ನವದೆಹಲಿ: ‘ಸರ್ವರಿಗೂ ಸೂರು’ ಗುರಿಯ ಸಾಕಾರ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶ ಸಾಧನೆಗೆ ₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಗೆ ನೀಡಿದ್ದ ರಿಯಾಯಿತಿಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಮಾರ್ಚ್ 31, 2020 ಅಥವಾ ಅದಕ್ಕೂ ಮೊದಲು ಮಂಜೂರು ಮಾಡಲಾಗಿರುವ ಗೃಹ ಸಾಲಗಳಿಗೆ ಅನ್ವಯಿಸಿ ಈ ರಿಯಾಯಿತಿ ಸೌಲಭ್ಯವು ಸಿಗಲಿದೆ.

ಕೈಗೆಟುಕುವ ದರದ ವಸತಿಯನ್ನು ಖರೀದಿಸಲು ಪಡೆಯಲಾಗಿರುವ ಗೃಹಸಾಲಕ್ಕೆ ಪಾವತಿಸಿದ ಬಡ್ಡಿಗೆ ಸಂಬಂಧಿಸಿ ₹ 1.5 ಲಕ್ಷದವರೆಗೂ ಹೆಚ್ಚುವರಿ ತೆರಿಗೆ ರಿಯಾಯಿತಿ ನೀಡುವುದು ಯೋಜನೆಯ ಉದ್ದೇಶ. ಅಂತೆಯೇ, ಇಂಥ ವಸತಿ ಯೋಜನೆಗಳಿಗೆ ಸಂಬಂಧಿಸಿ ರಿಯಲ್ ಎಸ್ಟೇಟ್ ಸಂಸ್ಥೆಗಳು ಗಳಿಸಿದ ಲಾಭಾಂಶದ ಮೇಲೂ ಒಂದು ವರ್ಷದ ಅವಧಿಗೆ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾರ್ಚ್ 31, 2020ರ ಒಳಗೆ ಅನುಮೋದನೆಯನ್ನು ಪಡೆಯುವಂತಹ ವಸತಿ ಯೋಜನೆಗಳಿಗೆ ಈ ತೆರಿಗೆ ರಿಯಾಯಿತಿ ಅವಧಿ ವಿಸ್ತರಣೆ ಸೌಲಭ್ಯವು ಅನ್ವಯವಾಗಲಿದೆ.

₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಇನ್ನೊಂದು ವರ್ಷ ಮುಂದುವರಿದಿರುವ ಕಾರಣ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಪಡೆದುಕೊಳ್ಳಲಿದೆ ಎನ್ನುವುದು ಸರ್ಕಾರದ ಆಶಯವಾಗಿದೆ. ‘ಬಡವರು ಮನೆ ಕಟ್ಟಿಕೊಳ್ಳಲು ಈ ರಿಯಾಯಿತಿ ನೆರವು ನೀಡಬಹುದು. ಆದರೆ, ರಿಯಲ್ ಎಸ್ಟೇಟ್ ಉದ್ಯಮದ ಒಟ್ಟಾರೆ ಪ್ರಗತಿಗೆ ಯಾವುದೇ ಕೊಡುಗೆಗಳು ಇಲ್ಲ’ ಎಂಬುದು ಉದ್ಯಮಿಗಳ ವಾದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.