ಬೆಂಗಳೂರು: ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರನ ಸನ್ನಿಧಿಯಲ್ಲಿ ರೀಲ್ಸ್ ಮಾಡಿರುವ ಆರೋಪದ ಮೇಲೆ ವೈಎಸ್ಆರ್ ಕಾಂಗ್ರೆಸ್ ಶಾಸಕ ಡುವ್ವಾಡ್ ಶ್ರೀನಿವಾಸ್ ಅವರ ಸಂಗಾತಿ ಹಾಗೂ ವಿಡಿಯೊ ಕ್ರಿಯೇಟರ್ ಮಾಧುರಿ ದಿವ್ವಾಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೇವಾಲಯದ ನಿಯಮಾವಳಿಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಧುರಿ ಮೇಲೆ ಆರೋಪ ಮಾಡಿದ್ದಾರೆ.

ವಿಜಯದಶಮಿ ಪ್ರಯುಕ್ತ ಶಾಸಕ ಡುವ್ವಾಡ್ ಶ್ರೀನಿವಾಸ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಾಧುರಿ ದಿವ್ವಾಳ ಅವರು ದೇವಾಲಯದ ಆವರಣದಲ್ಲಿ ರೀಲ್ಸ್ ವಿಡಿಯೊ ಮಾಡಿದ್ದರು.

ಈ ಕುರಿತು ಖಾಸಗಿ ವಾಹಿನಿಗಳ ಜೊತೆ ಮಾತನಾಡಿರುವ ಮಾಧುರಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧುರಿ, ವೈಎಸ್ಆರ್ ಕಾಂಗ್ರೆಸ್ ಶಾಸಕ ಡುವ್ವಾಡ್ ಶ್ರೀನಿವಾಸ್ ಅವರ ಜೊತೆ ಲೀವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.