ಪ್ರಯಾಣಿಕರನ್ನು ಹೊತ್ತು ಆಗಸದಲ್ಲಿ ಮೋಡಗಳನ್ನು ಸೀಳಿ ಮೇಲೆ ಹಾರುತ್ತ ಸಾಗುವ ವಿಮಾನ ಸೇತುವೆಯ ಕೆಳಗೆ ಸಿಲುಕುವುದೆಂದರೆ?! ಇಂಥದೊಂದು ವಿಚಿತ್ರ ಘಟನೆ ಚೀನಾದ ಹಾರ್ಬಿನ್ನಲ್ಲಿ ನಡೆದಿದೆ. ಹಿಂದೆ–ಮುಂದೆ ಸಾಗದೆ ವಿಮಾನ ಸೇತುವೆ ಕೆಳಗೆ ಸಿಲುಕಿಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಮಾನದ ಭಾಗಗಳನ್ನು ಬೇರ್ಪಡಿಸಿ ಉದ್ದನೆಯ ಟ್ರಕ್ ಮೂಲಕ ಸಾಗಿಸುವ ಸಮಯದಲ್ಲಿ ಸೇತುವೆಯ ಕೆಳಗೆ ವಿಮಾನ ಸಿಲುಕಿದೆ ಎಂದು ನ್ಯೂ ಚೈನಾ ಟಿವಿ ವರದಿ ಮಾಡಿದೆ. ಮೇಲ್ಸೇತುವೆ ಅಡಿಯಲ್ಲಿ ವಿಮಾನದ ಮುಖ್ಯಭಾಗವು ಅಲುಗಾಡಂತೆ ಸಿಲುಕಿದೆ. ಇದರಿಂದ ಬಿಡಿಸಿಕೊಂಡು ಮುಂದೆ ಸಾಗುವುದು ಬಗೆ ಹೇಗೆ ಎಂದು ಹಲವು ಜನರು ಅತ್ತಿತ್ತ ಓಡಾಡುವುದನ್ನು ವಿಡಿಯೊದಲ್ಲಿ ಕಾಣಬಹುದು.

ಎರಡು ದಿನಗಳ ಹಿಂದೆ ಅಪ್ಲೋಡ್ ಆಗಿರುವ ವಿಡಿಯೊಟ್ವಿಟರ್, ಯುಟ್ಯೂಬ್ಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿರುವ ವಿಡಿಯೊವೀಬೊದಂತಹ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಡಿಯೊ ಸಾಕಷ್ಟು ಕಾಮೆಂಟ್ಗಳನ್ನು ಪಡೆದಿದೆ.

ಟ್ರಕ್ನ ಚಾಲಕ ಟ್ರಕ್ ಟೈರ್ಗಳ ಗಾಳಿ ಹೊರತೆಗೆಯುವ ಮೂಲಕ ಎತ್ತರವನ್ನು ತಗ್ಗಿಸುವ ಉಪಾಯ ಮಾಡಿದ್ದಾನೆ. ಸೇತುವೆಯಿಂದ ಸ್ವಲ್ಪ ಅಂತರ ಸಾಧ್ಯವಾಗುತ್ತಿದ್ದಂತೆ ವಿಮಾನದ ಸಹಿತ ಟ್ರಕ್ನ್ನು ಮುಂದೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ನ್ಯೂ ಚೈನಾ ಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.