ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಷೇರುಪೇಟೆಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರನ್ನು ಭೇಟಿಯಾಗಿದ್ದಾರೆ.

ಷೇರುಪೇಟೆ ಹೂಡಿಕೆ ಮತ್ತು ಇತರ ವ್ಯವಹಾರ ಕುರಿತಂತೆ ಪ್ರಧಾನಿ ಮೋದಿ ಜತೆ ರಾಕೇಶ್ ಜುಂಜುನ್ವಾಲಾ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭ ಪ್ರಧಾನಿ ಮೋದಿ ಜತೆ ರಾಕೇಶ್ ಅವರು ನಿಂತುಕೊಂಡಿರುವ ಫೋಟೊ ಒಂದನ್ನು ಟ್ವಿಟರ್ನಲ್ಲಿ ನರೇಂದ್ರ ಮೋದಿಯವರ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

ಈ ಭೇಟಿಯ ಫೋಟೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮತ್ತು ಫೋಟೊ ಕುರಿತಂತೆ ಜನರು ವಿವಿಧ ರೀತಿಯಲ್ಲಿ ಚರ್ಚಿಸಿದ್ದಾರೆ.

ಪ್ರಧಾನಿ ಭೇಟಿಯ ಸಂದರ್ಭದಲ್ಲಿ ರಾಕೇಶ್ ಅವರು ಪೂರ್ಣ ತೋಳಿನ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಆದರೆ ಅವರು ಶರ್ಟ್ಗೆ ಇಸ್ತ್ರಿ ಹಾಕಿರಲಿಲ್ಲ ಎಂದು ಹಲವರು ಕಮೆಂಟ್ ಮೂಲಕ ಟೀಕಿಸಿದ್ದಾರೆ. ಪ್ರಧಾನಿಯವರನ್ನು ಭೇಟಿಯಾಗುವಾಗ ರಾಕೇಶ್ ಅವರು ಉತ್ತಮ ವಸ್ತ್ರ ಧರಿಸಬೇಕಿತ್ತು ಎನ್ನುವುದು ಹಲವರ ವಾದವಾಗಿದೆ.

ಪ್ರಧಾನಿ ಮೋದಿ ಮತ್ತು ರಾಕೇಶ್ ಅವರ ಭೇಟಿಯ ವಿಚಾರಕ್ಕಿಂತಲೂ, ಅವರು ಧರಿಸಿದ್ದ ವಸ್ತ್ರದ ಕುರಿತು ಮತ್ತು ಕೇಂದ್ರ ಸರ್ಕಾರ ಹೂಡಿಕೆದಾರರ ಅಭಿವೃದ್ಧಿಗೆ ಮಾತ್ರ ಶ್ರಮಿಸುತ್ತಿದೆ, ಬೆಲೆ ಏರಿಕೆ ಮತ್ತು ಜನಸಾಮಾನ್ಯರ ಒಳಿತಿಗಾಗಿ ಏನೂ ಮಾಡುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ದೀಪಾವಳಿಗೆ ತಲಾ ಎರಡು ದೀಪ ಬೆಳಗಿಸಿ: ಪಿಎಂಎವೈ ಫಲಾನುಭವಿಗಳಿಗೆ ಮೋದಿ ಕರೆ

ಜತೆಗೆ ವಿವಿಧ ಮೀಮ್ ಮತ್ತು ಹಾಸ್ಯ ವಿಡಿಯೊ ಮೂಲಕ ಪ್ರಧಾನಿ ಮೋದಿ ಟ್ವಿಟರ್ ಪೋಸ್ಟ್ಗೆ ಜನರು ಪ್ರತಿಕ್ರಿಯೆ ನೀಡಿದ್ದು, ಅದು ವೈರಲ್ ಆಗಿದೆ.

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಪ್ರಧಾನಿ ಮೋದಿ ಸಂತಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.