ಸಾಗರದ ಮಂಕಳಲೆಯ ಶ್ರೀಧರ ಇವರ ಮಣಕ ನೆಲ ಹಿಡಿದಿತ್ತು. ’ಹರ ಸಾಹಸಿಗಳಾದ ಅವರು ಚೈನ್ ಪುಲ್ಲಿಯಿಂದ ಅದನ್ನು ದಿನವೂ ಎತ್ತಿ ಎತ್ತಿ ನಿಲ್ಲಿಸಿ ಉಪಚರಿಸಿ’ ಎಂದು ವೈದ್ಯರು ಸಲಹೆ ನೀಡಿದ ಕೂಡಲೇ ಅದನ್ನು ಕಾರ್ಯಗತ ಗೊಳಿಸಿದರು. ಮಲಗಿ ನೆಲ ಹಿಡಿದು ಸತ್ತು ಹೋಗಬೇಕಿದ್ದ ಜಾನುವಾರು ಈಗ ಎದ್ದು ನಿಂತಿದೆ. ಅವರ ಜಾನುವಾರು ಸೇವೆ ಹೀಗೆಯೇ ಸಾಗಿದೆ.

ಹೀಗೆ ಇದ್ದಕ್ಕಿದ್ದಂತೆ ನೆಲ ಹಿಡಿಯುವ ಕಾಯಿಲೆಗೆ ಆಂಗ್ಲ ಭಾಷೆಯಲ್ಲಿ ಡೌನರ್ಸ್ ಕೌ ಸಿಂಡ್ರೋಮ್ (Downers Cow Syndrome) ಎನ್ನುತ್ತಾರೆ. ಈ ಪೀಡೆಗೆ ಕಾರಣಗಳು ಹಲವಾರು. ಅದರಲ್ಲೂ 7ರಿಂದ 9 ತಿಂಗಳ ಅವಧಿಯ ಗರ್ಭದ ಜಾನುವಾರುಗಳು ನೆಲ ಹಿಡಿದುಬಿಟ್ಟರೆ ಬಹುತೇಕ ಲೆಕ್ಕದ ಹೊರಗೆ ಎಂದೇ ಲೆಕ್ಕ. ಇವತ್ತಿಗೂ ಈ ಕಾಯಿಲೆಗೆ ಪರಿಣಾಮಕಾರಿಯಾದ ಚಿಕಿತ್ಸೆಯಿಲ್ಲ. ಇದು ಸವಾಲಾಗೇ ಇದೆ.

ಏನಿದು ನೆಲ ಹಿಡಿಯುವ ಕಾಯಿಲೆ

ಕರು ಹಾಕಿದ ನಂತರ, ತುಂಬಿದ ಗರ್ಭದಲ್ಲಿದ್ದಾಗ, ಪೌಷ್ಟಿಕಾಂಶಗಳ ಕೊರತೆಯಿಂದ ಬಳಲಿದ ಜಾನುವಾರುಗಳು ನೆಲ ಹಿಡಿಯುತ್ತವೆ. ಇದಕ್ಕೆ ಎತ್ತು, ಎಮ್ಮೆ, ಕರು ಮತ್ತು ಮಣಕಗಳೂ ಹೊರತಾಗಿಲ್ಲ. ಇದು ವಿವಿಧ ಸಂಕೀರ್ಣ ಕಾರಣಗಳಿಂದ ಬರುವ ರೋಗ.

ಈ ಕಾಯಿಲೆ ಬಂದರೆ ಹಿಂದಿನ ದಿನ ಇದ್ದ ಜಾನುವಾರುಗಳು ಬೆಳಗಾಗುವುದರೊಳಗೆ ನೆಲ ಹಿಡಿಯುತ್ತವೆ. ಒಂದು ಸಲ ನೆಲ ಹಿಡಿದರೆ ಜಪ್ಪಯ್ಯ ಅಂದರೂ ಮೇಲೆ ಏಳುವುದಿಲ್ಲ. ಮಲಗಿದಲ್ಲೇ ಮಲಗಿ ಹುಳಗಳಾಗಿ ಕೊನೆಗೊಮ್ಮೆ ಅನಿವಾರ್ಯವಾಗಿ ದಯಾ ಮರಣಕ್ಕೆ ಒಳಪಡಿಸಬೇಕಾಗುತ್ತದೆ.

