ಬೆಂಗಳೂರು: ತಮಿಳುನಾಡಿನ ಯುವಕ ಕೆ. ಪ್ರವೀಣ್ ಎಂಬವರು ಅತ್ಯಂತ ಉದ್ದದ ನಾಲಿಗೆ ಹೊಂದಿರುವ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹೆಚ್ಚು ಮಾತನಾಡುವವರನ್ನು ಅವರ ನಾಲಿಗೆ ಉದ್ದವಾಗಿದೆ ಎನ್ನುವುದು ಸಾಮಾನ್ಯವಾಗಿ ರೂಢಿಯಲ್ಲಿದೆ. ಆದರೆ ಪ್ರವೀಣ್, ಅತ್ಯಂತ ಉದ್ದದ ನಾಲಿಗೆ ಕಾರಣಕ್ಕಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.

ವಿರುತ್ನಗರ್ ಜಿಲ್ಲೆಯ ತಿರುತಂಗಳ್ನ ನಿವಾಸಿ ಪ್ರವೀಣ್ (20), 10.8 ಸೆ.ಮಿ ಉದ್ದದ ನಾಲಿಗೆ ಹೊಂದಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆಯಾಗಿದೆ.

ಮುಂದೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕೂಡ ಸ್ಥಾನ ಪಡೆಯುವ ಅಭಿಲಾಷೆ ಹೊಂದಿದ್ದಾರೆ ಪ್ರವೀಣ್.

ಸಾಮಾನ್ಯವಾಗಿ ಪುರುಷರ ನಾಲಿಗೆ ಸುಮಾರು 8.5 ಸೆ.ಮಿ ವರೆಗೆ ಉದ್ದ ಬೆಳೆಯುತ್ತದೆ. ಆದರೆ ಉದ್ದದ ನಾಲಿಗೆ ಹೊಂದಿರುವ ಪ್ರವೀಣ್ ಅದರಲ್ಲಿಯೇ ದಾಖಲೆ ಮಾಡಿದ್ದು, ನಾಲಿಗೆ ಮೂಲಕವೇ ಪೇಟಿಂಗ್ ಕೂಡ ಮಾಡುವ ಕಲೆ ಸಿದ್ಧಿಸಿಕೊಂಡಿದ್ದಾರೆ.

ದೇಣಿಗೆ ಸಂಗ್ರಹಿಸಿ ಜೊಮ್ಯಾಟೊ ಡೆಲಿವರಿ ಬಾಯ್ಗೆ ಬೈಕ್ ಕೊಡಿಸಿದ ಯುವಕ

ಪ್ರವೀಣ್, ರೊಬಾಟಿಕ್ಸ್ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡುತ್ತಿದ್ದಾರೆ. ದಾಖಲೆಯ ಉದ್ದದ ನಾಲಿಗೆಯಿಂದಾಗಿ ಸಾಮಾಜಿಕ ತಾಣಗಳಲ್ಲಿ ಕೂಡ ವೈರಲ್ ಆಗಿದ್ದಾರೆ.

ಕಣ್ಣಾನೆ ಕಣ್ಣೇ…. ಹೊಸ ಲುಕ್ನಲ್ಲಿ ಮಗಳ ಜತೆ ಮಹೇಂದ್ರ ಸಿಂಗ್ ಧೋನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.