ನ ಲೇಪಿತ ಹಾಳೆಯನ್ನು ಆಲೂಬೊಂಡಾದ ಮೇಲೆ ಅಂಟಿಸಿ ವಿಶಿಷ್ಠವಾಗಿ ಇದನ್ನು ಮಾರಾಟ ಮಾಡಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.

ಇದನ್ನೂ ಓದಿ:ಮಡಿದ ಗಂಡನ ನೆನಪಿಗಾಗಿ ದೇವಸ್ಥಾನ ಕಟ್ಟಿದ ಮಹಿಳೆಯಿಂದ ನಿತ್ಯ ಪೂಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.