ಸಾಮಾನ್ಯವಾಗಿ ಕರು ಹಾಕಿದ ನಂತರ ಬಹಳ ಜಾನುವಾರುಗಳಲ್ಲಿ ಮತ್ತು ಗರ್ಭಧರಿಸಿದ ಕೊನೆಯ ತ್ರೈಮಾಸಿಕದಲ್ಲಿ ಈ ಕಾಯಿಲೆಯು ಬಹಳ ಸಾಮಾನ್ಯ. ಪ್ರಾರಂಭಿಕ ಹಂತದಲ್ಲಿ, ಆಕಳು ನೆಲ ಹಿಡಿದರೂ ಎದ್ದೇಳಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ತೆವಳಿಕೊಂಡು ಮುಂದೆ ಮುಂದೆ ಹೋಗುತ್ತದೆ (ಇದನ್ನು ಕ್ರೀಪರ್ ಕೌ (Creeper Cow) ಅಂತಲೂ ಕರೆಯುತ್ತಾರೆ). ಅದು ಸಾಧ್ಯವಾಗದೇ ಇದ್ದಾಗ, ಏಳಲು ಪ್ರಯತ್ನಿಸುವುದೇ ಇಲ್ಲ. ಎಷ್ಟೇ ಕಷ್ಟಪಟ್ಟರೂ ಅವುಗಳನ್ನು ಎದ್ದು ನಿಲ್ಲಿಸಲು ಸಾಧ್ಯವಾಗುವುದಿಲ್ಲ.

ಕೆಲವೊಮ್ಮೆ ಆಕಳುಗಳು ಕೊಟ್ಟಿಗೆಯಲ್ಲಿ, ಕಾಲು ಜಾರಿ ಬಿದ್ದು ಪೆಟ್ಟಾದಾಗ, ಕರು ಹಾಕಲು ತೊಂದರೆಯಾಗಿ ಕರುವನ್ನು ಎಳೆದು ತೆಗೆಯುವಾಗ, ಬೆನ್ನು ಹುರಿಗೆ ಪೆಟ್ಟು ಬಿದ್ದಾಗಲೂ ಜಾನುವಾರುಗಳು ನೆಲ ಹಿಡಿಯುತ್ತವೆ. ನೆಲಹಿಡಿದ ನಂತರ ಮಾಂಸಖಂಡಗಳ ಮೇಲೆ ಒತ್ತಡಬಿದ್ದು, ಅವು ಜಖಂಗೊಳ್ಳುತ್ತವೆ. ಅಲ್ಲದೇ ನರಗಳ ದೌರ್ಬಲ್ಯವೂ ಉಂಟಾಗುತ್ತದೆ. ಕ್ರಮೇಣ ಮಾಂಸಖಂಡ ಚರ್ಮ ಕೊಳೆತು ಹುಳಗಳಾಗಬಹುದು. ದುರ್ವಾಸನಾಯುಕ್ತ ಕೀವು ಮನೆಯವರಿಗೆ ಅಸಹ್ಯ ಹುಟ್ಟಿಸುತ್ತದೆ. ಶ್ವಾಸಕೋಶದ ಸೋಂಕು ತಗಲಿ, ನ್ಯುಮೋನಿಯಾ ಆವರಿಸುತ್ತದೆ. ಇಂಥ ಜಾನುವಾರುಗಳಿಗೆ ಅನಿವಾರ್ಯವಾಗಿ ದಯಾಮರಣ ನೀಡಬೇಕಾಗುತ್ತದೆ. ಅದರಲ್ಲೂ ಚಪ್ಪಡಿ ಕಲ್ಲಿನ ನೆಲಹಾಸಿನ ಮೇಲೆ ಕಟ್ಟುವ ಜಾನುವಾರುಗಳಿಗೆ ಈ ಕಾಯಿಲೆ ಬೇಗ ಬಾಧಿಸುತ್ತದೆ.

