ಪಂಚಕುಲ (ಹರಿಯಾಣ): ದೀಪಾವಳಿ ಸಂಭ್ರಮಾಚರಣೆಗೆ ಕೇವಲ ಒಂದು ವಾರ ಉಳಿದಿದೆ. ಹಬ್ಬದ ಉತ್ಸಾಹದ ನಡುವೆ ಪಂಚಕುಲದ ಮಿಟ್ಸ್ ಹೆಲ್ತ್ಕೇರ್ ಎಂಬ ಫಾರ್ಮಾಸ್ಯುಟಿಕಲ್ ಕಂಪನಿ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿದೆ.

ತಮ್ಮ ಉದ್ಯೋಗಿಗಳನ್ನು ಸೆಲೆಬ್ರಿಟಿಗಳು ಮತ್ತು ಸ್ಟಾರ್ಗಳು ಎಂದು ಕರೆಯುವ ಮಿಟ್ಸ್ ಹೆಲ್ತ್ಕೇರ್ ಕಂಪನಿಯ ನಿರ್ದೇಶಕ, ಮಾಲೀಕ ಎಂ.ಕೆ ಭಾಟಿಯಾ ಅವರು, 12 'ಸ್ಟಾರ್ ಪರ್ಫಾರ್ಮರ್ಸ್'ಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಂ.ಕೆ ಭಾಟಿಯಾ, 'ಅವರೆಲ್ಲರೂ ಈ ಕಂಪನಿಯಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಕಾರುಗಳು ಕೇವಲ ದೀಪಾವಳಿ ಉಡುಗೊರೆಯಲ್ಲ. ಬದಲಿಗೆ ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಕಂಪನಿಯ ಮೇಲಿನ ವಿಶ್ವಾಸಾರ್ಹತೆಗೆ ಪ್ರತಿಫಲವಾಗಿದೆ. ನಾವು ಈಗಾಗಲೇ ಕಂಪನಿಯ 12 ಸ್ಟಾರ್ ಸೆಲೆಬ್ರಿಟಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ. ಶೀಘ್ರದಲ್ಲೇ ಇನ್ನೂ 38 ಸ್ಟಾರ್ಗಳಿಗೆ ಕಾರುಗಳನ್ನು ನೀಡಲಾಗುವುದು' ಎಂದು ಹೇಳಿದ್ದಾರೆ.

'ಕುತೂಹಲದ ಸಂಗತಿ ಎಂದರೆ ಕಾರುಗಳನ್ನು ಉಡುಗೊರೆಯಾಗಿ ಪಡೆದ ಕೆಲವು ಉದ್ಯೋಗಿಗಳಿಗೆ ಕಾರು ಚಲಾಯಿಸುವುದು ಹೇಗೆ? ಎಂದು ತಿಳಿದಿಲ್ಲ. ಕಂಪನಿ ಕಾರನ್ನು ಉಡುಗೊರೆಯಾಗಿ ಕೊಡುತ್ತದೆ ಎಂದು ಯಾರೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಈ ಅನಿರೀಕ್ಷಿತ ಉಡುಗೊರೆಯಿಂದ ಅವರು ಅಚ್ಚರಿಗೊಂಡಿದ್ದಾರೆ' ಎಂದು ಭಾಟಿಯಾ ಹೇಳಿದ್ದಾರೆ.
.ಜನ ಮೆಚ್ಚಿದ ಗುರುವಿಗೆ ಒಂದು ತೊಲೆ ಚಿನ್ನದ ಉಡುಗೊರೆ! .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.