ತೀವ್ರ ಬಡತನದಿಂದ ಬಳಲುವ ಮಹಿಳೆಯರ ಪ್ರಮಾಣವು ಮುಂದಿನ ಆರು ವರ್ಷಗಳಲ್ಲಿ ಹೆಚ್ಚಾಗಲಿದೆ. 2030ರ ಹೊತ್ತಿಗೆ ಪ್ರತಿ 10 ಮಹಿಳೆಯರಲ್ಲಿ ಒಬ್ಬ ಮಹಿಳೆ ಬಡವಳಾಗುತ್ತಾಳೆ. ಅದೇ ವೇಳೆಗೆ ಜಗತ್ತಿನಾದ್ಯಂತ, ದಿನವೊಂದರಲ್ಲಿ ಕನಿಷ್ಠ 2.15 ಡಾಲರ್ (ಅಂದಾಜು ₹177.8) ವೆಚ್ಚ ಮಾಡಲಾಗದ ಮಹಿಳೆಯರ ಸಂಖ್ಯೆ 34.24 ಕೋಟಿಗೆ ಏರಿಕೆಯಾಗಲಿದೆ ಎಂದೂ ವಿಶ್ವ ಸಂಸ್ಥೆ ಅಂದಾಜಿಸಿದೆ. ಇಷ್ಟೇ ಅಲ್ಲ, ಪುರುಷರಿಗೆ ಹೋಲಿಸಿದರೆ ಮಹಿಳೆಯೇ ಬಡವಳು. 2030ರ ಹೊತ್ತಿಗೆ ತೀವ್ರ ಬಡತನಕ್ಕೆ ದೂಡಲ್ಪಡುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ 1.2 ಪಟ್ಟು ಹೆಚ್ಚು ಎಂದಿದೆ ವಿಶ್ವ ಸಂಸ್ಥೆ. ಭಾರತದ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