ಇದಕ್ಕೆ ಚಿಕಿತ್ಸೆ ಏನು ?

* ನೆಲಹಿಡಿದ ಜಾನುವಾರು ಏಳಲಿಕ್ಕೆ ಪ್ರಯತ್ನ ಮಾಡುವಾಗಲೇ ಅದಕ್ಕೆ ಉತ್ತಮ ಪೋಷಣೆ ಮತ್ತು ಆಸರೆ ನೀಡಿದರೆ ಬೇಗ ಸುಧಾರಿಸುತ್ತವೆ. ರಾಸು ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವಾಗ ನಾಲ್ಕೈದು ಮಂದಿ ನೆರವಾಗಿ, ನಿಲ್ಲಲು ಸಹಕಾರ ನೀಡಬೇಕು. ಆ ರಾಸು ಕಲ್ಲುಚಪ್ಪಡಿ ಮೇಲೆ ನಿಂತಿದ್ದರೆ, ಕೂಡಲೇ ಮಣ್ಣಿನ ನೆಲಕ್ಕೆ ವರ್ಗಾಯಿಸಬೇಕು. ಚಪ್ಪಡಿ ಕಲ್ಲು ಅಥವಾ ಸಿಮೆಂಟ್ ಕೊಟ್ಟಿಗೆಯಲ್ಲಿ ಜಾನುವಾರಿನ ಗುಣಮುಖವಾಗುವ ಪ್ರಮಾಣ ಕಡಿಮೆ.

* ಇಂಥ ಕಾಯಿಲೆಗೊಳಪಟ್ಟ ಜಾನುವಾರುಗಳ ಆರೈಕೆಗಾಗಿಯೇ ಪ್ರತ್ಯೇಕ ಸ್ಠಳ ನಿರ್ಮಿಸುವುದು ಒಳ್ಳೆಯದು. ಸ್ಥಳದ ಕೊರತೆಯಿದ್ದರೆ ಕೊಟ್ಟಿಗೆಯ ಹೊರಗೆ ಅಥವಾ ಒಳಗೆ ಮೆತ್ತನೆ ಹುಲ್ಲು ಹಾಸಿ ಮಲಗಿಸಲು ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ರಬ್ಬರ್ ಮ್ಯಾಟ್ ಹಾಕಿಸುವ ಪದ್ದತಿ ಇದೆ. ಇದನ್ನೂ ಸಹ ಬಳಸಬಹುದು. ಇವೆಲ್ಲ ಮಾಡದಿದ್ದರೇ, ಔಷಧದಿಂದಲೇ ರೋಗ ವಾಸಿಯಾಗಲು ಸಾಧ್ಯವಿಲ್ಲ.

* ಜಾನುವಾರಿನ ಮಗ್ಗುಲನ್ನು ಪದೇ, ಪದೇ ಬದಲಾಯಿಸಿ, ಅದು ಏಳಲು ಪ್ರಯತ್ನಿಸಿದಾಗ ಅದಕ್ಕೆ ಆಸರೆ ನೀಡಲು ಮಾನವ ಸಹಕಾರ ಬೇಕೇ ಬೇಕು. ಆಳುಗಳ ಕೊರತೆ ಇರುವುದರಿಂದ ಬದಲೀ ವ್ಯವಸ್ಥೆಯಾಗಿ ಇತ್ತೀಚೆಗೆ ಕೆಲವು ಗೋಪಾಲಕರಿಗೆ ಚೈನ್ ಪುಲ್ಲಿ ಮತ್ತಿ ಶೇಡ್ ನೆಟ್ ಬಳಸಿ ಜಾನುವಾರನ್ನು ಒಬ್ಬಿಬ್ಬರೇ ಎಬ್ಬಿಸಿ ನಿಲ್ಲಿಸುವ ವಿಧಾನವನ್ನು ಹೇಳಿಕೊಡಲಾಗುತ್ತಿದೆ. ಪ್ರಾರಂಭಿಕವಾಗಿ ಇದಕ್ಕೆ ಸ್ವಲ್ಪ ಶ್ರಮವಾಗುತ್ತದೆ. ಅಭ್ಯಾಸ ಮಾಡಿಕೊಂಡರೆ, ಈ ವಿಧಾನದಿಂದಲೇ ₹450-₹500 ಕೆ.ಜಿ ತೂಕದ ರಾಸನ್ನು ಒಬ್ಬ ಗೋಪಾಲಕರು ಸುಲಭವಾಗಿ ಎತ್ತಿ ನಿಲ್ಲಿಸಬಹುದು.

