ಮಳೆಗಾಲದಲ್ಲಿ ಹೆಚ್ಚಾಗಿ ಮಲೆನಾಡಿನ ದಟ್ಟವಲ್ಲದ ಕಾಡಿನಲ್ಲಿ ಕಾಣಿಸಿಕೊಳ್ಳುವ ಬಹು ಆಕರ್ಷಕ, ಅಪರೂಪದ ಹೂವೇ ‘ಸೀತೆ ದಂಡೆ’. ಪ್ರಾದೇಶಿಕವಾಗಿ ಸೀತೆ ದಂಡೆ, ಸೀತಾಳೆ, ಸೀತಾಳ ದಂಡೆ, ಸೀತೆಯ ಮಾಲೆ, ಸೀತಾಳಿ–ಹೀಗೆ ಹಲವು ಹೆಸರಿನಿಂದ ಕರೆಯಲಾಗುವ ಈ ಹೂವು ನರಿಬಾಲದಂತೆ ಕಾಣುವುದರಿಂದ ಬ್ರಿಟಿಷರು ಇದನ್ನು ನರಿಬಾಲದ ಹೂವು ಎಂದು ಗುರುತಿಸಿದ್ದಾರೆ.

ಸೀತಾ ವನವಾಸದಲ್ಲಿ ಸಮಯದಲ್ಲಿ ಈ ಹೂವಿಗೆ ಆಕರ್ಷಿತಳಾಗಿ ಇಷ್ಟಪಟ್ಟಾಗ ರಾಮನು ಈ ಹೂವನ್ನು ತಂದು ಸೀತೆಯ ಮುಡಿಗೇರಿಸಿದ ಕಾರಣದಿಂದ ಈ ಪುಷ್ಪದ ಹಿಂದೆ ಸೀತೆ ಸೇರಿ ಕೊಂಡಿದೆ ಎಂಬ ಪ್ರತೀತಿ ಇದೆ.

ಈ ಸಸ್ಯ ಗ್ರೀಕ್ ಮೂಲದ್ದಾಗಿದ್ದು, ಸಸ್ಯಶಾಸ್ತ್ರದ ಪ್ರಕಾರ Rhynchostylis retusa ಇದ್ದು Orchidaceae ಕುಟುಂಬಕ್ಕೆ ಸೇರಿದೆ. ಗಾಯವಾದಾಗ ಹೆಚ್ಚಾಗಿ ಬಳಸುವ ಈ ಸಸ್ಯ ಹಲವು ಔಷಧಿ ಗುಣಗಳನ್ನು ಹೊಂದಿದೆ. ‘ಮರದ ಮೇಲೆ ಬೆಳೆಯುವ ಬಂದಳಿಕೆ ಜಾತಿಯ ಈ ಸಸ್ಯ, ಮರದ ತೊಗಟೆಯ ಮೇಲೆ ಸಂಗ್ರಹವಾಗುವ ಕಸವನ್ನು ತನ್ನ ವಿಶೇಷವಾದ ಬೇರುಗಳಿಂದ ಆಹಾರವಾಗಿ ಸ್ವೀಕರಿಸುತ್ತದೆ’ ಎನ್ನುತ್ತಾರೆ ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ವಾಣಿಶ್ರೀ ಹೆಗಡೆಯವರು.

ಕಾಡಿನ ಮರದ ಮೇಲೆ ಬೆಳೆಯುವ ಕಾಡು ಸಸ್ಯವಾದ ಇದರ ನೀಲಿ ಹಾಗೂ ಕೆಂಪು ಚುಕ್ಕೆಗಳಿರುವ ದಂಡೆಯಾಕಾರದ ಹೂವಿನ ಅಂದಕ್ಕೆ ಮನಸೋತವರು ತಮ್ಮ ಮನೆಯಂಗಳದ ಮರಗಿಡಗಳ ಮೇಲೂ ಬೆಳೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.