ಬೆಂಗಳೂರು: ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಲವು ಘೋಷಣೆಗಳ ಮೂಲಕ ರಾಜ್ಯದ ಮತದಾರರ ಮನಗೆಲ್ಲಲು ಯತ್ನಿಸಿದ್ದಾರೆ.

ಈ ಸಲದ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ ಹೊಸ ಯೋಜನೆ ಅಥವಾ ಘೋಷಣೆಯ ಮಾಹಿತಿ ಇಲ್ಲಿದೆ...

* ರೈತರಿಗಾಗಿ 'ಭೂ ಸಿರಿ' ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಇದರಡಿಯಲ್ಲಿ ₹10 ಸಾವಿರ ಹೆಚ್ಚುವರಿ ಸಹಾಯಧನ ನೀಡಲಾಗುವುದು.

LIVE BLOG: ರಾಜ್ಯ ಬಜೆಟ್–2023: ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

* 'ರೈತ ಸಿರಿ' ಯೋಜನೆ ಅಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.

* 'ವಿದ್ಯಾವಾಹಿನಿ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ ₹ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗುವುದು.

* 'ಗೃಹಿಣಿ ಶಕ್ತಿ' ಯೋಜನೆ ಜಾರಿ ಮಾಡಿ, ₹ 46,278 ಕೋಟಿ ಅನುದಾನ ನೀಡಲಾಗುವುದು.

* 'ನಮ್ಮ ನೆಲೆ' ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ ನೀಡಲಾಗುವುದು.

* 'ಸಹ್ಯಾದ್ರಿ ಸಿರಿ' ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು 'ಒಂದು ತೋಟ ಒಂದು ಬೆಳೆ' ಯೋಜನೆಗೆ ₹ 10 ಕೋಟಿ ಮೀಸಲಿಡಲಾಗುವುದು.

* ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ 'ಮತ್ಸ್ಯ ಸಿರಿ' ಯೋಜನೆ ಜಾರಿಗೆ ತರಲಾಗುವುದು.

Karnataka Budget 2023 Highlights: ರೈತರಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ

* 'ಮುಖ್ಯಮಂತ್ರಿ ವಿದ್ಯಾ ಶಕ್ತಿ' ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.

* 'ಸಹಸ್ರ ಸರೋವರ' ಯೋಜನೆ ಅಡಿ ರಾಜ್ಯದ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿ ಮಾಡಲಾಗುವುದು.

* 'ಬದುಕುವ ದಾರಿ' ಯೋಜನೆಯಡಿ ಯುವಜನರಿಗೆ 3 ತಿಂಗಳು ಐಟಿಐ ತರಬೇತಿ ನೀಡಲಾಗುವುದು

* ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು 'ಯುವಸ್ನೇಹಿ' ಯೋಜನೆಯಡಿ ₹ 2 ಸಾವಿರ ನೀಡಲಾಗುವುದು.

* ₹ 100 ಕೋಟಿ ರೂ. ವೆಚ್ಚದಲ್ಲಿ ಶಾಲೆಗೆ ತೆರಳಲು 'ಮಕ್ಕಳ ಬಸ್' ಯೋಜನೆ ರೂಪಿಸಲಾಗುವುದು.

* 'ಜಲನಿಧಿ' ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ 'ಪುಣ್ಯ ಕೋಟಿ ದತ್ತು ಯೋಜನೆ' ಹಣಕಾಸು ನೆರವು ನಿಡಲಾಗುವುದು.

* 'ಸ್ವಚೇತನ' ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.