ರೋಗ ಬರದಂತೆ ತಡೆಯುವುದು :

* ನೆಲ ಹಿಡಿಯುವ ಲಕ್ಷಣಗಳು ಕಂಡು ಬಂದ ಕೂಡಲೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚಿಕಿತ್ಸೆ ಪ್ರಾರಂಭಿಸಬೇಕು.

* ಇಂಥ ಜಾನುವಾರುಗಳಿಗೆ ಕ್ಯಾಲ್ಸಿಯಂ, ಪೊಟ್ಯಾಸಿಯಂ, ರಂಜಕ, ಮ್ಯಾಗ್ನೇಸಿಯಂ ಅಂಶಗಳ ಕೊರತೆ ಇರುತ್ತದೆ. ಇವುಗಳನ್ನು ಖನಿಜ ಮಿಶ್ರಣದ ಮೂಲಕವಾಗಿ ನಿರಂತರವಾಗಿ ಕೊಡುತ್ತಿರಬೇಕು.

* ಕೆಲವರು ನೆಲಹಿಡಿದ ನಂತರ ಔಷಧಿ ಕೊಟ್ಟರಾಯಿತು ಎಂದುಕೊಳ್ಳುತ್ತಾರೆ. ವಿಚಾರ ಅದಲ್ಲ. ಪಶುವೈದ್ಯರ ಸಲಹೆಯೊಂದಿಗೆ ನಿಗದಿತ ಪ್ರಮಾಣದಲ್ಲಿ ಗುಣ ಮಟ್ಟದ ಖನಿಜ ಮಿಶ್ರಣವನ್ನು ರಾಸಿಗೆ ಜೀವನ ಪರ್ಯಂತ ನೀಡುತ್ತಲೇ ಇರಬೇಕು. ನಿಗದಿತ ಪ್ರಮಾಣದಲ್ಲಿ ಆಹಾರವನ್ನು ನೀಡುವುದೂ ಅತ್ಯಂತ ಮುಖ್ಯ. ಈ ಆಹಾರವನ್ನು ರೈತರೇ ತಯಾರಿಸಿಕೊಳ್ಳಬಹುದು.

ಪಶು ಆಹಾರ ತಯಾರಿಕೆ

ಜೋಳದ ಪುಡಿ– ಶೇ 45, ಶೇಂಗಾ ಹಿಂಡಿ – ಶೇ20, ಹತ್ತಿಕಾಳು ಹಿಂಡಿ– ಶೇ10; ಗೋದಿ ಬೂಸಾ ಶೇ 22, ಉತ್ತಮ ಗುಣ ಮಟ್ಟದ ಖನಿಜ ಮಿಶ್ರಣ– 2 ಕೆ.ಜಿ. ಉಪ್ಪು– 1 ಕೆ.ಜಿ. ಇವೆಲ್ಲವನ್ನು ಬೆರೆಸಿದರೆ, ಅದೇ ಸಮತೋಲಿತ ಪಶು ಆಹಾರ. ಇದನ್ನು ಶರೀರ ನಿರ್ವಹಣೆಗೆ 2 ಕೆ.ಜಿ ಮತ್ತು ಪ್ರತಿ ಲೀಟರ್ ಹಾಲಿಗೆ ಅರ್ಧ ಕಿಲೋ ಪ್ರಮಾಣದಲ್ಲಿ ನೀಡಬಹುದು.

