24 ವರ್ಷಗಳ ಹಿಂದೆ ಕೇವಲ 10 ರೂಪಾಯಿ ದಿನಗೂಲಿಗೆ ಹೋಗುತ್ತಿದ್ದ ನಾರಿಯರು ಇಂದು ಅರ್ಧ ಎಕರೆ ಜಮೀನನ್ನು ಲೀಸ್‌ಗೆ ಪಡೆದು 77 ರಾಗಿ ತಳಿಯನ್ನು ಉಳಿಸಿ ಬೆಳೆಸಲು ಕೈಜೋಡಿಸಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯ ವಿನಾಯಕ ಸ್ತ್ರೀ ಶಕ್ತಿ ಸಂಘದ ಮೂಲಕ ಹಲವು ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಸಿರಿಧಾನ್ಯದ ಜೊತೆಗೆ ರಾಗಿಯ 77 ತಳಿಗಳ ಬೀಜ ಬೆಳೆದು ಗಮನ ಸೆಳೆದಿದ್ದಾರೆ.
ರಾಗಿಯ 77 ತಳಿಯಲ್ಲಿ ಒಂದೊಂದು ತಳಿಯ 50–100 ಗ್ರಾಮ್‌ನಿಂದ ಒಟ್ಟಾರೆ 2 ಕ್ವಿಂಟಲ್‌ನಷ್ಟು ರಾಗಿಯ ಬೀಜವನ್ನು ಬೆಳೆದು ಕೊಡಲಾಗಿದೆ. ಇದರಿಂದ ನಮ್ಮ ನೆಲದ ಸಿರಿಧಾನ್ಯ ತಳಿಯ ಸಂರಕ್ಷಿಸಿದ ಸಂತೃಪ್ತಿಯೂ ನಮಗಿದೆರತ್ನಾ ಹೊಸಳ್ಳಿ ವಿನಾಯಕ ಸ್ತ್ರೀ ಶಕ್ತಿ ಸಂಘದ ಸಂಚಾಲಕಿ
ಕರ್ನಾಟಕ ರಾಜ್ಯ ಸರ್ಕಾರ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. 77 ರಾಗಿ ತಳಿಗಳನ್ನು ಸಂರಕ್ಷಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ವಿನಾಯಕ ಸ್ತ್ರೀ ಶಕ್ತಿ ಸಂಘದಂತ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ಸವಲತ್ತು ಸಿಗಬೇಕುಜಿ.ಕೃಷ್ಣಪ್ರಸಾದ ಸಹಜ ಸಮೃದ್ಧ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.