ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ತುತ್ತತುದಿಯ ಗಡಿ ಗ್ರಾಮ ಮೋತಿಗುಡ್ಡ. ಪರಿಸರದ ಮಡಿಲಿನಲ್ಲಿರುವ ಈ ಊರು ಸಮುದ್ರ ಪಾತಳಿಯಿಂದ 369 ಮೀಟರ್ ಎತ್ತರದಲ್ಲಿದೆ. ಮೋತಿಗುಡ್ಡದ ಸ್ನೇಹಿತರ ಮನೆಯಲ್ಲಿ ಅಲ್ಬಂ ಮೇಲೆ ಕಣ್ಣಾಡಿಸುತಿದ್ದೆ. ಅದರಲ್ಲಿ ಒಂದು ಬಗೆಯ ಅಡಿಕೆ ಹಾಗೂ ಅದರ ಸಿಂಗಾರ (ಹೂವು)ದ ಚಿತ್ರಗಳು ಬಹುವಾಗಿ ಆಕರ್ಷಿಸಿದವು. ಗೆಳೆಯ ಭಾಸ್ಕರ ಹೆಗಡೆ ನನ್ನ ಕುತೂಹಲ ಅರಿತು ಅದು ಬೆಳೆಯುವ ಪ್ರದೇಶಕ್ಕೆ ಕರೆದೊಯ್ದರು.

ಮೋತಿಗುಡ್ಡದಿಂದ ದೊರೆಕಟ್ಟೆಗೆ ಹೋಗುವ ಶಿಖರದಂತಿರುವ ಗುಡ್ಡದ ಇಳಿಜಾರಿನಲ್ಲಿ ಮಾತ್ರ ಕಂಡು ಬರುವ ಈ ಅಡಿಕೆಗೆ ‘ಪಾಂಡವರ ಅಡಿಕೆ’ ಎಂದು ಸ್ಥಳೀಯರು ಕರೆಯುತ್ತಾರೆ. ಪಾಂಡವರು ವನವಾಸದಲ್ಲಿದ್ದಾಗ ಈ ಅಡಿಕೆಯನ್ನು ನೆಟ್ಟಿದ್ದಾರೆಂಬ ಪ್ರತೀತಿ ಇದೆ. ಅತ್ಯಂತ ಚುಗುರಾದ, ತಿನ್ನಲು ಬಾರದ ಈ ಅಡಿಕೆಯನ್ನು ಸುಲಿದಾಗ ನಮ್ಮ ‘ಮಾಣಿ’ ಅಡಿಯನ್ನು ಹೋಲುತ್ತದೆ. ತೋಟದ ಅಡಿಕೆ ಸಿಂಗಾರ ಬಿಡುವ ಸಮಯದಲ್ಲಿಯೇ ಹೂ ಬಿಡುವ ಈ ಅಡಿಕೆಮರ ಮೂರರ ತನಕ ಗೊನೆ ಬಿಡುತ್ತದೆ. ಸಿಂಗಾರ ನಮ್ಮ ತೋಟದಲ್ಲಿಯ ಸಿಂಗಾರಕಿಂತಲೂ ಅತಿ ಹೆಚ್ಚು ಆಕರ್ಷಕ. ನಮ್ಮ ಅಡಿಕೆಮರಗಳಿಗಿಂತ ತೆಳ್ಳಗೆ ಇರುವ ಈ ಗಿಡಗಳನ್ನು ಆಲಂಕಾರಿಕ ಗಿಡಗಳಾಗಿ ಬೆಳೆಯಬಹುದು.
ಇದು ಅಪರೂಪದ ಸಸ್ಯವಾಗಿದ್ದು ಇದರ ವೈಜ್ಞಾನಿಕ ಹೆಸರು Arecaceae ಇದ್ದುBercht ಎನ್ನುವ ಕುಟುಂಬದಾಗಿದ್ದು Plantae ಎನ್ನುವ ಕಿಂಗ್ಡಮ್ ಗೆ ಸೇರಿದ ಗಿಡವಾಗಿದೆ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞೆ ಪ್ರೊ.ವಾಣಿಶ್ರೀ ಹೆಗಡೆ.

ಈ ಅಪರೂಪದ, ಆಕರ್ಷಕ ಹಾಗೂ ಅಳಿವಿನಂಚಿನಲ್ಲಿರುವ ಈ ಗಿಡದ ರಕ್ಷಣೆ ಅರಣ್ಯ ಇಲಾಖೆಯಿಂದ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.