ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರಿನಲ್ಲಿ ಅರಣ್ಯವಾಸಿಗಳು ಬದುಕು ಕಟ್ಟಿಕೊಳ್ಳುತ್ತಿರುವ ಬಗೆಯಲ್ಲಿ ಮಾನವೀಯ ಸೆಲೆಗಳು ಇಣುಕುತ್ತವೆ. ಅಂತಹ ಬಿಡಿಬಿಡಿ ಕಥನಗಳ ನುಡಿಚಿತ್ರವಿದು...
ನಮ್ಮೂರಿನ ರಸ್ತೆಗಳು ಮಳೆಗಾಲದಲ್ಲಿ ಹಾಳಾಗಿ ಸಂಚರಿಸಲು ಕಷ್ಟವಾಗುತ್ತದೆ. ಆರು ತಿಂಗಳು ರಸ್ತೆ ಸರಿ ಇದ್ದರೆ ಇನ್ನು ಆರು ತಿಂಗಳು ಸಂಚಾರವೇ ದುಸ್ತರ. ವಿದ್ಯುತ್‌ಗಾಗಿ ಬಹುವರ್ಷಗಳ ಬೇಡಿಕೆ ಇದೆ. ಕೆಲವರು ಜಲವಿದ್ಯುತ್ ಘಟಕ ಮಾಡಿಕೊಂಡಿದ್ದಾರೆ. ಇಲ್ಲಿನ ಕುರಿಯಾಡಿ ಅಂಗನವಾಡಿಗೆ ಮಕ್ಕಳು ಹೋಗಬೇಕೆಂದರೆ ಎರಡು ನದಿ ದಾಟಬೇಕಾಗುತ್ತದೆ. ಈ ನದಿಗೆ ಸೇತುವೆ ನಿರ್ಮಿಸಿದರೆ ಮಕ್ಕಳು ಮಳೆಗಾಲದಲ್ಲೂ ಅಂಗನವಾಡಿಗೆ ಹೋಗಿ ಬರಲು ಅನುಕೂಲವಾಗುತ್ತದೆ.
ಪೂವಪ್ಪ ಮಲೆಕುಡಿಯ, ಅಂಜರೊಟ್ಟು ಮನೆ ಕುತ್ಲೂರು
ಬಸ್ ನಿಲ್ದಾಣ
‘ನಾವೇ ಸೌಲಭ್ಯ ರೂಪಿಸಿಕೊಂಡರೆ ಅರಣ್ಯ ಇಲಾಖೆ ದೂರು ದಾಖಲಿಸುತ್ತದೆ. ರಸ್ತೆ ರಿಪೇರಿ ಮಾಡಿದ ನಾಲ್ವರ ಮೇಲೆ ಕೇಸಿದೆ. ಜಲವಿದ್ಯುತ್ ಮಾಡಿಕೊಳ್ಳಲು ಸರ್ಕಾರ ಅನುದಾನ ಕೊಡಬೇಕು. ಕೃಷಿ ಇಲಾಖೆಯಿಂದ ಪೈಪ್ ವ್ಯವಸ್ಥೆ ಆಗಬೇಕು. ರಸ್ತೆ ಬೇಕಿದ್ದರೆ ಅರಣ್ಯ ಇಲಾಖೆಯೇ ಸಮರ್ಪಕವಾಗಿ ನಿರ್ವಹಿಸಲಿ. ಕಾಡಬಾಗಿಲು ಸಮೀಪದ ಸೇತುವೆ ಮಳೆಗಾಲದಲ್ಲಿ ಮುರಿದು ಬಿದ್ದಿದೆ. ಸೇತುವೆ ಇಲ್ಲದಿರುವುದರಿಂದ ಪಡಿತರ ತರಲು ಕಾಲ್ನಡಿಗೆಯಲ್ಲಿ ಸಾಗಬೇಕಿದೆ. ಅಳಂಬದಲ್ಲಿ ಹೆಸರಿಗಷ್ಟೆ ಬಸ್ ನಿಲ್ದಾಣ ಇದೆ. ಆದರೆ, ಇದುವರೆಗೂ ಬಸ್ಸೇ ಬಂದಿಲ್ಲ.!’
ಚೀಂಕ್ರ ಮಲೆಕುಡಿಯ, ಬರೆಂಗಾಡಿ ಮನೆ, ಕುತ್ಲೂರು
ಈ ಹಿಂದೆ ಕುತ್ಲೂರು ಭಾಗದಲ್ಲಿ ಅಡಿಕೆ ತೋಟ ನಾಶ ಮಾಡಿರುವ ಅರಣ್ಯ ಇಲಾಖೆ