ಜೆಮ್ಶೆಡ್ಪುರ: ‘ಈಗಾಗಲೇ, ಅಮೆರಿಕದ ಮಾರುಕಟ್ಟೆಗೆ ಅಮೂಲ್ ಪ್ರವೇಶಿಸಿದ್ದು, ಯಶಸ್ವಿಯಾಗಿದೆ. ಶೀಘ್ರವೇ, ಐರೋಪ್ಯ ದೇಶಗಳ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ’ ಎಂದು ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.

ಶನಿವಾರ ನಡೆದ ಕ್ಷೀರ ಕ್ರಾಂತಿ ಹರಿಕಾರ ಡಾ.ವರ್ಗಿಸ್ ಕುರಿಯನ್ ಅವರ 11ನೇ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಾರತವು ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಮುಂದಿನ ವರ್ಷಗಳಲ್ಲಿ ವಿಶ್ವದ ಮೂರನೇ ಒಂದು ಭಾಗದಷ್ಟು ಹಾಲನ್ನು ಉತ್ಪಾದಿಸಲಿದೆ ಎಂದರು.

‘ಡೇರಿ ಎನ್ನುವುದು ಕೇವಲ ವ್ಯಾಪಾರವಲ್ಲ. ಅದು ಗ್ರಾಮೀಣ ಭಾರತದ ಜೀವನಾಡಿ’ ಎಂದು ಹೇಳಿದರು.

ಅಮೂಲ್ ಪ್ರತಿನಿತ್ಯ 310 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ರೈತರಿಂದ ಸಂಗ್ರಹಿಸುತ್ತದೆ. ದೇಶದಾದ್ಯಂತ 107 ಡೇರಿ ಘಟಕ ಮತ್ತು 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ. ವಾರ್ಷಿಕ ವಹಿವಾಟು ₹80 ಸಾವಿರ ಕೋಟಿ ದಾಟಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 36 ಲಕ್ಷ ರೈತರು ಇದ್ದಾರೆ. ವಾರ್ಷಿಕವಾಗಿ 2,200 ಕೋಟಿ ಹಾಲಿನ ಪ್ಯಾಕೆಟ್ಗಳು ಮಾರಾಟವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.