ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget Highlights | 3 ಲಕ್ಷ ಮನೆ ನಿರ್ಮಾಣದ ಗುರಿ: ಸಿದ್ದರಾಮಯ್ಯ

Published : 16 ಫೆಬ್ರುವರಿ 2024, 3:35 IST
Last Updated : 16 ಫೆಬ್ರುವರಿ 2024, 3:35 IST
ಫಾಲೋ ಮಾಡಿ
Comments
ಬಜೆಟ್‌ ಮೊತ್ತ 3.71 ಲಕ್ಷ ಕೋಟಿ
2024–25ನೇ ಸಾಲಿನ ಬಜೆಟ್‌ ಮೊತ್ತ ₹ 3,71, 383 ಕೋಟಿಯಾಗಿದೆ. ರಾಜಸ್ವ ವೆಚ್ಚ ₹ 2,90,531, ಬಂಡವಾಳ ವೆಚ್ಚ ₹ 55,877 ಹಾಗೂ ಸಾಲ ಮರುಪಾವತಿ ₹ 24,974 ಕೋಟಿ
'ಗ್ಯಾರಂಟಿ ಯೋಜನೆಗಳನ್ನು ಜಗತ್ತೇ ಮೆಚ್ಚಿದೆ'
ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ₹ 50,000 ರಿಂದ ₹ 55,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳ ಲಾಭ ರಾಜ್ಯದ ಜನರಿಗೆ ಲಭಿಸುತ್ತಿದೆ. ಈ ಯೋಜನೆಗಳನ್ನು ವಿರೋಧ ಪಕ್ಷಗಳು 'ಬಿಟ್ಟಿ ಭಾಗ್ಯಗಳು' ಎಂದು ಅಪಹಾಸ್ಯ ಮಾಡಿದ್ದವು. ಆದರೆ, ನಮ್ಮ ಕಲ್ಯಾಣ ಯೋಜನೆಗಳನ್ನು ಇಡೀ ಜಗತ್ತೇ ಮೆಚ್ಚಿದೆ.
ಅನ್ನಭಾಗ್ಯ ಯೋಜನೆ: 2024ರ ಜನವರಿ ವರೆಗೆ 4.02 ಕೋಟಿ ಫಲಾನುಭವಿಗಳಿಗೆ ₹ 4,595 ಕೋಟಿ ವರ್ಗಾವಣೆ
ಕೇಂದ್ರದಿಂದ ₹ 67,000 ಕೋಟಿ ಬಾಕಿ
ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣ ತೆರಿಗೆ ಪಾವತಿಯಾಗುತ್ತಿದೆ. ಆದರೂ, ರಾಜ್ಯದ ಪಾಲನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಕೇಂದ್ರವು ರಾಜ್ಯಕ್ಕೆ ನೀಡಬೇಕಿದ್ದ ₹ 67,000 ಕೋಟಿ ಬಾಕಿ ಉಳಿಸಿಕೊಂಡಿದೆ.
80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ಅನ್ನ–ಸುವಿಧಾ ಯೋಜನೆ ಜಾರಿ
₹ 2.32 ಲಕ್ಷ ಕೋಟಿ ಹೂಡಿಕೆ
2023ರ ಸೆಪ್ಟೆಂಬರ್‌ ವರೆಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಕರ್ನಾಟಕದಲ್ಲಿ ₹ 2.32 ಲಕ್ಷ ಕೋಟಿ ಹೂಡಿಕೆಯಾಗಿದೆ.
₹ 27,000 ಕೋಟಿ ಬೆಳೆ ಸಾಲ
ಪ್ರಸಕ್ತ ಸಾಲಿನಲ್ಲಿ 36 ಲಕ್ಷಕ್ಕೂ ಹೆಚ್ಚು ರೈತರಿಗೆ ₹ 27,000 ಕೋಟಿ ಬೆಳ ಸಾಲ ನೀಡಲಾಗುವುದು. ಹಿಂದಿನ ಅವಧಿಯ ಬೆಳೆ ಸಾಲ ಮನ್ನಾ ಬಾಕಿ ₹ 132 ಕೋಟಿಯನ್ನು ಡಿ.ಸಿ.ಸಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಲಾಗುವುದು.
