ಬ್ಯಾಂಕಾಕ್: ಮ್ಯಾನ್ಮಾರ್ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಪರವಾನಗಿ ಇಲ್ಲದೆ ವಾಕಿ–ಟಾಕಿ ಬಳಕೆ ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಚಾರಣೆಯ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ ಎಂದು ಅದು ಹೇಳಿದೆ.

ನೊಬೆಲ್ ಪ್ರಶಸ್ತಿ ವಿಜೇತೆ 76 ವರ್ಷದ ಸೂಕಿ ಮೇಲಿನ ಸುಮಾರು ಹನ್ನೆರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಗರಿಷ್ಠ 100 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿ ಮ್ಯಾನ್ಮಾರ್ನಲ್ಲಾದ ಸೇನಾ ದಂಗೆಯಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದರು.

ಮ್ಯಾನ್ಮಾರ್ನ ರಾಜಧಾನಿ ನಯ್ಪಿಯಡೊದಲ್ಲಿ ಅವರ ವಿಚಾರಣೆಯನ್ನು ನ್ಯಾಯಾಲಯದ ಮುಚ್ಚಿದ ಕೊಠಡಿಗಳಲ್ಲಿ ನಡೆಸಲಾಗಿದೆ. ಸೂಕಿ ಪರ ವಾದಿಸಲು ಅವರ ಐವರೂ ವಕೀಲರಿಗೆ ಅಲ್ಲಿನ ನ್ಯಾಯಾಲಯ ನಿರ್ಬಂಧ ವಿಧಿಸಿದ್ದು, ಅವರ ಸಂವಹನಗಳು ‘ದೇಶವನ್ನು ಅಸ್ಥಿರಗೊಳಿಸಬಹುದು’ಎಂದು ಅದು ಹೇಳಿದೆ.

ಮಿಲಿಟರಿ ಬೆಂಬಲಿತ ಪಕ್ಷವನ್ನು ಸೋಲಿಸಿ ಸೂಕಿ ಪಕ್ಷವು ಪ್ರಚಂಡ ಗೆಲುವು ಪಡೆದ ವರ್ಷದ ನಂತರ ಈ ತೀರ್ಪು ಬಂದಿದೆ.

ಸೇನಾ ದಂಗೆ ನಡೆದು ಹಲವು ತಿಂಗಳುಗಳೇ ಆಗಿದ್ದರೂ ಸಹ ಈಗಲೂ ಜನರು ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಬಂಧನದ ಭೀತಿಯ ನಡುವೆಯೂ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.