ಬೆಂಗಳೂರು: ದಾಳಿಂಬೆ ಹಣ್ಣಿನ ಬೀಜ ಹಾಗೂ ಸಿಪ್ಪೆಯನ್ನು ಬಳಸಿಕೊಂಡು ಎಣ್ಣೆ, ಬಿಸ್ಕತ್, ಮುಖ ಶುಭ್ರಗೊಳಿಸುವ ಪೌಡರ್, ಮೌತ್ ಫ್ರೆಶ್‌ನರ್ ಸೇರಿ ದಂತೆ ಆರೋಗ್ಯಕ್ಕೆ ನೆರವಾಗುವಂತಹ ಹಲವಾರು ಉತ್ಪನ್ನಗಳನ್ನು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆ (ಎನ್‌ಆರ್‌ಸಿಪಿ) ಅಭಿವೃದ್ಧಿಪಡಿಸಿದೆ.

ಐಐಎಚ್‌ಆರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ರುವ ಸಂಸ್ಥೆಯ ಮಳಿಗೆ ರೈತರನ್ನು ಹಾಗೂ ನವೋದ್ಯಮಿಗಳನ್ನು ತನ್ನತ್ತ ಸೆಳೆಯುತ್ತಿದೆ.

ಸಂಸ್ಥೆಯು ಈಗಾಗಲೇ ದಾಳಿಂಬೆಯ ವೈನ್ ಹಾಗೂ ಪಾನೀಯಗಳನ್ನು ಮಾರು ಕಟ್ಟೆಯಲ್ಲಿ ಪರಿಚಯಿ ಸಿದೆ.ಆರೋಗ್ಯಕರ ಅಂಶ
ಗಳನ್ನು ಹೊಂದಿರುವ ದಾಳಿಂಬೆಯಲ್ಲಿ ಒಳಭಾಗ ವನ್ನು ಮಾತ್ರ ಜನ ತಿನ್ನುತ್ತಿದ್ದರು. ಆದರೆ, ಹಣ್ಣಿನ ಸಿಪ್ಪೆ ಹಾಗೂ ಬೀಜಗಳೂ ಸಹ ಆರೋಗ್ಯಕ್ಕೆ ಪೂರಕ ಎಂಬುದನ್ನು ಸಂಸ್ಥೆಯು ಈ ನೂತನ ಉತ್ಪನ್ನಗಳಿಂದ ಸಾಬೀತುಪಡಿಸುತ್ತಿದೆ.

‘ಸಂಸ್ಥೆಯ ನೂತನ ಉತ್ಪನ್ನ ದಾಳಿಂಬೆ ಬೀಜದಿಂದ ತಯಾರಿಸಲಾದ ಎಣ್ಣೆ ಹಾಗೂ ಮಾತ್ರೆ. ದಾಳಿಂಬೆ ಬೀಜವನ್ನು ಹೆಚ್ಚಾಗಿ ಜನರು ಸೇವನೆ ಮಾಡುವುದಿಲ್ಲ. ಪಾನೀಯ ತಯಾರಿಸುವಾಗಲೂ ಬೀಜಗಳನ್ನು ಬಿಸಾಡುತ್ತಾರೆ. ಆದರೆ, ಹಣ್ಣಿಗಿಂತ ಅದರ ಸಿಪ್ಪೆ ಹಾಗೂ ಬೀಜದಲ್ಲೇ ಆರೋಗ್ಯ ವೃದ್ಧಿಸುವ ಹೆಚ್ಚು ಅಂಶಗಳಿವೆ’ ಎಂದು ಸಂಸ್ಥೆಯ ವಿಜ್ಞಾನಿ ಎನ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀಜಗಳಿಂದ ತಯಾರಿಸಿದ ಎಣ್ಣೆ ಸೇವನೆಯಿಂದ ಕೊಬ್ಬಿನಾಂಶ ಕಡಿಮೆ ಆಗುತ್ತದೆ. ಕೂದಲು ಉದುರುವ ಸಮಸ್ಯೆ ಇರುವವರು ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬಹುದು. ಹೃದಯ ಸಂಬಂಧಿ ಸಮಸ್ಯೆಗಳಿಗೆ ಈ ಎಣ್ಣೆ ರಾಮಬಾಣ. ಇದನ್ನು ನೇರವಾಗಿ ಸೇವನೆ ಮಾಡಲು ಕಷ್ಟವಾಗುವವರಿಗೆ ಇದೇ ಎಣ್ಣೆಯಿಂದ ತಯಾರಿಸಿದ ಮಾತ್ರೆಗಳೂ ಇವೆ. 10 ಮಾತ್ರೆಗಳುಳ್ಳ ಶೀಟ್‌ಗೆ ₹30ರಂತೆ ಬೆಲೆ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು.

‘ದಾಳಿಂಬೆ ಎಣ್ಣೆಗೆ ಭಾರಿ ಬೇಡಿಕೆ ಇದೆ. ಒಂದು ಲೀಟರ್ ಎಣ್ಣೆ ತೆಗೆಯಲು 60 ಕೆ.ಜಿಯಷ್ಟು ದಾಳಿಂಬೆ ಬೇಕು. ಹಾಗಾಗಿ, ಇದರ ಬೆಲೆಯೂ ಒಂದು ಲೀಟರ್‌ಗೆ ಗರಿಷ್ಠ ₹5,200ರವರೆಗೆ ಇದೆ. ದಾಳಿಂಬೆ ಬೀಜದ ಎಣ್ಣೆ ಹಾಗೂ ಮಾತ್ರೆಗೆ ಇತ್ತೀಚೆಗಷ್ಟೇ ಪೇಟೆಂಟ್ ಪಡೆದುಕೊಳ್ಳಲಾಗಿದೆ’.

‘ಈ ತಂತ್ರಜ್ಞಾನ ಬಳಸಿಕೊಂಡು ಉದ್ದಿಮೆ ಆರಂಭಿಸಲು ಇಚ್ಛಿಸುವ ವರು ಸಂಸ್ಥೆಯ ವೆಬ್‌ಸೈಟ್ nrcpomegranate.icar.gov.in ಅಥವಾ ಇಮೇಲ್nrcpomegranate@gmail.com ಅನ್ನು ಸಂಪರ್ಕಿಸಬಹುದು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.