ಶಾಲಾ–ಕಾಲೇಜುಗಳ ದುರಸ್ತಿಗೆ ₹ 850 ಕೋಟಿ
ಶಾಲಾ ಕಾಲೇಜುಗಳು ದುರಸ್ತಿ, ನಿರ್ಮಾಣದಂತಹ ಕಾರ್ಯಗಳಿಗೆ ಪ್ರಸಕ್ತ ಸಾಲಿನಲ್ಲಿ ₹ 850 ಕೋಟಿ ಅನುದಾನ ನಿಗದಿಪಡಿಸಲಾಗಿದೆ. 2000 ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಲಾಗುವುದು. ರಾಜ್ಯದ ಪದವಿ ಪೂರ್ವ ಕಾಲೇಜುಗಳ 20,000 ವಿದ್ಯಾರ್ಥಿಗಳಿಗೆ ₹ 10 ಕೋಟಿ ವೆಚ್ಚದಲ್ಲಿ NEET / JEE/ CET ತರಬೇತಿ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇನು ವಿಶ್ವ ವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹ 500 ಅನುದಾನ
ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಗೃಹಲಕ್ಷ್ಮೀ ಯೋಜನೆಗೆ ₹ 28,608 ಕೋಟಿ ನಿಗದಿ. ಅಂಗನವಾಡಿ ಕಾರ್ಯಕರ್ತೆಯರಿಗೆ ₹ 90 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್ ವಿತರಣೆ. ₹ 200 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ನಿರ್ಮಾಣ. ಮೈತ್ರಿ ಯೋಜನೆ ಫಲಾನುಭವಿಗಳ ಮಾಸಾಶನ ₹ 1,200ಕ್ಕೆ ಏರಿಕೆ. ದೇವದಾಸಿಯರ ಮಾಸಾಶನ ₹ 2,000ಕ್ಕೆ ಹೆಚ್ಚಳ
2024–25ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ
ಸಮಾಜ ಕಲ್ಯಾಣ
ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಸತಿ ಶಾಲೆಗಳು ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ₹ 2,710 ಕೋಟಿ ಅನುದಾನ. ಈ ವರ್ಗದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ ₹ 100ಕ್ಕೆ ಏರಿಕೆ.
ವಕ್ಫ್‌ ಆಸ್ತಿ ರಕ್ಷಣೆಗೆ ₹ 100 ಕೋಟಿ
ವಕ್ಫ್‌ ಆಸ್ತಿ ರಕ್ಷಣೆ ಮತ್ತು ಅಭಿವೃದ್ಧಿಗೆ ₹ 100 ಕೋಟಿ. ಪ್ರಮುಖ ಧಾರ್ಮಿಕ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ₹ 20 ಕೋಟಿ. ಮಂಗಳೂರಿನ ಹಜ್‌ ಭವನ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ. ಜೈನ ಧಾರ್ಮಿಕ ಕೇಂದ್ರ ಅಭಿವೃದ್ಧಿಗೆ ₹ 50 ಕೋಟಿ ಅನುದಾನ. ಕ್ರಿಶ್ಚಿಯನ್ನರ ಅಭಿವೃದ್ಧಿಗೆ ₹ 200 ಕೋಟಿ ಅನುದಾನ.
ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ವಸತಿ: 10 ಜಿಲ್ಲೆಗಳಲ್ಲಿ ₹ 100 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯ
ಬಳ್ಳಾರಿಯ ಸಂಡೂರಿನಯಲ್ಲಿ ಸ್ಕಿಲ್ ಅಕಾಡೆಮಿ
ಪ್ರಗತಿಪಥ
ಪ್ರಗತಿಪಥ ಯೋಜನೆಯಡಿ ₹ 5,200 ಕೋಟಿ ವೆಚ್ಚದಲ್ಲಿ 189 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳಲ್ಲಿ 9,450 ಕಿ.ಮೀ. ಉದ್ದದ ರಸ್ತೆ ಜಾಲ ಅಭವೃದ್ಧಿ
ನರೇಗಾ ಯೋಜನೆಯಡಿ 16 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ
ಕಲ್ಯಾಣಪಥ
ಕಲ್ಯಾಣಪಥ ಯೋಜನೆಯಡಿ ₹ 1,000 ಕೋಟಿ ವೆಚ್ಚದಲ್ಲಿ 38 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳಲ್ಲಿ 1,150 ಕಿ.ಮೀ. ಉದ್ದದ ರಸ್ತೆ ಜಾಲ ಅಭವೃದ್ಧಿ
50 ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್‌ ದೀಪ ಅಳವಡಿಕೆ
ಜೀತ ಪದ್ದತಿಯಿಂದ ಬಿಡುಗಡೆಗೊಂಡವರಿಗೆ ಮಾಸಿಕ ಪ್ರೋತ್ಸಾಹಧನ ₹ 2,000ಕ್ಕೆ ಏರಿಕೆ
ಆರೋಗ್ಯ
ಏಳು ಜಿಲ್ಲೆಗಳಲ್ಲಿ ಕ್ರಿಟಿಕಲ್‌ ಕೇರ್‌ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ₹ 187 ಕೋಟಿ. ಏಳು ತಾಲ್ಲೂಕುಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ ₹ 280 ಕೋಟಿ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉನ್ನತೀಕರಣಕ್ಕೆ ₹ 150 ಕೋಟಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆಸ್ಪತ್ರೆ ಸ್ಥಾಪನೆಗೆ ₹ 221 ಕೋಟಿ. ₹ 20 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಡೇ–ಕೇರ್‌ ಕಿಮೋಥರಪಿ ಕೇಂದ್ರ ಸ್ಥಾಪನೆ.
ಇ.ಎಸ್‌.ಐ ಯೋಜನೆ: ₹ 311 ಕೋಟಿ ವೆಚ್ಚದಲ್ಲಿ ವಿವಿಧ ಸೇವೆ, ಸೌಲಭ್ಯ
ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗೆ ₹ 400 ಕೋಟಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ₹ 130 ಕೋಟಿ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT