2019ರಲ್ಲಿ ಅತೀ ಹೆಚ್ಚು ಟ್ರೋಲ್ಗೊಳಾಗಿದ್ದು ನಾನೇ...ಹೀಗೆಂದು ಹೇಳಿದ್ದು ಬ್ರಿಟನ್ ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್.

ವಾರದ ಹಿಂದೆ ವಿಶ್ವ ಮಾನಸಿಕ ಆರೋಗ್ಯ ದಿನ ಪ್ರಯುಕ್ತ ಹ್ಯಾರಿ ಮತ್ತು ಮೇಘನ್ ಪಾಡ್ಕಾಸ್ಟ್ ಆರಂಭಿಸಿದ್ದು ಟೀನೇಜರ್ ಥೆರಪಿ ಎಂಬ ಶೀರ್ಷಿಕೆಯ ಮೊದಲ ಭಾಗದಲ್ಲಿ ಮೇಘನ್ ತಮ್ಮ ಮೇಲೆ ನಡೆದಿದ್ದ ಟ್ರೋಲ್ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಹೈಸ್ಕೂಲ್ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಪಾಡ್ಕಾಸ್ಟ್ ಇದಾಗಿದ್ದು, ಶಾಲಾ ಮಕ್ಕಳ ಸಮಸ್ಯೆಯಿಂದಲೇ ಮೇಘನ್ ಮಾತು ಆರಂಭಿಸಿದ್ದಾರೆ.

‘ಈ ಕೋವಿಡ್ ಕಾಲದಲ್ಲಿ ಅತೀ ಹಚ್ಚು ಒತ್ತಡಕ್ಕೊಳಗಾದವರು ವಿದ್ಯಾರ್ಥಿಗಳು. ನೀವೀಗ ಶಾಲೆಗಳಿಗೆ ಹೋಗುತ್ತಿಲ್ಲ, ಆದರೆ ಕಲಿಕೆ ಮುಂದುವರಿದಿದೆ, ಅದು ಡಿಜಿಟಲ್ ರೀತಿಯಲ್ಲಿ. ಹಲವಾರು ಮಕ್ಕಳಿಗೆ ಇದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸತ್ಯ. ಎಲ್ಲರಿಗೂ ಎಲ್ಲರ ಜತೆಯೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿದ್ದರೂ ಒಬ್ಬಬ್ಬೊರೂ ಒಂಟಿತನ ಅನುಭವಿಸುತ್ತಿದ್ದೀರಿ, ಆದರೂ ನಾವು ಧೈರ್ಯದಿಂದ ಬದುಕು ಮುಂದುವರಿಸಬೇಕಿದೆ‘.

‘2019ರಲ್ಲಿ ಜಗತ್ತಿನ ಅತೀ ಹಚ್ಚು ಟ್ರೋಲ್ಗೊಳಗಾದ ವ್ಯಕ್ತಿ ನಾನು. ಆ ವರ್ಷ 8 ತಿಂಗಳು ನಾನೆಲ್ಲೂ ಹೊರಗೆ ಕಾಣಿಸಿಕೊಳ್ಳಲಿಲ್ಲ. ನಾನು ಪ್ರಸವ ರಜೆಯಲ್ಲಿದ್ದೆ. ಆಮೇಲೆ ಮಗುವಿನ ಆರೈಕೆಯಲ್ಲಿಯೂ ರಜೆ ಮುಂದುವರಿಸಿದೆ. ಹೀಗಿದ್ದರೂ ನಾನು ಹಲವಾರು ರೀತಿಯಲ್ಲಿ ಕುಹಕಕ್ಕೊಳಗಾದೆ. ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದಾದೆ. ನಾನು ಇನ್ನು ಏಕೆ ಬದುಕಬೇಕು ಎಂದು ಸ್ವಯಂ ಪ್ರಶ್ನೆ ಕೇಳಿಕೊಂಡೆ. ಆ ಪರಿಸ್ಥಿತಿಯಲ್ಲಿ ನನ್ನ ಮಾನಸಿಕ ಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಈಗ ಊಹಿಸಿಕೊಳ್ಳಲೂ ಇಷ್ಟವಿಲ್ಲ, ನನ್ನನ್ನು ಯಾರು ದೂಷಿಸಿದ್ದರು ಎಂಬುದರ ಬಗ್ಗೆ ನಾನು ಯೋಚಿಸುತ್ತಿಲ್ಲ. ಕೆಲವೊಮ್ಮೆ 10 ಮಂದಿ, ಕೆಲವೊಮ್ಮೆ 20, ಇನ್ನೂ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು. ಸುಳ್ಳನ್ನು ಅದೆಷ್ಟು ಜನರು ಹೇಳಿದರೂ ಅದು ಸತ್ಯವಾಗಲ್ಲ ಅಲ್ಲವೇ'?