ಕಣ್ಣಳತೆಯಲ್ಲಿ ಹಿಂಡಿ ನೀಡುವ ಬದಲು ನಿಗದಿತವಾಗಿ ತೂಕ ಮಾಡಿ ಶರೀರ ನಿರ್ವಹಣೆ ಮತ್ತು ಹಾಲಿನ ಉತ್ಪಾದನೆಗೆ ತಕ್ಕಂತೆ ಅಹಾರ ಮತ್ತು ಹಸಿ ಹುಲ್ಲು, ಗುಣ ಮಟ್ಟದ ಒಣ ಹುಲ್ಲು ನೀಡಿ. ಹಾಲನ್ನು ಮಾತ್ರ ನಿಖರವಾಗಿ ಅಳೆದು ಕೊಡುವಾಗ, ಆಕಳಿಗೆ ಅಹಾರ ನೀಡುವಾಗ ಕಣ್ಣಳತೆಯೇಕೆ?

ಇತ್ತೀಚೆಗೆ ನೆಲಹಿಡಿದ ಜಾನುವಾರುಗಳನ್ನು ಎತ್ತಲು ಸಹಾಯವಾಗುವ ವಿವಿಧ ರೀತಿಯ ಚೈನ್ ಪುಲ್ಲಿ ಹೊಂದಿದ ಉಪಕರಣಗಳು ಅಭಿವೃದ್ಧಿಯಾಗುತ್ತಿದ್ದು, ಕೆಲವು ಮಾರುಕಟ್ಟೆಯಲ್ಲಿ ಈಗಾಗಲೇ ಇವೆ. ಇವುಗಳ ರೂಪುರೇಷೆ ಸುಧಾರಣೆಯಾಗುವ ಅವಶ್ಯಕತೆ ಇದ್ದರೂ ಸಹ ಸದ್ಯಕ್ಕೆ ಇದು ಸಹಕಾರಿಯಾಗಿದೆ.

ಈ ಉಪಕರಣಕ್ಕೆ ಸುಮಾರು ₹15ಸಾವಿರದಿಂದ ₹20ಸಾವಿರ ವೆಚ್ಚ ಲಗಲುತ್ತಿದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಉಪಕರಣವನ್ನು ರೈತರು ಬಾಡಿಗೆ ರೂಪದಲ್ಲಿ ಉಪಯೋಗ ಪಡೆಯಬಹುದಾಗಿದೆ (ಚಿತ್ರ ನೋಡಿ).

ಇದಕ್ಕೆ ಚಿಕಿತ್ಸೆ ಏನು ?

ನೆಲಹಿಡಿದ ಜಾನುವಾರು ಏಳಲಿಕ್ಕೆ ಪ್ರಯತ್ನ ಮಾಡುವಾಗ ನಾಲ್ಕೈದು ಮಂದಿ ನೆರವಾಗಿ, ಅದಕ್ಕೆ ನಿಲ್ಲಲು ಸಹಕಾರ ನೀಡಬೇಕು. ಆ ರಾಸು ಕಲ್ಲುಚಪ್ಪಡಿ ಮೇಲೆ ನಿಂತಿದ್ದರೆ, ಕೂಡಲೇ ಮಣ್ಣಿನ ನೆಲಕ್ಕೆ ವರ್ಗಾಯಿಸಬೇಕು. ಚಪ್ಪಡಿ ಕಲ್ಲು ಅಥವಾ ಸಿಮೆಂಟ್ ಕೊಟ್ಟಿಗೆಯಲ್ಲಿ ಜಾನುವಾರಿನ ಗುಣಮುಖವಾಗುವ ಪ್ರಮಾಣ ಕಡಿಮೆ.

