ಬೆಂಗಳೂರು: ‘ಹಾಸ್ಯ ಭಾಷಣ ತರಬೇತಿ ಶಾಲೆಗಳನ್ನು ಸರ್ಕಾರ ಆರಂಭಿಸಬೇಕು’ ಎಂದು ಖ್ಯಾತ ನಗೆ ಭಾಷಣಕಾರ ಗಂಗಾವತಿ ಪ್ರಾಣೇಶ್ ಕೋರಿದರು.

ಪ್ರಜಾವಾಣಿ ಸೆಲೆಬ್ರಿಟಿ ಲೈವ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಾಸ್ಯ ಮಾತುಗಾರಿಕೆ ವೃತ್ತಿಯಾಗಿ ಬೆಳೆದಿದೆ. ನಾವೂ ಇದನ್ನು ವೃತ್ತಿಯಾಗಿಸಿಕೊಂಡು ಬಾಳಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಯುವಕರಿಗೆ ಪ್ರತಿಭೆ ಹಾಗೂ ಆಸಕ್ತಿ ಇದೆ. ಮುಂದಿನ ಪೀಳಿಗೆ ಈ ಕಲೆಗಾರಿಕೆಯನ್ನು ಮುಂದುವರಿಸಬೇಕು. ಅದಕ್ಕಾಗಿ ಹಾಸ್ಯ ಭಾಷಣದ ಆಸಕ್ತರಿಗೆ ತರಬೇತಿ ನೀಡಬೇಕು. ನಾನು ಸಿದ್ಧನಿದ್ದೇನೆ. ನನ್ನ ಮೂಲಕ 14 ಮಂದಿ ತರಬೇತಿ ಪಡೆದು ಬೇರೆ ಬೇರೆ ಕಡೆ ಕಾರ್ಯಕ್ರಮ ಕೊಡುತ್ತಿದ್ದಾರೆ. ಅನೇಕ ಸಂಪನ್ಮೂಲ ವ್ಯಕ್ತಿಗಳೂ ಸಿದ್ಧರಿದ್ದಾರೆ. ಸರ್ಕಾರವೇ ಇದಕ್ಕೊಂದು ಅಕಾಡೆಮಿಕ್ ರೂಪ ಕೊಟ್ಟರೆ ಹೆಚ್ಚು ಜನರಿಗೆ ತರಬೇತಿ ಸಿಗುತ್ತದೆ.’ ಎಂದರು.

‘ಹಾಸ್ಯ ಭಾಷಣ ಮಾಡಬೇಕು ಎನ್ನುವವರಿಗೆ ಆತ್ಮವಿಶ್ವಾಸ ಮುಖ್ಯ. ತರಬೇತಿ ಪಡೆದ ಮೇಲೆ ಒಬ್ಬರೇ ಹೋಗಿ ಕಾರ್ಯಕ್ರಮ ನೀಡುವಂತಾಗಬೇಕು. ಹಾಗಾದಾಗ ವ್ಯಕ್ತಿಗತವಾಗಿ ಬೆಳೆಯಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.