ನವದೆಹಲಿ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ₹14.5 ಕೋಟಿ ಮೌಲ್ಯದ 10 ಸಾವಿರ ಚದರ ಅಡಿ ಜಾಗ ಖರೀದಿಸಿದ್ದಾರೆ.

ಈ ಜಾಗವನ್ನು ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಅಭಿನಂದನ್ ಲೋಧಾ ಹೌಸ್ ಅಭಿವೃದ್ಧಿಪಡಿಸಲಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಈ ಒಪ್ಪಂದದ ಕುರಿತು ಸಂಸ್ಥೆಯು ಖಚಿತಪಡಿಸಿದೆ.

‘ನನ್ನ ಹೃದಯದಲ್ಲಿ ಅಯೋಧ್ಯೆ ವಿಶೇಷ ಸ್ಥಾನ ಹೊಂದಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿಯಲ್ಲಿ ನನ್ನ ಮನೆ ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಬಚ್ಚನ್ ಹೇಳಿದ್ದಾರೆ.

ಜನವರಿ 22ರಂದು ರಾಮ ಮಂದಿರದ ಪ್ರತಿಷ್ಠಾಪನೆಯ ದಿನ ‘ದಿ ಸರಯೂ’ ಯೋಜನೆ ಪ್ರಾರಂಭಿಸಲು ಅಭಿನಂದನ್ ಲೋಧಾ ಹೌಸ್ ಯೋಜಿಸಿದೆ. 45 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಐಷಾರಾಮಿ ಯೋಜನೆಯಡಿ ಹೋಟೆಲ್ ಕೂಡ ತಲೆಎತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.