ಬೆಂಗಳೂರು: ಫಿಲಿಪ್ಪೀನ್ಸ್‌ನಲ್ಲಿ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಕ್ರಿಸ್ಪಿ ಚಿಕನ್ ಖಾದ್ಯ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಆಹಾರ ಡೆಲಿವರಿ ಲಭಿಸಿ, ಅದನ್ನು ತೆರೆದು ನೋಡಿದಾಗ ಅದರಲ್ಲಿ ಗರಿಗರಿಯಾದ ಫ್ರೈಡ್ ಚಿಕನ್ ಬದಲಿಗೆ ಫ್ರೈಡ್ ಟವೆಲ್ ಕಾಣಿಸಿದೆ.

ಅಲಿಕ್ ಪೆರೆಝ್ ಎಂಬಾಕೆ ತನ್ನ ಮಗನಿಗಾಗಿ ಜೋಲಿಬಿ ಎಂಬ ಫಿಲಿಪ್ಪೀನ್ಸ್‌ನ ಪ್ರಸಿದ್ಧ ಫಾಸ್ಟ್ ಫುಡ್ ಸಂಸ್ಥೆಯಿಂದ ರಾತ್ರಿ ಊಟಕ್ಕೆ ಎಂದು ಕ್ರಿಸ್ಪಿ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದರು.

ಊಟ ಡೆಲಿವರಿ ಬಂದಾಗ, ಅದನ್ನು ತೆರೆದು ನೋಡಿದಾಗ, ಅಲ್ಲಿ ಚಿಕನ್ ಬದಲು ಕಿಚನ್‌ನಲ್ಲಿ ಬಳಸುವ ಟವೆಲ್ ಅನ್ನು ಮಸಾಲೆ ಬೆರೆಸಿ ಫ್ರೈ ಮಾಡಿ ಕೊಟ್ಟಿರುವುದು ಕಂಡುಬಂದಿದೆ. ಆರಂಭದಲ್ಲಿ ಚಿಕನ್ ಎಂದೇ ಅಲಿಕ್ ಮಗ ತಿನ್ನಲು ಮುಂದಾದಾಗ, ಚಿಕನ್ ಬದಲು ಟವೆಲ್ ಇದ್ದಿದ್ದು ನೋಡಿ ಹೌಹಾರಿದ್ದಾರೆ.

ಅಲಿಕ್ ಮಗ, ಚಿಕನ್ ಕ್ರಿಸ್ಪಿಯಾಗಿದೆ ಆದರೆ ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ದೂರಿದಾಗ ಸ್ವತಃ ಆಕೆಯೇ ಪರಿಶೀಲಿಸಿ ನೋಡಿದಾಗ ಈ ಸಂಗತಿ ಬಯಲಾಗಿದೆ. ಕೂಡಲೇ ಆಕೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದು ವಿಡಿಯೊ ಮತ್ತು ಫೋಟೊ ಪೋಸ್ಟ್ ಮಾಡಿದ್ದಾರೆ.

ಉದ್ಯೋಗ ಕೋರಿ 3D ವಿಡಿಯೊ ಅರ್ಜಿ ಸಲ್ಲಿಸಿದ ಯುವಕನಿಗೆ ಸಿಕ್ತು ಡ್ರೀಮ್ ಜಾಬ್!

ಅಲಿಕ್ ಪೋಸ್ಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಜನರು ಜೋಲಿಬಿ ಫುಡ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಂಪನಿ ದೇಶದಲ್ಲಿ ತಾತ್ಕಾಲಿಕವಾಗಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ವಿಡಿಯೊ: ಪ್ಲಾಸ್ಟಿಕ್ ಬಾಟಲ್ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.