ಕಂಚಿನ ಕುದುರೆ ಸವಾರನ ಪ್ರತಿಮೆ ಇರುವುದು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ. ಇದನ್ನು ಆ ನಗರದ ಸ್ಥಾಪಕ ಪೀಟರ್ ದಿ ಗ್ರೇಟ್ನ ನೆನಪಿಗೆ ನಿರ್ಮಿಸಲಾಗಿದೆ. ಈ ಪ್ರತಿಮೆಯು ನೇವಾ ನದಿಯತ್ತ ಮುಖ ಮಾಡಿ ನಿಂತಿದೆ.

ಕ್ಯಾಥರೀನ್ ದಿ ಗ್ರೇಟ್, ತನ್ನ ಪೂರ್ವಿಕ ಪೀಟರ್ನಿಗಾಗಿ ಈ ಪ್ರತಿಮೆಯ ನಿರ್ಮಾಣ ಆರಂಭಿಸಿದಳು. ಕ್ಯಾಥರೀನ್ ಹುಟ್ಟಿನಿಂದ ಜರ್ಮನ್ ಆಗಿದ್ದ ಕಾರಣ, ಆಕೆಗೆ ರಷ್ಯಾದ ಹಿಂದಿನ ಮಹಾರಾಜರ ಜೊತೆ ನಂಟು ಬೆಸೆದುಕೊಳ್ಳುವ ಆಸೆ ಹೊಂದಿದ್ದಳು. ಈ ಸ್ಮಾರಕದಲ್ಲಿ ಇರುವ ಒಂದು ಶಾಸನದಲ್ಲಿ ರಷ್ಯನ್ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಹೀಗೆ ಬರೆಯಲಾಗಿದೆ: ‘ಪೀಟರ್ಗೆ ದ್ವಿತೀಯ ಕ್ಯಾಥರೀನ್ಳಿಂದ’.

ಫ್ರಾನ್ಸ್ನ ಖ್ಯಾತ ಶಿಲ್ಪಿ ಎಚಿನ್ ಮರೀಸ್ ಫ್ಯಾಲ್ಕೊನೆ ಅವರು ಇದರ ನಿರ್ಮಾಣದ ಕೆಲಸ ನಿಭಾಯಿಸಿದರು. ಪ್ರತಿಮೆಯು ಕೆಂಪು ಬಣ್ಣದ ಒಂದು ಗ್ರಾನೈಟ್ ಶಿಲೆಯ ಮೇಲೆ ನಿಂತಿದೆ. ಕುದುರೆಯ ಮೇಲೆ ಕುಳಿತಿರುವ ಪೀಟರ್, ರಷ್ಯಾವನ್ನು ಶೌರ್ಯದಿಂದ ಮುನ್ನಡೆಸುತ್ತಾನೆ ಎಂಬ ನಂಬಿಕೆ ಇದೆ.19ನೆಯ ಶತಮಾನದ ದಂತಕಥೆಯೊಂದರ ಅನ್ವಯ,ಕಂಚಿನ ಈ ಪ್ರತಿಮೆ ಇರುವವರೆಗೆ ಸೇಂಟ್ ಪೀಟರ್ಸ್ಬರ್ಗ್ ನಗರವು ಶತ್ರುಗಳ ವಶವಾಗಲು ಸಾಧ್ಯವೇ ಇಲ್ಲ. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಈ ಪ್ರತಿಮೆಯ ಸುತ್ತ ಮರಳಿನ ಚೀಲಗಳು ಹಾಗೂ ಮರದ ಮೇಲ್ಛಾವಣೆ ಹೊದಿಸಿ ರಕ್ಷಿಸಲಾಗಿತ್ತು. ಈ ನಗರವು ಶತ್ರುಪಡೆಗಳಿಂದ ಸುತ್ತುವರೆದಿದ್ದರೂ, ಸ್ಮಾರಕಕ್ಕೆ ಹಾನಿ ಆಗಲಿಲ್ಲ.

