ವಿಶ್ವಸಂಸ್ಥೆ: ‘ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಹಾಗೂ ಇತರ ದೇಶಗಳಿಗೆ ಬೆದರಿಕೆವೊಡ್ಡುವ ಸಲುವಾಗಿ ಬಳಸಲು ಅವಕಾಶ ನೀಡಬಾರದು’ ಎಂಬ ಪ್ರಬಲ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದೆ.

ಆಗಸ್ಟ್ ತಿಂಗಳ ಅವಧಿಗೆ ಮಂಡಳಿಯ ಅಧ್ಯಕ್ಷೀಯ ಸ್ಥಾನವನ್ನು ಭಾರತ ವಹಿಸಿಕೊಂಡಿದ್ದು, ಸೋಮವಾರ ನಡೆದ ಮಂಡಳಿಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಫ್ರಾನ್ಸ್, ಬ್ರಿಟನ್, ಅಮೆರಿಕ ಸೇರಿದಂತೆ 13 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ರಷ್ಯಾ ಹಾಗೂ ಚೀನಾ ಈ ಪ್ರಕ್ರಿಯೆಯಿಂದ ದೂರ ಉಳಿದವು.

‘ದೇಶದಿಂದ ಅಫ್ಗನ್ನರು ಹಾಗೂ ವಿದೇಶಿ ಪ್ರಜೆಗಳ ಸುರಕ್ಷಿತ ಹಾಗೂ ವ್ಯವಸ್ಥಿತ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ಮಾತಿಗೆ ಅಫ್ಗಾನಿಸ್ತಾನ ಬದ್ಧವಾಗಿರಬೇಕು’ ಎಂಬ ನಿರ್ಣಯವನ್ನೂ ಮಂಡಳಿ ಅಂಗೀಕರಿಸಿದೆ.

ಭಾರತದ ಅಧ್ಯಕ್ಷೀಯ ಸ್ಥಾನ ಕೊನೆಗೊಳ್ಳುವ ಒಂದು ದಿನ ಮೊದಲು ಈ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ, 15 ರಾಷ್ಟ್ರಗಳ ಸದಸ್ಯ ಬಲದ ಮಂಡಳಿಯು ಅಫ್ಗಾನಿಸ್ತಾನದ ವಿದ್ಯಮಾನಗಳಿಗೆ ಸಂಬಂಧಿಸಿ ಇದೇ ಮೊದಲ ಬಾರಿ ಇಂಥ ಮಹತ್ವದ ನಿರ್ಣಯ ಅಂಗೀಕರಿಸಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.