ಲಂಡನ್: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ಸ್ವರೂಪದ ವಿರುದ್ಧವೂ ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದಾಗಿ ಫೈಜರ್ ಮತ್ತು ಮಾಡರ್ನಾ ಪರೀಕ್ಷೆ ನಡೆಸುತ್ತಿವೆ ಎಂದು ‘ಸಿಎನ್‌ಎನ್’ ವರದಿ ಮಾಡಿದೆ.

ವೈರಸ್‌ನ ಹೊಸ ಸ್ವರೂಪಗಳ ವಿರುದ್ಧವೂ ಮಾಡರ್ನಾ ಲಸಿಕೆ ಪ್ರತಿಕಾಯಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮುಂದಿನ ವಾರಗಳಲ್ಲಿ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈಗಾಗಲೇ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಬ್ರಿಟನ್‌ನಲ್ಲಿ ಕಂಡುಬಂದಿರುವ ವೈರಸ್‌ನ ಹೊಸ ಸ್ವರೂಪವನ್ನೂ ನಿಷ್ಕ್ರಿಯಗೊಳಿಸಬಹುದು. ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವವರ ರಕ್ತದ ಮಾದರಿಗಳ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಫೈಜರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:ಕೋವಿಡ್ ನೆಗೆಟಿವ್ ಪ್ರಮಾಣಪತ್ರದ ಜೊತೆ ಬ್ರಿಟನ್ನಿಂದ 15 ಮಂದಿ ಮಂಗಳೂರಿಗೆ

ಈ ವಿಚಾರವಾಗಿ ಫೈಜರ್ ಮತ್ತು ಮಾಡರ್ನಾ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಹೊಸ ಸ್ವರೂಪ ಶೇ 40ರಿಂದ 70ರಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.

ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಗಳು ವೈರಸ್‌ನ ಹೊಸ ಸ್ವರೂಪದ ವಿರುದ್ಧ ಕಾರ್ಯನಿರ್ವಹಿಸದು ಎನ್ನಲು ಪುರಾವೆಗಳಿಲ್ಲ ಎಂದು ಈಗಾಗಲೇ ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.