ಮಾಸ್ಕೊ: ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿರುವ ಆರೋಪವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಳ್ಳಿ ಹಾಕಿದ್ದಾರೆ.

ಜರ್ಮನಿಯ ಚಾನ್ಸೆಲರ್ ಒಲಾಫ್ ಶೋಲ್ಜ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪುಟಿನ್, ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ಆರೋಪಗಳು 'ಸುಳ್ಳು' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಕ್ರಮಿತ ನಗರಗಳಲ್ಲಿ ರಷ್ಯಾ ಸೈನಿಕರು ಅತ್ಯಾಚಾರ ಎಸುಗುತ್ತಿದ್ದಾರೆ: ಉಕ್ರೇನ್ ಸಚಿವ

ರಷ್ಯಾ ಬೇಡಿಕೆಗಳನ್ನು ಈಡೇರಿಸಿದಲ್ಲಿ ಮಾತ್ರ ಉಕ್ರೇನ್ ಜೊತೆ ಮಾತುಕತೆ ಸಾಧ್ಯ ಎಂದು ಪುಟಿನ್ ಉತ್ತರಿಸಿದ್ದಾರೆ.

ಉಕ್ರೇನ್ ಜೊತೆಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ. ಉಕ್ರೇನ್ನಲ್ಲಿ ಶಾಂತಿ ಬಯಸುವ ಎಲ್ಲರೊಂದಿಗೂ ಮಾತುಕತೆ ನಡೆಸಲು ರಷ್ಯಾ ತಯಾರಾಗಿದೆ. ಆದರೆ ರಷ್ಯಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಷರತ್ತು ಒಪ್ಪಿಕೊಳ್ಳಬೇಕು ಎಂದು ಪುಟಿನ್ ಹೇಳಿಕೆಯನ್ನು ಆಡಳಿತ ಕೇಂದ್ರ ಕ್ರೆಮ್ಲಿನ್ ತಿಳಿಸಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಣ ಮುಂದಿನ ಹಂತದ ಮಾತುಕತೆಯು ವಾರಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.