ನವದೆಹಲಿ: ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಈ ಸಾಲಿನ ಬಜೆಟ್‌ನಲ್ಲಿ ₹13,000 ಕೋಟಿ ಅನುದಾನ ನೀಡಲಾಗಿದೆ. 2023–24ನೇ ಸಾಲಿನ ಬಜೆಟ್ ಅನುದಾನಕ್ಕೆ ಹೋಲಿಸಲಿದರೆ ಈ ವಲಯಕ್ಕೆ ಈ ಬಾರಿ ಶೇ 70ರಷ್ಟು ಅನುದಾನವನ್ನು ಹೆಚ್ಚಿಲಾಗಿದೆ.

ಕಳೆದ ಬಜೆಟ್‌ನಲ್ಲಿ ₹7,605 ಕೋಟಿ ಅನುದಾನ ನೀಡಲಾಗಿತ್ತು.

ಈ ಅನುದಾನದಲ್ಲಿ, ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಮೀಸಲಿರುವ ಏಕಲವ್ಯ ಮಾದರಿ ವಸತಿ ಶಾಲೆ (ಎಎಂಆರ್‌ಎಸ್) ನಿರ್ಮಾಣಕ್ಕಾಗಿ ₹6,399 ಕೋಟಿ, ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಗೆ ₹1,000 ಕೋಟಿ ಹಂಚಿಕೆ ಮಾಡಲಾಗಿದೆ.

ಕಳೆದ ಸಾಲಿನ ಬಜೆಟ್‌ನಲ್ಲಿ ಕ್ರಮವಾಗಿ ₹2,471ಕೋಟಿ ಮತ್ತು ₹300 ಕೋಟಿ ಅನುದಾನ ನೀಡಲಾಗಿತ್ತು.

ಬುಡಕಟ್ಟು ಸಂಶೋಧನಾ ಸಂಸ್ಥೆಗೆ ₹111 ಕೋಟಿ ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ ₹50 ಕೋಟಿ ಮೀಸಲಿಡಲಾಗಿತ್ತು.

‘ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಶಿಷ್ಯವೃತ್ತಿ ಮತ್ತು ವಿದ್ಯಾರ್ಥಿ ವೇತನ’ಕ್ಕೆ ₹165 ಕೋಟಿ ಹಂಚಿಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.