ವಾರಾಣಸಿ: ಭಾರತದ ಸ್ಟ್ರೀಟ್ ಫುಡ್‌ಗಳನ್ನು ಮೆಚ್ಚದವರಿಲ್ಲ ಎನ್ನಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸ್ಟ್ರೀಡ್ ಫುಡ್‌ಗಳು ಜನಪ್ರಿಯತೆ ಗಳಿಸಿರುತ್ತವೆ.

ಇದೀಗ ವಾರಾಣಸಿಗೆ ಭೇಟಿಯಿತ್ತ ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಕಚೋರಿ, ಜಿಲೇಬಿಯನ್ನು ಸವಿದಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡು, ‘ವಾರಾಣಸಿಯಲ್ಲಿ ಸ್ಟ್ರೀಟ್ ಫುಡ್ ತಿಂದು ಆನಂದಿಸುತ್ತಿದ್ದೇನೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಈ ಹಿಂದೆ ಪತ್ನಿ ಐಕೊ ಸುಜುಕಿ ಅವರೊಂದಿಗಿನ ಫೋಟೊ ಹಂಚಿಕೊಂಡು, ‘ನಾವು ವಾರಾಣಸಿಯಲ್ಲಿದ್ದೇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.

ಭಾರತೀಯ ಆಹಾರದ ಬಗ್ಗೆ ಸುಜುಕಿ ಅವರಿಗಿರುವ ಪ್ರೀತಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರಾಣಸಿಯಲ್ಲಿ ಸಿಗುವ ಇನ್ನೂ ಅನೇಕ ವಿಶೇಷ ತಿಂಡಿಗಳನ್ನು ತಿನ್ನುವಂತೆ ಸಲಹೆ ನೀಡಿದ್ದಾರೆ. ಭಾರತವನ್ನು ಜನಪ್ರಿಯ ಮಾಡುವಲ್ಲಿ ಜಪಾನ್ ರಾಯಭಾರಿ ಸುಜುಕಿ ಅವರ ಪ್ರಯತ್ನ ಇಷ್ಟವಾಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.