ಕಲಾವಿದ: ಮೊಹಮ್ಮದ್ ಫಕ್ರುಲ್ ಇಸ್ಲಾಂ ಮಜುಂದಾರ್ ಬಾಂಗ್ಲಾದೇಶ ವಿಧಾನ: ವುಡ್‌ಕಟ್
ಒಂದೊಮ್ಮೆ ಚಿತ್ರ ಬಿಡಿಸುವಾಗ ತಪ್ಪಾಯಿತು ಎಂದುಕೊಳ್ಳಿ. ಅದನ್ನು ಬಣ್ಣಗಳ ಸಹಾಯದಿಂದ ಸರಿಪಡಿಸಬಹುದು. ಆದರೆ ಪ್ರಿಂಟ್‌ಮೇಕಿಂಗ್‌ನಲ್ಲಿ ತಪ್ಪಿಗೆ ಅವಕಾಶವಿಲ್ಲ. ಒಂದು ಬಾರಿ ಚಿತ್ರವನ್ನು ಕೆತ್ತಿದರೆ ಅಥವಾ ಕೊರೆದರೆ ಮುಗಿಯಿತು. ತಪ್ಪಾದರೆ ಮತ್ತೊಮ್ಮೆ ಹೊಸದಾಗಿಯೇ ಚಿತ್ರ ಕೆತ್ತಬೇಕಾಗುತ್ತದೆ. ಇದಕ್ಕಾಗಿಯೇ ಪ್ರಿಂಟ್‌ಮೇಕಿಂಗ್‌ಗೆ ಹೆಚ್ಚು ಏಕಾಗ್ರತೆ ಹಾಗೂ ಹಲವು ದಿನಗಳ ಪರಿಶ್ರಮ ಬೇಕಾಗುತ್ತದೆ
ಕಲಾಕೃತಿಯ ಸ್ಪರ್ಶವೂ ಅನುಭವ ನೀಡುತ್ತದೆ. ಚಿತ್ರಕಲೆಯಲ್ಲಿನ ಒಂದು ರೇಖೆ ಮರ ಅಥವಾ ಕಲ್ಲಿನ ಶಿಲ್ಪದಲ್ಲಿನ ಕೆತ್ತನೆ ನಮಗೆ ಅನುಭವ ನೀಡುತ್ತದೆ. ಆದರೆ ಪ್ರಿಂಟ್‌ಮೇಕಿಂಗ್‌ನಲ್ಲಿ ನೋಡುವುದೇ ಅನುಭವ. ಇದು ಪ್ರಿಂಟ್‌ಮೇಕಿಂಗ್‌ನ ದೊಡ್ಡ ಶಕ್ತಿಯೂ ಹೌದು ಕಲಾವಿದನಿಗೆ ದೊಡ್ಡ ಸವಾಲೂ ಹೌದು. ಕೆಲವೊಮ್ಮೆ ಇದು ಮಿತಿಯೂ ಆಗುತ್ತದೆ. ನೋಡುವವನಿಗೆ ನೋಟದಲ್ಲಿಯೇ ಅನುಭವ ದಾಟಿಸಬೇಕು. ಆದ್ದರಿಂದಲೇ ಪ್ರಿಂಟ್‌ಮೇಕಿಂಗ್ ಕಲಾವಿದರ ಸೃಜಶೀಲತೆಗೆ ಎಲ್ಲೆ ಇಲ್ಲ