ವಾಷಿಂಗ್ಟನ್: ‘ಹಾರ್ಲೆ ಡೇವಿಡ್‌ಸನ್ ಮೋಟರ್‌ಸೈಕಲ್‌ಗೆ ಭಾರತ ವಿಧಿಸುತ್ತಿರುವ ಶೇ 50ರಷ್ಟು ಆಮದು ಸುಂಕ ಸ್ವೀಕಾರಾರ್ಹವಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಉತ್ತಮ ಸ್ನೇಹಿತರು. ಆದರೆ ಅವರೂ ನಮ್ಮಲ್ಲಿ ತಯಾರಾಗುವ ಮೋಟರ್‌ಸೈಕಲ್‌ಗೆ ಶೇ 100ರಷ್ಟು ತೆರಿಗೆ ವಿಧಿಸುತ್ತಿ
ದ್ದರು. ಒಂದು ಪೋನ್ ಕರೆ ಮಾಡಿದ ಬಳಿಕಮೋದಿ ಅವರು ಆಮದು ಸುಂಕವನ್ನು ಶೇ 50ಕ್ಕೆ ತಗ್ಗಿಸಿದ್ದಾರೆ. ಇದನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವು ಶೇ 50ರಷ್ಟು ಪಾವತಿಸುತ್ತಿದ್ದರೆ ಅದಕ್ಕೆ ಪ್ರತಿಯಾಗಿ ನಮಗೆ ಏನೂ ಲಾಭ ಸಿಗುತ್ತಿಲ್ಲ. ಮೋಟರ್‌ಸೈಕಲ್‌ಗಳ ಮೇಲಿನ ಆಮದು ಸುಂಕ ಸಮಸ್ಯೆ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ’ ಎಂದು ಹೇಳಿದ್ದಾರೆ.

‘ನಾವು ಆರ್ಥಿಕವಾಗಿ ಪ್ರಭಲರ
ಲ್ಲದೇ ಹೋಗಿದ್ದರೆ, ನಮ್ಮಲ್ಲಿ ಸಂಪನ್ಮೂಲ
ಗಳು ಇಲ್ಲದೇ ಇದ್ದಿದ್ದರೆ ಯಾರೂ ನಮ್ಮನ್ನು ಪರಿಗಣಿಸುತ್ತಿರಲಿಲ್ಲ. ಬೇರೆ
ದೇಶಗಳ ಪಾಲಿಗೆ ಅಮೆರಿಕ ಖಜಾನೆ
ಯಾಗಿದೆ. ಹಾಗಾಗಿ ಎಲ್ಲರೂ ದೋಚಲು ಹವಣಿಸುತ್ತಿದ್ದಾರೆ. ಬಹಳ ಕಾಲದಿಂದಲೂ ಇದನ್ನೇ ಮುಂದು
ವರಿಸಿಕೊಂಡು ಬರುತ್ತಿದ್ದಾರೆ’ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.