ರಿದ್ಧಿಸಂಪತ್ತಿನ ದೇವತೆ ಈಕೆ. ಗಣಪತಿಯ ಪತ್ನಿ ಎಂದು ಈಕೆಯನ್ನು ಕೆಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಮಂಗಗಳಿಗೆ ಮೋಸ!

ಆಪ್ಟಿಕಲ್ ಇಲ್ಯೂಷನ್ ತಂತ್ರ ಬಳಸಿ ಮನುಷ್ಯರಿಗೆ ಮೋಸ ಮಾಡುವ ರೀತಿಯಲ್ಲೇ ಮಂಗಗಳನ್ನು ಕೂಡ ಮೋಸ ಮಾಡಬಹುದಂತೆ. ಪಕ್ಕದಲ್ಲಿ ಇರುವ ಚಿತ್ರ ನೋಡಿ. ಎರಡು ಕಪ್ಪು ವೃತ್ತಗಳಲ್ಲಿ ಯಾವುದು ದೊಡ್ಡದಿದೆ? ಎರಡೂ ವೃತ್ತಗಳು ಒಂದೇ ಗಾತ್ರದ್ದಾಗಿದ್ದರೂ, ಒಂದು ದೊಡ್ಡದಾಗಿ ಇನ್ನೊಂದು ಚಿಕ್ಕದಾಗಿ ಮೇಲ್ನೋಟಕ್ಕೆ ಕಾಣಿಸುತ್ತದೆಯಲ್ಲವೇ? ಇದೇ ಚಿತ್ರವನ್ನು ಮಂಗಗಳ ಎದುರು ಇರಿಸಿ, ಮನುಷ್ಯನ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲೇ ಮಂಗಗಳಿಗೂ ಮಾಡಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ನಮ್ಮ ಮಿದುಳು ಕಪ್ಪು ವೃತ್ತಗಳನ್ನು ಅವುಗಳ ಹೊರಗಿರುವ ಇನ್ನೊಂದು ವೃತ್ತದ ಜೊತೆ ಸಮೀಕರಿಸಿ ನೋಡುವ ಕಾರಣ, ಎರಡೂ ಕಪ್ಪು ವೃತ್ತಗಳು ಬೇರೆ ಬೇರೆ ಗಾತ್ರಗಳಲ್ಲಿ ಇರುವಂತೆ ನಮಗೆ ಭಾಸವಾಗುತ್ತದೆ.

ನೆಲಬಾಂಬ್ ಪತ್ತೆಗೆ ಇಲಿ ಸಾಕು!

ಬೆಲ್ಜಿಯಂ ದೇಶದ ಒಂದು ಸ್ವಯಂಸೇವಾ ಸಂಘಟನೆಯು ಆಫ್ರಿಕಾದ ಒಂದು ಜಾತಿಯ ಇಲಿಗಳಿಗೆ ಕುತೂಹಲದ ತರಬೇತಿಯೊಂದನ್ನು ನೀಡುತ್ತದೆ. ಈ ತರಬೇತಿ ಪಡೆದ ಇಲಿಗಳು ನೆಲಬಾಂಬ್ ಪತ್ತೆ ಮಾಡುತ್ತವೆ! ಅಂಗೋಲಾ, ಕಾಂಬೋಡಿಯಾ ಮತ್ತು ಮೊಜಾಂಬಿಕ್ನಂತಹ ದೇಶಗಳಲ್ಲಿ ಈ ಇಲಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಇಲಿಗಳು ಹೊಂದಿರುವ ವಾಸನೆ ಗುರುತಿಸುವ ಶಕ್ತಿಯ ಕಾರಣದಿಂದಾಗಿ, ನೆಲಬಾಂಬ್ಗಳನ್ನು ಪತ್ತೆ ಮಾಡುವಲ್ಲಿ ಇವು ಮನುಷ್ಯ ಹಾಗೂ ನಾಯಿಗಳಿಗಿಂತ ಹೆಚ್ಚು ಕ್ಷಮತೆ ಹೊಂದಿವೆ. ಈ ಇಲಿಗಳು ಚುರುಕಾಗಿ ಕೆಲಸ ಮಾಡುತ್ತವೆ. ಹಾಗೆಯೇ, ಇವುಗಳನ್ನು ಸಾಕುವುದು ದುಬಾರಿಯಲ್ಲ. ಅಷ್ಟೇ ಅಲ್ಲದೆ, ನೆಲಬಾಂಬ್ ಇರಿಸಿದ ಜಾಗದಲ್ಲಿ ಇವು ಓಡಾಡಿದಾಗ, ಇವುಗಳ ಹಗುರ ದೇಹದ ಕಾರಣದಿಂದಾಗಿ ಬಾಂಬ್ ಸ್ಫೋಟಗೊಳ್ಳುವುದಿಲ್ಲ!

