ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಮಹತ್ವವನ್ನು ಆದ್ಯತೆಯಾಗಿ ಪರಿಗಣಿಸಿ ಮೆಟ್ರೊ ಮತ್ತು ಉಪನಗರ ರೈಲುಗಳ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡುತ್ತಿರುವುದು ಸಂತೋಷದಾಯಕ ವಿಷಯ. ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಮತ್ತು ಹೊಸ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಯೋಜನೆಗಳು ಅತ್ಯಂತ ಸಕಾಲಿಕ ಮತ್ತು ಸ್ವಾಗತಾರ್ಹ. ರಾಜ್ಯ ಹಣಕಾಸು ಆಯೋಗದಿಂದ ನಗರಗಳ ಅಭಿವೃದ್ಧಿಗೆ ನಿಧಿಯ ವಿಕೇಂದ್ರೀಕರಣ ಕಾರ್ಯರೂಪಕ್ಕೆ ಬರಬಹುದು ಎಂಬ ನಿರೀಕ್ಷೆ ಇತ್ತು. ಇಂಥ ಮಹತ್ವದ ವಿಚಾರಕ್ಕೆ ಆದ್ಯತೆ ನೀಡದೇ ಇರುವುದು ನಿರಾಸೆಯನ್ನು ಉಂಟು ಮಾಡಿದೆ.

ಬಜೆಟ್‌ನಲ್ಲಿ ಎಲ್ಲ ಸಾರಿಗೆ ನಿಗಮಗಳಿಗೆ ಒಟ್ಟು ₹4,000 ಕೋಟಿ ನೀಡಿರುವುದೇ ಬಹಳ ದೊಡ್ಡ ಉಪಕ್ರಮ. ಬಿಎಂಟಿಸಿ ಬಸ್ ಬೆಂಗಳೂರಿನ ಜೀವನಾಡಿಯಾಗಿದ್ದು, ಇಂದಿನ ಬಜೆಟ್ ಈ ಜೀವಸೆಲೆಗೆ ಆಮ್ಲಜನಕ ನೀಡಿದೆ. ಬಿಎಂಟಿಸಿ ದೈನಂದಿನ ಪ್ರಯಾಣಿಕರ ಸಂಖ್ಯೆಯು ದಿನಕ್ಕೆ 30 ಲಕ್ಷದಿಂದ 40 ಲಕ್ಷಗಳಿಗೆ ಏರಿದ್ದರಿಂದ ಶಕ್ತಿ ಯೋಜನೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಯೋಜನೆ ಯಶಸ್ವಿಗೊಳ್ಳಬೇಕಿದ್ದರೆ ಅದಕ್ಕೆ ಸರಿಯಾಗಿ ಅನುದಾನ ಒದಗಿಸಬೇಕು. ಇಲ್ಲದೇ ಇದ್ದರೆ ಸಾರಿಗೆ ನಿಗಮಗಳನ್ನು ನಷ್ಟದ ಕೂಪಕ್ಕೆ ದೂಡಿದಂತಾಗುತ್ತದೆ. ಈಗ ಅನುದಾನವನ್ನು ಘೋಷಿಸಿರುವುದು ಆ ಅಪಾಯವನ್ನು ತಪ್ಪಿಸಿದೆ. ಎಲ್ಲ ನಿಗಮಗಳು ನಾಗರಿಕರ ಸೇವೆಗಾಗಿ ಹೆಚ್ಚಿನ ಬಸ್‌ಗಳನ್ನು ಸೇರ್ಪಡೆಯನ್ನು ಮತ್ತು ಸೇವೆಯ ಗುಣಮಟ್ಟ ಸುಧಾರಣೆಯನ್ನು ಈ ಕ್ರಮವು ಖಾತರಿಪಡಿಸಿದೆ.

ಶ್ರೀನಿವಾಸ ಅಲವಿಲ್ಲಿ, ನಾಗರಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.