ಮುಂಬೈ: ದೇಶೀಯ ವಿಮಾನಯಾನ ಸಂಸ್ಥೆ ಆಕಾಸಾ ಏರ್ನಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದೆ.

ಮೊದಲಿಗೆ ಮುಂಬೈನಿಂದ ದೋಹಾ ನಡುವೆ ಕಂಪನಿಯ ವಿಮಾನಗಳು ಸಂಚರಿಸಲಿವೆ.

‘ಅಲ್ಲದೆ ಕುವೈತ್, ಜೆಡ್ಡಾ ಹಾಗೂ ರಿಯಾದ್ ಮಾರ್ಗದಲ್ಲಿ ವಿಮಾನಗಳ ಹಾರಾಟಕ್ಕೆ ಅನುಮತಿ ಸಿಕ್ಕಿದೆ. ಕೆಲವೇ ತಿಂಗಳುಗಳಲ್ಲಿ ಕ್ಷಿಪ್ರಗತಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಸೇವೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು’ ಎಂದು ಕಂಪನಿ ತಿಳಿಸಿದೆ.

ದೋಹಾಗೆ ತೆರಳುವ ವಿಮಾನದ ಸಮಯಕ್ಕೆ ಅನುಗುಣವಾಗಿ ಪ್ರಯಾಣಿಕರು ತೆರಳಲು ಅನುಕೂಲವಾಗುವಂತೆ ಅಹಮದಾಬಾದ್, ಗೋವಾ, ವಾರಾಣಸಿ, ಲಖನೌ, ಬೆಂಗಳೂರು, ಕೊಚ್ಚಿ ಮತ್ತು ನವದೆಹಲಿಯಿಂದ ಮುಂಬೈಗೆ ವಿಮಾನಗಳ ಸಂಪರ್ಕ ಸೇವೆ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ದೇಶೀಯವಾಗಿ ಮುಂಬೈ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಹಾಗೂ ಇತರೆ ನಗರಗಳಿಂದ ಆಕಾಸಾ ಏರ್ ಕಾರ್ಯಾಚರಣೆ ನಡೆಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.