ಹಲದಂಕರ್ ಚಿತ್ರ

ಚಿತ್ರದಲ್ಲಿ ಹಣತೆ ಹಿಡಿದಿರುವ ಮಹಿಳೆಯೊಬ್ಬಳು ಕಾಣುತ್ತಿದ್ದಾಳಲ್ಲ? ಈ ಚಿತ್ರ ‘ಹಣತೆ ಹಿಡಿದಿರುವ ಮಹಿಳೆ’ ಎಂಬ ಹೆಸರಿನಲ್ಲಿ ಲೋಕವಿಖ್ಯಾತವಾಗಿದೆ. ಈ ಚಿತ್ರ ಬಿಡಿಸಿದವರು ಕಲಾವಿದ ಎಸ್.ಎಲ್. ಹಲದಂಕರ್. ಅವರು ಇದನ್ನು ಬಿಡಿಸಿದ್ದು 1945–46ರ ಅವಧಿಯಲ್ಲಿ. ಇದು ಅವರ ಕಿರಿಯ ಮಗಳ ಚಿತ್ರ. ಹಲ್ದಂಕರ್ ಅವರು ಈ ಚಿತ್ರ ಬಿಡಿಸುವಾಗ ಮಗಳು ಗೀತಾ ಮೂರು ತಾಸು ಹಣತೆ ಹಿಡಿದು ನಿಂತಿರಬೇಕಾಗಿತ್ತಂತೆ. ಈ ಚಿತ್ರ ಬಿಡಿಸಿದ್ದು ರಾಜಾ ರವಿವರ್ಮ ಎಂದು ಕೆಲವರು ತಪ್ಪಾಗಿ ಭಾವಿಸಿರುವುದೂ ಇದೆ.

ಋಷ್ಯಶೃಂಗ

ಋಷಿ ವಿಭಂದಕನ ಮಗ ಈತ. ಈ ಯುವಕನಲ್ಲಿ ಅಪಾರವಾದ ಆಧ್ಯಾತ್ಮಿಕ ಶಕ್ತಿ ಇತ್ತು. ಅಂಗ ರಾಜ್ಯ ಬರದಿಂದ ನಲುಗಿದ್ದಾಗ ಅಲ್ಲಿ ಮಳೆಯಾಗಲು ಸಹಾಯ ಮಾಡಿದವ ಋಷ್ಯಶೃಂಗ. ನಂತರ, ದಶರಥನು ಪುತ್ರಕಾಮೇಷ್ಟಿ ಯಾಗ ನಡೆಸಿದಾಗ, ಅದರಲ್ಲಿ ಕೂಡ ಋಷ್ಯಶೃಂಗ ಪಾಲ್ಗೊಂಡಿದ್ದ. ಈ ಯಾಗ ಮಾಡಿದ ನಂತರವೇ ರಾಮ ಜನಿಸಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.