ಮೆಕ್ಸಿಕೊ ನಗರ: ಉತ್ತರ ಮೆಕ್ಸಿಕೊ ಗಡಿಯಲ್ಲಿ ನಡೆಯುತ್ತಿರುವ ಸಣ್ಣ ಪ್ರಮಾಣದ ಕಲ್ಲಿದ್ದಲು ಗಣಿಗಾರಿಕಾ ಯೋಜನಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಏಳು ಕಾರ್ಮಿಕರು ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ.

‘ಪ್ರವಾಹ ಮತ್ತು ಭೂ ಕುಸಿತದಿಂದಾಗಿ, ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ‘ ಎಂದು ಕೊವಾಹುಯಿಲಾ ಕಾರ್ಮಿಕ ಇಲಾಖೆ ತಿಳಿಸಿದೆ.

ಮುಜ್ಕ್ವಿಜ್ ಟೌನ್ಶಿಪ್ನಲ್ಲಿರುವ ಗಣಿ, ಕಡಿದಾದ ಭೂಮಿಯ ಗೋಡೆಗಳನ್ನು ಹೊಂದಿರುವ ಒಂದು ಬಗೆಯ ಆಳವಾದ, ಕಿರಿದಾದ, ತೆರೆದ ಹಳ್ಳದಂತಿದೆ. ಈ ಪ್ರದೇಶವು ಟೆಕ್ಸಾಸ್ನ ಈಗಲ್ ಪಾಸ್ನಿಂದ ನೈರುತ್ಯಕ್ಕೆ 130 ಕಿ.ಮೀ ದೂರದಲ್ಲಿದೆ.

ನೆಲದಾಳದಲ್ಲಿ ಸಿಲುಕಿರುವ ಕಾರ್ಮಿಕರ ಶೋಧ ಕಾರ್ಯ ಮುಂದುವರಿದಿದೆ. ಏಳು ಮಂದಿಯನ್ನು ರಕ್ಷಿಸಲು, ಹಳ್ಳದಿಂದ ನೀರನ್ನು ಹೊರ ತೆಗೆಯಲಾಗುತ್ತಿದೆ ಎಂದು ಫೆಡರಲ್ ಸಿವಿಲ್ ಡಿಫೆನ್ಸ್ ಆಫೀಸ್ ತಿಳಿಸಿದೆ.

ಕೊವಾಹುಯಿಲಾದಲ್ಲಿರುವ ಈ ಗಣಿಗಾರಿಕಾ ಪ್ರದೇಶದಲ್ಲಿ ಹಿಂದೆಯೂ ಅಪಘಾತಗಳು ಸಂಭವಿಸಿವೆ. ಈ ಯೋಜನೆಯ ಸಬಿನಾಸ್ ಗಣಿಯಲ್ಲಿ 2006ರ ಫೆಬ್ರವರಿಯಲ್ಲಿ ಮೀಥೇನ್ ಅನಿಲ ಸ್ಪೋಟಗೊಂಡಿತ್ತು. ಇದರಿಂದ 65 ಕಾರ್ಮಿಕರು ಮೃತಪಟ್ಟಿದ್ದರು.

ಇದನ್ನೂ ಓದಿ... ಕೋವಿಡ್ ಲಸಿಕೆ ಪಡೆದ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ ಫ್ರಾನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.