ಮೇಘನ್ ಹೇಳಿದ್ದೂ ಅಕ್ಷರಶಃ ನಿಜ. 2019 ಮಾತ್ರವಲ್ಲ 2020ರಲ್ಲಿಯೂ ಟ್ರೋಲ್ಗಳು ಮೇಲುಗೈ ಸಾಧಿಸಿವೆ ಎಂಬುದಕ್ಕೆ ಹಲವಾರು ನಿದರ್ಶನಗಳು ಇವೆ. ನಾಡು ನುಡಿಯ ವೈರುಧ್ಯಗಳ ಬಗ್ಗೆ ಟ್ರೋಲ್ ಮಾಡುವುದು, ಸಂಸ್ಕೃತಿ- ಆಚಾರ, ಉಡುಗೆ-ತೊಡುಗೆ ಇಲ್ಲವೇ ತೀರಾ ವೈಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿ ಎದುರಾಳಿಯನ್ನು ಮಣಿಸಲು ಈ ಟ್ರೋಲ್ಗಳುಬಳಕೆಯಾಗಿವೆ. ಹೊಸ ಐಫೋನ್ ಜತೆ ಚಾರ್ಜರ್ ಇಲ್ಲ ಎಂಬುದು ಒಂದು ಬಗೆಯ ಟ್ರೋಲ್ ಆದರೆ ತನಿಷ್ಕ್ ಜಾಹೀರಾತಿನ ಬಗ್ಗೆ ಕೇಳಿಬಂದದ್ದು ದ್ವೇಷದ ಟೀಕೆಯಾಗಿತ್ತು. ಮಹಿಳೆಯರ ಮೇಲೆ ಪುರುಷರ ದೌರ್ಜನ್ಯದ ಬಗ್ಗೆ ದನಿಯೆತ್ತಿದಮೀಟೂ ಅಭಿಯಾನದ ರೂವಾರಿ ತರಾನಾ ಬರ್ಕ್ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿ, ಈಕೆಯನ್ನು ಯಾರು ಮುಟ್ಟುತ್ತಾರೆ? ಎಂದು ಬಾಡಿ ಶೇಮಿಂಗ್ ಮಾಡಿದ ಟ್ರೋಲ್ಗಳನ್ನು ನಾವು ನೋಡಿದ್ದೇವೆ. ಕೆಲವು ತಿಂಗಳು ಹಿಂದೆ 'ಕೊತ್ಮಿರಿ' ಎಂದು ಮಹಿಳೆಯೊಬ್ಬಳು ಹೇಳಿದ್ದು ಟ್ರೋಲ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಟ್ರೋಲ್ಗಳು ಎಲ್ಲಿಂದ ಹುಟ್ಟಿಕೊಳ್ಳುತ್ತವೆ? ಯಾಕಾಗಿ ಮಾಡಲಾಗುತ್ತದೆ ಎಂಬುದನ್ನು ತಿಳಿಯದೆಯೇ ಹಲವಾರು ನೆಟ್ಟಿಗರು ಇದಕ್ಕೆ ಬೆಂಬಲ ನೀಡುತ್ತಾರೆ. ಭಿನ್ನಾಭಿಪ್ರಾಯ, ಸೈದಾಂತಿಕ ವಿಚಾರದಲ್ಲಿನ ಭಿನ್ನತೆ ಅಥವಾ ವ್ಯಕ್ತಿಯ ಮೇಲಿನ ಅಸೂಯೆ, ದ್ವೇಷವೇ ಆಗಿರಲಿ ಅವರ ವಿರುದ್ಧ ಟ್ರೋಲ್ ದಾಳಿ ನಡೆಸಿ ಪೀಡಿಸುತ್ತಿರುವುದು ದಿನ ನಿತ್ಯ ನಡೆಯುತ್ತಿವೆ. ಸರಿಯೋ ತಪ್ಪೋ ಎಂಬ ವಿವೇಚನೆ ಇಲ್ಲದೆವ್ಯಕ್ತಿಗಳನ್ನು ಟಾರ್ಗೆಟ್ ಮಾಡುವ ಅಥವಾ ಕುಹಕವಾಡುವ ಟ್ರೋಲ್ಗಳ ಯಥೇಚ್ಛವಾಗಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಡಿಜಿಟಲ್ ವೇದಿಕೆಯಲ್ಲಿ ಸಂಯಮ, ಗೌರವ ಎಲ್ಲವೂ ಇಲ್ಲಿ ಗೌಣವಾಗಿರುವಾಗ ಇನ್ನೊಬ್ಬರ ಮಾನಸಿಕ ಸ್ಥಿತಿ ಬಗ್ಗೆ ಯೋಚಿಸುವ ಕನಿಷ್ಠ ಮಾನವೀಯತೆಯಾದರೂ ನಮ್ಮಲ್ಲಿ ಉಳಿಯಬೇಕಿದೆ.

ಪಾಡ್ಕಾಸ್ಟ್ ಕೇಳಿ:Podcast–ವನಿತಾ ಧ್ವನಿ: ಬದುಕು ಸಾಕೆಂದೆನಿಸಿತ್ತು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.