ನವದೆಹಲಿ: ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಹೊಣೆಗಾರಿಕೆ ಮತ್ತು ದೂರದೃಷ್ಟಿ ಎರಡೂ ಕಾಣೆಯಾಗಿದೆ ಎಂದಿರುವ ಕಾಂಗ್ರೆಸ್, ಕಳೆದ ಹತ್ತು ವರ್ಷಗಳಲ್ಲಿ ನೀಡಿದ್ದ ಭರವಸೆಗಳಲ್ಲಿ ಈಡೇರಿದ್ದೆಷ್ಟು ಎಂದು ಪ್ರಶ್ನಿಸಿದೆ.

‘ಇದು ಶ್ರೀಮಂತರ ಸರ್ಕಾರ. ಶ್ರೀಮಂತರಿಂದ, ಶ್ರೀಮಂತರಿಗಾಗಿ ಇರುವ ಸರ್ಕಾರ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ. ಹಣಕಾಸು ಸಚಿವರು ಕೇವಲ ಜಿಡಿಪಿ ಬಗ್ಗೆ ಹೇಳಿದರು. ಆದರೆ ತಲಾ ಆದಾಯದ ಬಗ್ಗೆ ಯಾವುದೇ ಪ್ರಸ್ತಾಪಿಸಿಲ್ಲ. ಅವರು ಕೇವಲ ಹಣದುಬ್ಬರದ ಬಗ್ಗೆ ಹೇಳಿದ್ದಾರೆ. ಆದರೆ ಆಹಾರದ ಹಣದುಬ್ಬರ ಈಗ ಶೇ 7.7ರಷ್ಟಿದೆ. ಅದನ್ನು ಉಲ್ಲೇಖಿಸಲು ಸೋತಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೆಮ್ಮೆಯ ಪ್ರತೀಕವಾಗಬಾರದು’ ಎಂದು ಬಜೆಟ್ ಅನ್ನು ವಿಶ್ಲೇಷಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಳೆದ 10 ವರ್ಷಗಳಲ್ಲಿ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ ಎಂದು ಮೋದಿ ಸರ್ಕಾರವನ್ನು ಕೇಳಬಯಸುತ್ತೇವೆ. ಜನರಿಗೆ ಕೇವಲ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿದ್ದೀರಿ. ಹೆಸರುಗಳನ್ನು ಬದಲಾಯಿಸಿ ಅದೇ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ. ಆದರೆ ಹಳೆಯ ಭರವಸೆಗಳೆಲ್ಲ ಏನಾದವು ಎನ್ನುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಹೀಗಾದರೆ ಜನರಿಗೆ ಹೊಸದಾಗಿ ತೋರಿಸಿದ ಕನಸುಗಳು ಈಡೇರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಬಡವ ಮತ್ತು ಮಧ್ಯಮವರ್ಗದವರಿಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು ಅದು ಸುಳ್ಳಾಗಿದೆ’ ಎಂದಿದ್ದಾರೆ.
.Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ.Video | ಕೇಂದ್ರ ಮಧ್ಯಂತರ ಬಜೆಟ್: ಯಾವ ಸಚಿವಾಲಯಕ್ಕೆ ಎಷ್ಟು? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.