ಇಂಥ ಕಾಯಿಲೆಗೊಳಪಟ್ಟ ಜಾನುವಾರುಗಳ ಆರೈಕೆಗಾಗಿಯೇ ಪ್ರತ್ಯೇಕ ಸ್ಠಳ ನಿರ್ಮಿಸುವುದು ಒಳ್ಳೆಯದು. ಸ್ಥಳದ ಕೊರತೆಯಿದ್ದರೆ ಕೊಟ್ಟಿಗೆಯ ಹೊರಗೆ ಅಥವಾ ಒಳಗೆ ಮೆತ್ತನೆ ಹುಲ್ಲು ಹಾಸಿ ಮಲಗಿಸಲು ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ರಬ್ಬರ್ ಮ್ಯಾಟ್ ಹಾಕಿಸುವ ಪದ್ದತಿ ಇದೆ. ಇದನ್ನೂ ಬಳಸಬಹುದು. ಇವೆಲ್ಲ ಮಾಡದಿದ್ದರೇ, ಔಷಧದಿಂದಲೇ ರೋಗ ವಾಸಿಯಾಗಲು ಸಾಧ್ಯವಿಲ್ಲ.

ಜಾನುವಾರಿನ ಮಗ್ಗುಲನ್ನು ಪದೇ, ಪದೇ ಬದಲಾಯಿಸಿ, ಅದು ಏಳಲು ಪ್ರಯತ್ನಿಸಿದಾಗ ಅದಕ್ಕೆ ಆಸರೆ ನೀಡಲು ಮಾನವ ಸಹಕಾರ ಬೇಕೇ ಬೇಕು. ಆಳುಗಳ ಕೊರತೆ ಇರುವುದರಿಂದ ಬದಲೀ ವ್ಯವಸ್ಥೆಯಾಗಿ ಇತ್ತೀಚೆಗೆ ಕೆಲವು ಗೋಪಾಲಕರಿಗೆ ಚೈನ್ ಪುಲ್ಲಿ ಮತ್ತಿ ಶೇಡ್ ನೆಟ್ ಬಳಸಿ ಜಾನುವಾರನ್ನು ಒಬ್ಬಿಬ್ಬರೇ ಎಬ್ಬಿಸಿ ನಿಲ್ಲಿಸುವ ವಿಧಾನವನ್ನು ಹೇಳಿಕೊಡಲಾಗುತ್ತಿದೆ.

ರೋಗ ಬರದಂತೆ ತಡೆಯುವುದು

ನೆಲ ಹಿಡಿಯುವ ಲಕ್ಷಣಗಳು ಕಂಡು ಬಂದ ಕೂಡಲೇ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪ್ರಾರಂಭಿಸಬೇಕು.

ಇಂಥ ಜಾನುವಾರುಗಳಿಗೆ ಕ್ಯಾಲ್ಸಿಯಂ, ಪೊಟ್ಯಾಸಿಯಂ, ರಂಜಕ, ಮೆಗ್ನೇಸಿಯಂ ಅಂಶಗಳ ಕೊರತೆ ಇರುತ್ತದೆ. ಇವುಗಳನ್ನು ಖನಿಜ ಮಿಶ್ರಣದ ಮೂಲಕವಾಗಿ ನಿರಂತರವಾಗಿ ಕೊಡುತ್ತಿರಬೇಕು.

ಕೆಲವರು ನೆಲಹಿಡಿದ ನಂತರ ಔಷಧಿ ಕೊಟ್ಟರಾಯಿತು ಎಂದುಕೊಳ್ಳುತ್ತಾರೆ. ವಿಚಾರ ಅದಲ್ಲ. ಪಶುವೈದ್ಯರ ಸಲಹೆಯೊಂದಿಗೆ ನಿಗದಿತ ಪ್ರಮಾಣದಲ್ಲಿ ಗುಣ ಮಟ್ಟದ ಖನಿಜ ಮಿಶ್ರಣವನ್ನು ರಾಸಿಗೆ ಜೀವನ ಪರ್ಯಂತ ನೀಡುತ್ತಲೇ ಇರಬೇಕು. ನಿಗದಿತ ಪ್ರಮಾಣದಲ್ಲಿ ಆಹಾರವನ್ನು ನೀಡುವುದೂ ಅತ್ಯಂತ ಮುಖ್ಯ. ಈ ಆಹಾರವನ್ನು ರೈತರೇ ತಯಾರಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.